2 ಅರಸುಗಳು ಸುತ್ತಲಿನ ಪರಿಸ್ಥಿತಿಗಳು – ಯೆಹೆಜ್ಕೇಲನು – ಯೆರೆಮಿಯ – ದಾನಿಯೇಲನು
70 ವರ್ಷದ ಸೆರೆ ಮತ್ತು ಪ್ರವಾದನೆಗಳು

ಭಾಗ 1

ಇತಿಹಾಸ ಪರಿಚಯ (ರಸಪ್ರಶ್ನೆಯಲ್ಲಿ ಸೇರಿಸಲಾಗಿಲ್ಲ)

ಸೊಲೊಮೋನ ರಾಜನ ಮರಣದ ನಂತರ, ಇಸ್ರಾಯೇಲ ದೇಶವು ವಿಭಜನೆಯಾಯಿತು. 12ರಲ್ಲಿ 10 ಗೋತ್ರದವರು ತಮ್ಮದೇ ರಾಜರೊಂದಿಗೆ ಪ್ರತ್ಯೇಕ ದೇಶವನ್ನು ಸ್ಥಾಪಿಸಿದರು. ಈ 10 ಉತ್ತರ ಗೋತ್ರದವರು ತಮ್ಮ ದೇವರಾದ ಕರ್ತನಿಂದ ದೂರ ಹೋದರು. ಹಲವಾರು ಶತಮಾನಗಳ ನಂತರ, ದೇವರು ಅಶ್ಶೂರಿನ ದೇಶವನ್ನು ಅವರ ವಿರುದ್ಧ ಹೋರಾಡಲು ಕಳುಹಿಸಿದನು. ಕ್ರಿ.ಪೂ.722ರಲ್ಲಿ 10 ಗೋತ್ರ ಜನಾಂಗದವರು ಅಶ್ಶೂರಿಯಾದಲ್ಲಿ ಸೆರೆಯಾಗಿ ಒಯ್ಯಲ್ಪಟ್ಟರು.
ಆ ಸಮಯದಲ್ಲಿ, ದೇವರು ದಕ್ಷಿಣದ ಎರಡು ಗೋತ್ರ ಜನಾಂಗವನ್ನು ತೆಗೆದುಹಾಕಲಿಲ್ಲ. ಈ ಎರಡು ಗೋತ್ರ ಜನಾಂಗದವರು ಯೂದಾ ಎಂಬ ದೇಶವನ್ನು ರಚಿಸಿದರು. ಆದರೆ ಮುಂದಿನ 100 ವರ್ಷಗಳಲ್ಲಿ, ಯೆಹೂದದ ಜನರು ಬಹಳ ದುಷ್ಟರಾದರು. ಅವರು 10 ಗೋತ್ರ ಜನಾಂಗದವರಂತೆ ಕೆಟ್ಟವರಾದರು, ಅಥವಾ ಇನ್ನೂ ಕೆಟ್ಟವರಾದರು.
ಯೆಹೆಜ್ಕೇಲನು ಯೆಹೂದವನ್ನು ಇಸ್ರಾಯೇಲ್ಯರು ಎಂದು ಉಲ್ಲೇಖಿಸುತ್ತಾನೆ. ಯೆಹೆಜ್ಕೇಲನ ಜೀವನದಲ್ಲಿ, ಯೆಹೂದವು ಇಸ್ರಾಯೇಲ ಎಂದು ಕರೆಯಲ್ಪಡುವ ಮೂಲ ರಾಷ್ಟ್ರದಲ್ಲಿ ಉಳಿದಿದೆ. ಆದರೆ ಪುಸ್ತಕದಲ್ಲಿನ ಕೆಲವು ಪ್ರವಾದನೆಗಳು ಎಲ್ಲಾ ಇಸ್ರಾಯೇಲ್ಯರಿಗೆ ಬರೆಯಲ್ಪಟ್ಟಿದೆ.
ದೇವರು ಇಸ್ರಾಯೇಲ ಜೊತೆ ಮಾಡಿಕೊಂಡ ಒಪ್ಪಂದವು ಜನರಿಗೆ ಎಚ್ಚರಿಕೆ ನೀಡಿತು. ಜನರು ದೇವರನ್ನು ಪಾಲಿಸಬೇಕು, ಅವರು ಪಾಲಿಸದಿದ್ದರೆ, ದೇವರು ಅವರನ್ನು ರಾಷ್ಟ್ರಗಳ ನಡುವೆ ದೇಶಭ್ರಷ್ಟಗೊಳಿಸುತ್ತಾನೆ. ಇದು 10 ಗೋತ್ರ ಜನಾಂಗದವರಿಗೆ ಸಂಭವಿಸಿದೆ. ಯೆಹೂದದಲ್ಲಿ ವಾಸಿಸುತ್ತಿದ್ದ ಜನರಿಗೆ ಇದು ಶೀಘ್ರದಲ್ಲೇ ಸಂಭವಿಸುತ್ತದೆ.
ಕ್ರಿ.ಪೂ 598ರಲ್ಲಿ, ಬಾಬಿಲೋನ್ ರಾಜ ನೆಬೂಕದ್ನೆಚ್ಚರನು ಯೆಹೂದದ ಮೇಲೆ ಆಕ್ರಮಣ ಮಾಡಿದನು. ಮೂರು ತಿಂಗಳ ನಂತರ, ಯೆಹೂದದ ಹೊಸ ರಾಜ ಯೆಹೋಯಾಕೀನನು ಯೆರೂಸಲೇಮ ಎಂಬ ನಗರವನ್ನು ನೆಬೂಕದ್ನೆಚ್ಚರನಿಗೆ ಒಪ್ಪಿಸಿದನು.
ಕ್ರಿ.ಪೂ 597ರಲ್ಲಿ, ನೆಬೂಕದ್ನೆಚ್ಚರನು, ಯೆಹೋಯಾಕೀನನ ಕುಟುಂಬ ಮತ್ತು ಜನರ ಮುಖಂಡರನ್ನು ಬಾಬಿಲೋನಿ‌ಗೆ ಕರೆದೊಯ್ದನು. ಇವರಲ್ಲಿ ಯಾಜಕನಾದ ಯೆಹೆಜ್ಕೇಲನು ಕೂಡ ಇದ್ದನು. ನೆಬೂಕದ್ನೆಚ್ಚರನು ಯೆಹೋಯಾಕೀನನ ಮಾವನಾಗಿದ್ದ ಚಿದ್ಕೀಯನನ್ನು ಯೆರೂಸಲೇಮಿನಲ್ಲಿ ರಾಜನನ್ನಾಗಿ ಮಾಡಿದನು.
ಚಿದ್ಕೀಯನು ಬಾಬಿಲೋನ ರಾಜನಿಗೆ ನಿಷ್ಠನಾಗಿರಲಿಲ್ಲ. ಆದ್ದರಿಂದ, ಬಾಬಿಲೋನಿಯರು ಯೆಹೂದದ ನಗರಗಳನ್ನು ನಾಶಪಡಿಸಿದರು. ನಂತರ ಕ್ರಿ.ಪೂ 586 ರಲ್ಲಿ ಅವರು ಯೆರೂಸಲೇಮನ್ನು ನಾಶಪಡಿಸಿದರು. ಬಾಬಿಲೋನಿಯರು ಯೆರೂಸಲೇಮಿನಲ್ಲಿ ಹೆಚ್ಚಿನ ಜನರನ್ನು ಕೊಂದರು. ಆದರೆ ಅವರು ಕೆಲವು ಜನರನ್ನು ಬಾಬಿಲೋನಿಗೆ ಕರೆದೊಯ್ದರು.

2 ಅರಸುಗಳು ಪುಸ್ತಕದಿಂದ ಪ್ರವಾದನೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು

ಯೆಹೂದದ ಅರಸನಾದ ಮನಸ್ಸೆಯು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು

2 ಅರಸುಗಳು 21
1 ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಅವನು ಐವತ್ತೈದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಉಂಟುಮಾಡಿ ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಹಾಗೆ ವಿಗ್ರಹದ ತೋಪನ್ನು ಮಾಡಿ ಆಕಾಶದ ಎಲ್ಲಾ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
ಇದಲ್ಲದೆ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಇರಿಸುವೆನೆಂದು ಕರ್ತನು ಯಾವದನ್ನು ಕುರಿತು ಹೇಳಿದ್ದನೋ ಆ ಕರ್ತನ ಮನೆಯಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
ಕರ್ತನ ಮನೆಯ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.
ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.
ಈ ಮನೆಯಲ್ಲಿಯೂ ಇಸ್ರಾಯೇಲಿನ ಸಕಲ ಗೋತ್ರಗಳ ಲ್ಲಿಯೂ ನಾನು ಆದುಕೊಂಡ ಯೆರೂಸಲೇಮಿನ ಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನೆಂದು ಕರ್ತನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಯಾವದನ್ನು ಕುರಿತು ಹೇಳಿದ್ದನೋ ಆ ಮನೆಯಲ್ಲಿ ತಾನು ಮಾಡಿದ ತೋಪಿನ ಕೆತ್ತಿದ ವಿಗ್ರಹವನ್ನು ಇಟ್ಟನು.
ಕರ್ತನು –ನಾನು ಅವರಿಗೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರವೂ ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಎಲ್ಲಾ ನ್ಯಾಯಪ್ರಮಾಣದ ಪ್ರಕಾರವೂ ಮಾಡಿ ಅವುಗಳನ್ನು ಅವರು ಕೈಕೊಂಡರೆ ನಾನು ಅವರ ತಂದೆಗಳಿಗೆ ಕೊಟ್ಟ ದೇಶದೊಳಗಿಂದ ಅವರ ಪಾದಗಳು ಇನ್ನು ಕದಲುವಂತೆ ಮಾಡುವದಿಲ್ಲವೆಂದು ಹೇಳಿದನು.
ಆದರೆ ಅವರು ಕೇಳದೆ ಹೋದರು; ಕರ್ತನು ಇಸ್ರಾಯೇಲ್‌ ಮಕ್ಕಳ ಮುಂದೆ ನಾಶಮಾಡಿದ ಜನಾಂಗಗಳ ಕೆಟ್ಟತನಕ್ಕಿಂತ ಅಧಿಕ ವಾಗಿ ಮಾಡಲು ಮನಸ್ಸೆಯು ಅವರನ್ನು ಮಾರ್ಗ ತಪ್ಪಿಸಿದನು.
10 ಆದದರಿಂದ ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನಂದರೆ–
11 ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಎಲ್ಲಕ್ಕಿಂತ ಕೆಟ್ಟದ್ದಾದ ಈ ಅಸಹ್ಯಗಳನ್ನು ಮಾಡಿದನು. ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಮಾಡಿಸಿದನು. ಈ ಕಾರಣ ದಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ–
12 ಇಗೋ, ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವನ ಎರಡೂ ಕಿವಿಗಳು ಕಿರಗುಟ್ಟುವವು.
13 ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ನೂಲನ್ನೂ ಅಹಾಬನ ಮನೆಯ ಗಟ್ಟಿ ತೂಕವನ್ನೂ ಗುಂಡನ್ನೂ ಚಾಚುವೆನು; ತಟ್ಟೆ ಯನ್ನು ಒರಸಿ ಬೋರಲು ಹಾಕುವ ಹಾಗೆ ನಾನು ಯೆರೂಸಲೇಮನ್ನು ಒರಸಿಬಿಡುವೆನು.
14 ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವವರನ್ನು ಬಿಟ್ಟು ಬಿಟ್ಟು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ ಸೂರೆಯೂ ಆಗಿ ಹೋಗುವರು.
15 ಅವರ ತಂದೆಗಳು ಐಗುಪ್ತ ದಿಂದ ಹೊರಟ ದಿವಸ ಮೊದಲುಗೊಂಡು ಇಂದಿನ ವರೆಗೂ ಅವರು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ.
16 ಇದಲ್ಲದೆ ಮನಸ್ಸೆಯು ಕರ್ತನ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಾಪರಾಧದ ರಕ್ತದಿಂದ ತುಂಬಿಸಿದನು.
17 ಮನಸ್ಸೆಯ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಅವನು ಮಾಡಿದ ಪಾಪವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
18 ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು ಅವನನ್ನು ಅವನ ಮನೆಯ ತೋಟವಾದ ಉಜ್ಜನ ತೋಟದಲ್ಲಿ ಹೂಣಿ ಟ್ಟರು. ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಅರಸನಾದನು.
 
2 ಅರಸುಗಳು 22
1 ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಮೂವ ತ್ತೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತೂರಿನ ಅದಾಯನ ಮಗಳಾ ಗಿದ್ದು, ಯೆದೀದಾಳೆಂಬ ಹೆಸರುಳ್ಳವಳಾಗಿದ್ದಳು.
ಅವನು ಕರ್ತನ ದೃಷ್ಟಿಗೆ ಒಳ್ಳೆಯದ್ದನ್ನು ಮಾಡಿ ತನ್ನ ತಂದೆಯಾದ ದಾವೀದನ ಎಲ್ಲಾ ಮಾರ್ಗಗಳಲ್ಲಿ ಬಲ, ಎಡ ಪಾರ್ಶ್ವವಾಗಿ ತಿರುಗದೆ ನಡೆದನು.
ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಏನಾಯಿತಂದರೆ, ಅರಸನು ಲೇಖಕನಾದ ಮೆಷುಲ್ಲಾ ಮನ ಮಗನಾದ ಅಚಲ್ಯನ ಮಗನಾದ ಶಾಫಾನನನ್ನು ಕರ್ತನ ಮನೆಗೆ ಕಳುಹಿಸಿ ಹೇಳಿದ್ದೇನಂದರೆ–
ನೀನು ಪ್ರಧಾನ ಯಾಜಕನಾದ ಹಿಲ್ಕೀಯನ ಬಳಿಗೆ ಹೋಗು, ಅವನು ಕರ್ತನ ಮನೆಯಲ್ಲಿ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.
ಅವರು ಅದನ್ನು ಕರ್ತನ ಮನೆಯ ಕೆಲಸಮಾಡು ವವರ ಮೇಲೆ ಇರುವ ಕಾವಲುಗಾರರ ಕೈಯಲ್ಲಿ ಒಪ್ಪಿಸಲಿ.
ಮನೆ ದುರಸ್ತುಮಾಡುವ ಹಾಗೆ ಕರ್ತನ ಮನೆಯಲ್ಲಿ ಕೆಲಸ ಮಾಡುವವರಾದ ಬಡಿಗೆಯವ ರಿಗೂ ಶಿಲ್ಪಿಗಾರರಿಗೂ ಕಲ್ಲು ಕೆಲಸದವರಿಗೂ ಕೊಟ್ಟು ಮನೆಯನ್ನು ದುರಸ್ತು ಮಾಡಲು ಮರಗಳನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವದಕ್ಕೆ ಕೊಡಲಿ.
ಆದರೆ ಅವರು ನಂಬಿಗಸ್ತರಾಗಿ ಕೆಲಸಮಾಡಿದ್ದರಿಂದ ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳಲಿಲ್ಲ.
ಆಗ ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕ ನಾದ ಶಾಫಾನನಿಗೆ–ನಾನು ಕರ್ತನ ಮನೆಯಲ್ಲಿ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡಿದ್ದೇನೆ ಅಂದನು; ಹಿಲ್ಕೀಯನು ಆ ಪುಸ್ತಕವನ್ನು ಶಾಫಾನನಿಗೆ ಕೊಟ್ಟನು; ಅವನು ಅದನ್ನು ಓದಿದನು.
ಲೇಖಕನಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆಕರ್ತನ ಮನೆಯಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ ಕರ್ತನ ಆಲಯದ ಕೆಲಸ ಮಾಡು ವವರ ಮೇಲಿರುವ ಕೆಲಸಗಾರರ ಕೈಯಲ್ಲಿ ಒಪ್ಪಿಸಿದ್ದಾರೆ ಅಂದನು.
10 ಇದಲ್ಲದೆ ಲೇಖಕನಾದ ಶಾಫಾನನು ಅರಸನಿಗೆ–ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆಂದು ತೋರಿಸಿದನು; ಶಾಫಾ ನನು ಅದನ್ನು ಅರಸನ ಮುಂದೆ ಓದಿದನು.
11 ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು.
12 ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ್‌ನಿಗೂ ವಿಾಕಾ ಯನ ಮಗನಾದ ಅಕ್ಬೋರ್‌ನಿಗೂ ಲೇಖಕನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ ಹೇಳಿದ್ದೇನಂದರೆ–
13 ನೀವು ಹೋಗಿ ಸಿಕ್ಕಿದ ಈ ಪುಸ್ತಕದ ಮಾತುಗಳನ್ನು ಕುರಿತು ನನಗೋಸ್ಕರವೂ ಜನರಿಗೋಸ್ಕರವೂ ಎಲ್ಲಾ ಯೆಹೂದ್ಯರಿಗೋಸ್ಕರವೂ ಕರ್ತನ ಬಳಿಯಲ್ಲಿ ವಿಚಾರಿಸಿರಿ. ಯಾಕಂದರೆ ನಮ್ಮನ್ನು ಕುರಿತು ಬರೆಯಲ್ಪಟ್ಟ ಎಲ್ಲಾದರ ಪ್ರಕಾರ ಮಾಡಲು ನಮ್ಮ ಪಿತೃಗಳು ಈ ಪುಸ್ತಕದ ಮಾತುಗಳನ್ನು ಕೇಳದೆ ಹೋದದರಿಂದ ನಮಗೆ ವಿರೋಧವಾಗಿ ಉರಿ ಯುವ ದೇವರ ಕೋಪವು ದೊಡ್ಡದಾಗಿದೆ ಅಂದನು.
14 ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು.
15 ಆಗ ಅವಳು–ಅವರಿಗೆ ಹೇಳಿದ್ದು–ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ–ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ–ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು
16 ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು.
17 ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ.
18 ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ–ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ —
19 ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.
20 ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.13
ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರಪ್ರಯಾಣ ಮಾಡಿದೆವು. ಪೌಲನು ತಾನು ಕಾಲುನಡೆಯಾಗಿ ಹೋಗಬೇಕೆಂದು ಹಾಗೆಯೇ ನಮಗೆ ಅಪ್ಪಣೆ ಮಾಡಿದ್ದನು. 

ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡಿದ್ದು:

ಅರಸನಾದ ಯೋಷೀಯನು ಒಡಂಬಡಿಕೆಯನ್ನು ಸ್ಥಿರಪಡಿಸುತ್ತಾನೆ

2 ಅರಸುಗಳು 23
1 ಅರಸನು ಹೇಳಿಕಳುಹಿಸಿದ್ದರಿಂದ ಯೆಹೂದದ, ಯೆರೂಸಲೇಮಿನ, ಹಿರಿಯರೆಲ್ಲ ರನ್ನು ಅವನ ಬಳಿಗೆ ಕೂಡಿಸಿದರು.
ಆಗ ಅರಸನೂ ಅವನ ಸಂಗಡ ಯೆಹೂದದ ಜನರೆಲ್ಲರೂ ಯೆರೂ ಸಲೇಮಿನ ನಿವಾಸಿಗಳೆಲ್ಲರೂ ಯಾಜಕರೂ ಪ್ರವಾದಿ ಗಳೂ ಹಿರಿಕಿರಿಯರಾದ ಎಲ್ಲಾ ಜನರೂ ಕರ್ತನ ಆಲಯಕ್ಕೆ ಹೋದರು. ಅವರು ಕೇಳುವ ಹಾಗೆ ಕರ್ತನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಪುಸ್ತಕದ ಮಾತುಗಳನೆಲ್ಲಾ ಅವನು ಓದಿದನು.
ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.
ಅರ ಸನು–ಬಾಳನಿಗೋಸ್ಕರವೂ ವಿಗ್ರಹದ ತೋಪುಗಳಿ ಗೋಸ್ಕರವೂ ಆಕಾಶದ ಸೈನ್ಯಕ್ಕೋಸ್ಕರವೂ ಮಾಡ ಲ್ಪಟ್ಟಿದ್ದ ಎಲ್ಲಾ ಪಾತ್ರೆಗಳನ್ನು ಕರ್ತನ ಆಲಯದಿಂದ ಹೊರಗೆ ತಕ್ಕೊಂಡು ಬರಬೇಕೆಂದು ಪ್ರಧಾನ ಯಾಜಕ ನಾದ ಹಿಲ್ಕೀಯನಿಗೂ ಎರಡನೇ ತರಗತಿಯ ಯಾಜಕ ರಿಗೂ ದ್ವಾರಪಾಲಕರಿಗೂ ಆಜ್ಞಾಪಿಸಿದನು ಮತ್ತು ಅವನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹೊಲಗಳಲ್ಲಿ ಸುಡಿಸಿ ಅವುಗಳ ಬೂದಿ ಯನ್ನು ಬೇತೇಲಿಗೆ ತರುವಂತೆ ಮಾಡಿದನು.
ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು.
ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.
ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು.
ಇದಲ್ಲದೆ ಅವನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರ ಮಾಡಿ ಗೆಬ ಮೊದಲುಗೊಂಡು ಬೇರ್ಷೆಬದ ವರೆಗೂ ಯಾಜಕರು ಧೂಪ ಸುಡುತ್ತಿದ್ದ ಉನ್ನತ ಸ್ಥಳಗಳನ್ನು ಹೊಲೆಮಾಡಿ ಪಟ್ಟಣದ ಬಾಗಲಿನ ಎಡಪಾರ್ಶ್ವದಲ್ಲಿದ್ದ ಪಟ್ಟಣದ ಅಧಿಪತಿಯಾದ ಯೆಹೋಶುವನ ಬಾಗಲಿನ ದ್ವಾರದಲ್ಲಿದ್ದ ಬಾಗಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು.
ಆದರೆ ಉನ್ನತ ಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಕರ್ತನ ಬಲಿಪೀಠದ ಬಳಿ ಯಲ್ಲಿ ಸೇರದೆ ತಮ್ಮ ಸಹೋದರರ ಮಧ್ಯದಲ್ಲಿ ಹುಳಿ ಇಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು.
10 ಯಾವನೂ ತನ್ನ ಮಗನನ್ನಾದರೂ ಮಗಳನ್ನಾದರೂ ಮೋಲೆಕನಿ ಗೋಸ್ಕರ ಬೆಂಕಿದಾಟಿಸದ ಹಾಗೆ ಹಿನ್ನೋಮನ ಮಕ್ಕಳ ತಗ್ಗಿನಲ್ಲಿದ್ದ ತೋಫೆತನ್ನು ಹೊಲೆಮಾಡಿದನು.
11 ಬೈಲ ಲ್ಲಿರುವ ಪ್ರಧಾನನಾದ ನಾತಾನ್‌ ಮೆಲೆಕನ ಕೊಠಡಿಯ ಹತ್ತಿರ ಇದ್ದ ಕರ್ತನ ಮನೆಯ ದ್ವಾರದ ಬಳಿಯಲ್ಲಿ ಯೆಹೂದದ ಅರಸುಗಳು ಸೂರ್ಯನಿಗೆ ಕೊಟ್ಟ ಕುದುರೆ ಗಳನ್ನು ತೆಗೆದುಹಾಕಿ ಸೂರ್ಯನ ರಥಗಳನ್ನು ಬೆಂಕಿ ಯಿಂದ ಸುಟ್ಟುಬಿಟ್ಟನು.
24 ಇದಲ್ಲದೆ ಯಾಜಕನಾದ ಹಿಲ್ಕೀಯನು ಕರ್ತನ ಮನೆಯಲ್ಲಿ ಕಂಡುಕೊಂಡ ಪುಸ್ತಕದಲ್ಲಿ ಬರೆಯಲ್ಪಟ್ಟ ನ್ಯಾಯ ಪ್ರಮಾಣದ ಮಾತುಗಳನ್ನು ಯೋಷೀಯನು ಈಡೇ ರಿಸುವ ಹಾಗೆ ಯೆಹೂದ ದೇಶದಲ್ಲಿಯೂ ಯೆರೂ ಸಲೇಮಿನಲ್ಲಿಯೂ ಕಂಡು ಹಿಡಿಯಲ್ಪಟ್ಟ ಯಕ್ಷಿಣಿ ಗಾರರನ್ನೂ ಮಂತ್ರಗಾರರನ್ನೂ ವಿಗ್ರಹಗಳನ್ನೂ ಮಣ್ಣು ದೇವರುಗಳನ್ನೂ ಎಲ್ಲಾ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿ ಬಿಟ್ಟನು.
25 ತನ್ನ ಪೂರ್ಣಹೃದಯ ದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಪೂರ್ಣ ಬಲದಿಂದಲೂ ಮೋಶೆಯ ಎಲ್ಲಾ ನ್ಯಾಯಪ್ರಮಾ ಣದ ಪ್ರಕಾರ ಕರ್ತನ ಬಳಿಗೆ ತಿರುಗಿದ ಅರಸನ ಹಾಗೆ ಅವನ ಮುಂದೆ ಯಾವನೂ ಇರಲಿಲ್ಲ; ಅವನ ತರುವಾಯ ಅವನ ಹಾಗೆ ಯಾವನೂ ಎದ್ದಿರಲಿಲ್ಲ.
26 ಆದರೆ ಮನಸ್ಸೆಯು ಕರ್ತನಿಗೆ ಕೋಪ ವನ್ನು ಎಬ್ಬಿಸಲು ಮಾಡಿದ ಎಲ್ಲಾ ಕ್ರಿಯೆಗಳಿಗೋಸ್ಕರ ಯೆಹೂದಕ್ಕೆ ವಿರೋಧವಾಗಿ ತನ್ನನ್ನು ಉದ್ರೇಕಿಸಿದ ಕೋಪವನ್ನೂ ತನ್ನ ಮಹಾಕೋಪದ ಉರಿಯನ್ನೂ ಕರ್ತನು ಬಿಟ್ಟುಬಿಡಲಿಲ್ಲ.
27 ಕರ್ತನು–ನಾನು ಇಸ್ರಾ ಯೇಲನ್ನು ತೆಗೆದು ಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು; ಇದ ಲ್ಲದೆ ನಾನು ಆದುಕೊಂಡ ಈ ಪಟ್ಟಣವಾದ ಯೆರೂ ಸಲೇಮನ್ನೂ ನನ್ನ ಹೆಸರು ಅಲ್ಲಿರುವದೆಂದು ನಾನು ಹೇಳಿದ ಮನೆಯನ್ನೂ ತೆಗೆದುಬಿಡುವೆನು ಅಂದನು.
28 ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತ ಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
29 ಅವನ ದಿವಸಗಳಲ್ಲಿ ಐಗುಪ್ತದ ಅರಸನಾದ ಫರೋಹನೆಕೋ ಎಂಬವನು ಅಶ್ಶೂರಿನ ಅರಸನ ಮೇಲೆ ಯೂಫ್ರೇ ಟೀಸ್‌ ನದಿಗೆ ಹೋದನು; ಅರಸನಾದ ಯೋಷೀ ಯನು ಅವನ ಮೇಲೆ ಹೋದನು; ಅವನು ಇವನನ್ನು ನೋಡಿದಾಗ ಮೆಗಿದ್ದೋವಿನ ಬಳಿಯಲ್ಲಿ ಕೊಂದು ಹಾಕಿದನು.
30 ಅವನ ಸೇವಕರು ಸತ್ತವನಾದ ಅವನನ್ನು ರಥದಲ್ಲಿ ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಕ್ಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಹೂಣಿಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು.

ಯೆಹೂದದ ಅರಸನಾದ ಯೆಹೋವಾಹಾಜನು

31 ಯೆಹೋವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ಮೂರು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಪಟ್ಟಣದ ಯೆರೆವಿಾಯನ ಮಗಳಾಗಿದ್ದು ಹಮೂಟಲ್‌ ಎಂಬವಳಾಗಿದ್ದಳು.
32 ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
33 ಆದರೆ ಅವನು ಯೆರೂಸಲೇಮಿನಲ್ಲಿ ಆಳದ ಹಾಗೆ ಫರೋಹನೆಕೋ ಎಂಬವನು ಹಮಾತ್‌ ದೇಶದ ರಿಬ್ಲಾದಲ್ಲಿ ಅವನನ್ನು ಬಂಧಿಸಿ ದೇಶದ ಮೇಲೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾ ಯಿತು.
34 ಫರೋಹನೆಕೋ ಯೋಷೀಯನ ಮಗ ನಾದ ಎಲ್ಯಾಕೀಮನನ್ನು ಅವನ ತಂದೆಯಾದ ಯೋಷೀ ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಯೆಹೋಯಾಕೀಮನೆಂಬ ಬದಲು ಹೆಸರನ್ನಿಟ್ಟು ಯೆಹೋವಾಹಾಜನನ್ನು ತೆಗೆದುಕೊಂಡು ಹೋದನು; ಅವನು ಐಗುಪ್ತದಲ್ಲಿ ಸತ್ತನು.
35 ಯೆಹೋಯಾಕೀ ಮನು ಬೆಳ್ಳಿಯನ್ನೂ ಬಂಗಾರವನ್ನೂ ಫರೋಹನಿಗೆ ಕೊಟ್ಟನು. ಫರೋಹನೆಕೋವಿನ ಆಜ್ಞೆಯ ಪ್ರಕಾರ ಅವನು ಹಣವನ್ನು ಕೊಡುವಂತೆ ದೇಶಕ್ಕೆ ಕಪ್ಪವನ್ನು ನಿಷ್ಕರ್ಷೆ ಮಾಡಿದನು. ಅವನು ಬೆಳ್ಳಿಯನ್ನೂ ಬಂಗಾರ ವನ್ನೂ ನೇಕೊವೆಂಬ ಫರೋಹನಿಗೆ ಕೊಡುವ ಹಾಗೆ ದೇಶದ ಜನರಿಂದ ಪ್ರತಿ ಮನುಷ್ಯನ ತೆರಿಗೆಯ ಪ್ರಕಾರ ಬಲವಂತವಾಗಿ ತಕ್ಕೊಂಡನು.

ಯೆಹೂದದ ಅರಸನಾದ ಯೆಹೋಯಾಕೀಮನು

36 ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ರೂಮದ ಪೆದಾಯನ ಮಗಳು ಜೆಬೂದಾಳೆಂಬವಳು.
37 ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
 
2 ಅರಸುಗಳು 24
1 ಅವನ ದಿವಸಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚರನು ಬಂದನು. ಯೆಹೋಯಾಕೀಮನು ಮೂರು ವರುಷ ಅವನ ಸೇವಕನಾಗಿದ್ದು ತರುವಾಯ ಅವನ ಮೇಲೆ ತಿರುಗಿ ಬಿದ್ದನು.
ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
ನಿಶ್ಚಯವಾಗಿ ಕರ್ತನ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಅದೇನಂದರೆ, ಮನಸ್ಸೆಯು ತನ್ನ ಎಲ್ಲಾ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ ಅವರನ್ನು ಆತನು ತನ್ನ ಸಮ್ಮುಖದಿಂದ ತೆಗೆದು ಹಾಕುವದಕ್ಕೋಸ್ಕರವೇ.
ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು.
ಯೆಹೋಯಾ ಕೀಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
ಯೆಹೋಯಾಕೀಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಯೆಹೋಯಾಖೀನನು ಅವನಿಗೆ ಬದಲಾಗಿ ಅರಸ ನಾದನು.
ಆದರೆ ಐಗುಪ್ತದ ಅರಸನು ತನ್ನ ದೇಶದಿಂದ ತಿರಿಗಿ ಬರಲಿಲ್ಲ. ಯಾಕಂದರೆ ಐಗುಪ್ತದ ನದಿ ಮೊದಲು ಗೊಂಡು ಯೂಫ್ರೇಟೀಸ್‌ ನದಿಯ ವರೆಗೂ ಐಗು ಪ್ತದ ಅರಸನಿಗೆ ಇದ್ದದ್ದೆಲ್ಲಾ ಬಾಬೆಲಿನ ಅರಸನು ಹಿಡಿದಿದ್ದನು.

ಯೆಹೂದದ ಅರಸನಾದ ಯೆಹೋಯಾಖೀನನು

ಯೆಹೋಯಾಖೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾಗಿದ್ದು ನೆಹು ಷ್ಟಾಳೆಂಬವಳು.
ಅವನು ತನ್ನ ತಂದೆಯು ಮಾಡಿದ ಪ್ರಕಾರವೆಲ್ಲಾ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
10 ಆ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕ ದ್ನೆಚರನ ಸೇವಕರು ಯೆರೂಸಲೇಮಿಗೆ ವಿರೋಧವಾಗಿ ಬಂದಾಗ ಆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು.
11 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಪಟ್ಟಣಕ್ಕೆ ವಿರೋಧವಾಗಿ ಬಂದನು; ಅವನ ಸೇವಕರು ಅದನ್ನು ಮುತ್ತಿಗೆ ಹಾಕಿದರು.
12 ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು.
13 ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.
14 ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. (ಪ್ರವಾದಿ ಯೆಹೆಜ್ಕೇಲನ ಜೊತೆಗೆ ದಾನಿಯೇಲ, ಶದ್ರಕ್, ಮೇಶಕ್‌ ಮತ್ತು ಅಬೆದ್ನೆಗೋರನ್ನು ಕರೆದೊಯ್ಯಲಾಯಿತು. ಯೆಹೆಜ್ಕೇಲನು ಇನ್ನೂ ದೇವರಿಂದ ಯಾವುದೇ ದರ್ಶನಗಳನ್ನು ಕಂಡಿರಲಿಲ್ಲ)

2 ಪೂರ್ವಕಾಲವೃತ್ತಾ ಪುಸ್ತಕದಿಂದ ಪ್ರವಾದನೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು

2 ಪೂರ್ವಕಾಲವೃತ್ತಾ 36

1 ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು.

ಯೆಹೂದದ ಅರಸನಾದ ಯೆಹೋವಾಹಾಜನು

ಯೆಹೋವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತಮೂರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು.
ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು.
ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು.

ಯೆಹೂದದ ಅರಸನಾದ ಯೆಹೋಯಾಕೀಮನು

ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು.
ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್‌ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು.

ಯೆಹೂದದ ಅರಸನಾದ ಯೆಹೋಯಾಕೀನನು

ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು.
10 ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು.

ಯೆಹೂದದ ಅರಸನಾದ ಚಿದ್ಕೀಯನು

11 ಚಿದ್ಕೀಯನು ಆಳಲು ಆರಂಭಿಸಿದಾಗ ಅವನು ಇಪ್ಪತ್ತೊಂದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹನ್ನೊಂದು ವರುಷ ಆಳಿದನು.
12 ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
13 ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
14 ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

ಯೆರೂಸಲೇಮಿನ ಬೀಳ್ವಿಕೆ

15 ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು.
16 ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
17 ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
18 ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
19 ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು.
20 ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು. (ದಾನಿಯೇಲನು: ಅಧ್ಯಾಯ 10). – (ಪ್ರವಾದಿ ಯೆಹೆಜ್ಕೇಲನ ಜೊತೆಗೆ ದಾನಿಯೇಲ, ಶದ್ರಕ್, ಮೇಶಕ್‌ ಮತ್ತು ಅಬೆದ್ನೆಗೋರನ್ನು ಕರೆದೊಯ್ಯಲಾಯಿತು. ಯೆಹೆಜ್ಕೇಲನು ಇನ್ನೂ ದೇವರಿಂದ ಯಾವುದೇ ದರ್ಶನಗಳನ್ನು ಕಂಡಿರಲಿಲ್ಲ)
21 ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು.

 
ದಾನಿಯೇಲನು 9
1 ಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ಅರ ಸನೂ ಆದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ
ಅವನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಕರ್ತನು ತನ್ನ ವಾಕ್ಯವನ್ನು ಪ್ರವಾದಿಯಾದ ಯೆರೆವಿಾಯನಿಗೆ ದಯಪಾಲಿಸಿದ ಹಾಗೆ ತಾನು ಯೆರೂಸಲೇಮಿಗೆ ಹಾಳು ಬೀಳುವಿಕೆಗಳಲ್ಲಿ ಎಪ್ಪತ್ತು ವರುಷಗಳನ್ನು ಸಂಪೂರ್ಣಮಾಡುವ ಹಾಗೆ ವರುಷಗಳ ಲೆಕ್ಕವನ್ನು ಪುಸ್ತಕದಿಂದ ತಿಳಿದುಕೊಂಡೆನು.
ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು.
 
2 ಅರಸುಗಳು 24 ನಿಂದ ಮುಂದುವರೆದಿದೆ
15 ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು.
16 ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.
17 ಬಾಬೆಲಿನ ಅರ ಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯ ನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಚಿದ್ಕೀಯ ಎಂಬ ಹೆಸರನ್ನಿಟ್ಟನು.

ಯೆಹೂದದ ಅರಸನಾದ ಚಿದ್ಕೀಯನು

18 ಚಿದ್ಕೀಯನು ಆಳಲು ಆರಂಭಿಸಿದಾಗ ಇಪ್ಪ ತ್ತೊಂದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ಲಿಬ್ನದ ಯೆರೆವಿಾಯನ ಮಗಳಾಗಿದ್ದ ಹಮೂಟಲ್‌ ಎಂಬ ವಳು.
19 ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು.
20 ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.

ಯೆರೂಸಲೇಮಿನ ಬೀಳ್ವಿಕೆ

ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು
 
2 ಅರಸುಗಳು 25
1 ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು.
ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರುಷದ ವರೆಗೆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು.
ನಾಲ್ಕನೇ ತಿಂಗಳಿನ ಒಂಭತ್ತನೇ ದಿವಸದಲ್ಲಿ ಪಟ್ಟಣದಲ್ಲಿ ಬರವು ಬಲವಾದದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು.
ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು.
ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು.
ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು,
ಕರ್ತನ ಮನೆಯನ್ನೂ ಅರಮನೆಯನ್ನೂ ಯೆರೂಸಲೇಮಿನಲ್ಲಿರುವ ಎಲ್ಲಾ ಮನೆಗಳನ್ನೂ ಪ್ರತಿ ದೊಡ್ಡ ಮನುಷ್ಯನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು.
10 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಕಸ್ದೀಯರ ಸೈನ್ಯದವರೆ ಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆ ಗಳನ್ನು ಕೆಡವಿಬಿಟ್ಟರು.
11 ಪಟ್ಟಣದಲ್ಲಿ ಉಳಿದ ಜನ ರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಗುಂಪಿ ನಲ್ಲಿ ಮಿಕ್ಕ ಜನರನ್ನೂ ಕಾವಲಿನ ಅಧಿಪತಿಯಾದ ನೆಬೂಜರದಾನನು ಸೆರೆಯಾಗಿ ಒಯ್ದನು.
12 ಆದರೆ ಕಾವಲಿನ ಅಧಿಪತಿಯು ದ್ರಾಕ್ಷೇತೋಟ ಮಾಡುವ ಹಾಗೆಯೂ ಬೇಸಾಯ ಮಾಡುವ ಹಾಗೆಯೂ ದೇಶದ ಬಡವರನ್ನು ಉಳಿಸಿಬಿಟ್ಟನು.
13 ಇದಲ್ಲದೆ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸ್ತಂಭಗಳನ್ನೂ ಆಧಾರಗಳನ್ನೂ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸಮುದ್ರವೆಂಬ ಪಾತ್ರೆ ಯನ್ನೂ ಕಸ್ದೀಯರು ಒಡೆದು ಹಾಕಿ ಅದರ ಹಿತ್ತಾಳೆ ಯನ್ನು ಬಾಬೆಲಿಗೆ ಒಯ್ದರು.
14 ಮಡಕೆಗಳನ್ನೂ ಸಲಿಕೆ ಗಳನ್ನೂ ಕತ್ತರಿಗಳನ್ನೂ ಸೌಟುಗಳನ್ನೂ ಅವರು ಸೇವಿಸುತ್ತಿದ್ದ ಎಲ್ಲಾ ಹಿತ್ತಾಳೆಯ ಸಾಮಾನುಗಳನ್ನೂ ತಕ್ಕೊಂಡು ಹೋದರು.
15 ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು.
16 ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ್ದ ಎರಡು ಸ್ತಂಭಗಳೂ ಸಮುದ್ರವೆನಿಸಿಕೊಂಡ ಪಾತ್ರೆಯೂ ಆಧಾರಗಳೂ ಈ ಎಲ್ಲಾ ಸಾಮಾನುಗಳ ತಾಮ್ರವು ತೂಕ ಮಾಡ ಲಾರದಷ್ಟಿತ್ತು.
17 ಒಂದು ಸ್ತಂಭವು ಹದಿನೆಂಟು ಮೊಳ ಎತ್ತರವಾಗಿತ್ತು. ಅದರ ಮೇಲಿದ್ದ ಬೋದಿಗೆ ತಾಮ್ರ ದ್ದಾಗಿ ಮೂರು ಮೊಳ ಉದ್ದವಾಗಿತ್ತು. ಬೋದಿಗೆಯ ಸುತ್ತಲಿದ್ದ ಹೆಣೆತದ ಕೆಲಸವೂ ದಾಳಿಂಬರಗಳೂ ಎಲ್ಲಾ ತಾಮ್ರವಾಗಿತ್ತು. ಎರಡನೇ ಸ್ತಂಭಕ್ಕೆ ಇದರ ಹಾಗೆಯೇ ಹೆಣೆತದ ಕೆಲಸ ಉಂಟಾಗಿತ್ತು.
18 ಕಾವಲುಗಾರರ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂರು ಮಂದಿ ದ್ವಾರಪಾಲಕರನ್ನೂ ಹಿಡಿದನು.
19 ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು.
20 ಕಾವಲಿನ ವರ ಅಧಿಪತಿಯಾದ ನೆಬೂಜರದಾನನು ಇವರನ್ನು ತಕ್ಕೊಂಡು ರಿಬ್ಲದಲ್ಲಿದ್ದ ಬಾಬೆಲಿನ ಅರಸನ ಬಳಿಗೆ ಬಂದನು.
21 ಬಾಬೆಲಿನ ಅರಸನು ಹಮಾತ್‌ ರಿಬ್ಲ ದಲ್ಲಿ ಅವರನ್ನು ಹೊಡೆದು ಕೊಂದುಹಾಕಿದನು. ಈ ಪ್ರಕಾರವೇ ಯೆಹೂದ್ಯರು ತಮ್ಮ ದೇಶದಲ್ಲಿಂದ ಸೆರೆ ಯಾಗಿ ಒಯ್ಯಲ್ಪಟ್ಟರು.
22 ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ಯೆಹೂದ ದೇಶದಲ್ಲಿ ಉಳಿಸಿದ ಜನರ ಮೇಲೆ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ಅಧಿಪತಿಯಾಗಿ ಮಾಡಿದನು.
23 ಆದರೆ ಬಾಬೆಲಿನ ಅರಸನು ಗೆದಲ್ಯನನ್ನು ಅಧಿಪತಿ ಯಾಗಿ ಮಾಡಿದ್ದಾನೆಂದು ದಂಡುಗಳ ಅಧಿಪತಿಗಳೂ ಅವರ ಜನರೂ ಕೇಳಿದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಕಾರೇಹನ ಮಗನಾದ ಯೋಹಾ ನನೂ ನೆಟೋಫದವನಾದ ತನ್ಹುಮೆತನ ಮಗನಾದ ಸೆರಾಯನೂ ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯನೂ ಅವರ ಜನರೂ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.
24 ಆಗ ಗೆದಲ್ಯನು ಅವರಿಗೂ ಅವರ ಜನರಿಗೂ ಆಣೆಯನ್ನಿಟ್ಟು–ನೀವು ಕಸ್ದೀಯರನ್ನು ಸೇವಿಸಲು ಭಯಪಡಬೇಡಿರಿ; ದೇಶದಲ್ಲಿ ವಾಸವಾ ಗಿದ್ದು ಬಾಬೆಲಿನ ಅರಸನನ್ನು ಸೇವಿಸಿರಿ; ಆಗ ನಿಮಗೆ ಒಳ್ಳೇದಾಗಿರುವದು ಅಂದನು.
25 ಆದರೆ ಏಳನೇ ತಿಂಗಳಲ್ಲಿ ರಾಜ ಸಂತಾನದವನಾದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇ ಲನು ಅವನ ಸಂಗಡ ಹತ್ತು ಮಂದಿ ಬಂದು ಗೆದಲ್ಯ ನನ್ನೂ ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ ಕಸ್ದೀಯರನ್ನೂ ಹೊಡೆದು ಕೊಂದುಹಾಕಿದರು.
26 ಆಗ ಹಿರಿ ಕಿರಿಯರಾದ ಎಲ್ಲಾ ಜನರೂ ದಂಡುಗಳ ಅಧಿ ಪತಿಗಳೂ ಎದ್ದು ಐಗುಪ್ತಕ್ಕೆ ಹೋದರು; ಯಾಕಂದರೆ ಕಸ್ದೀಯರಿಗೆ ಭಯಪಟ್ಟರು.

ಯೆಹೋಯಾಖೀನನು ಸೆರೆಮನೆಯಿಂದ ಬಿಡಿಸಲ್ಪಟ್ಟನು

27 ಆದರೆ ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೇ ವರುಷದ ಹನ್ನೆರಡನೇ ತಿಂಗಳಿನ ಇಪ್ಪತ್ತೇಳನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ಎವಿಲ್ಮೆ ರೋದಕನು ಆಳಲು ಆರಂಭಿಸಿದ ವರುಷದಲ್ಲಿ ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿ
28 ಅವನ ಸಂಗಡ ಒಳ್ಳೇ ಮಾತುಗಳನ್ನು ಆಡಿ, ಅವನ ಸಿಂಹಾಸನವನ್ನು ಬಾಬೆಲಿನಲ್ಲಿ ತನ್ನ ಸಂಗಡ ಇರುವ ಅರಸುಗಳ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಿ ಅವನ ಸೆರೆ ವಸ್ತ್ರಗಳನ್ನು ಬದಲಾಯಿಸಿದನು.
29 ಅವನು ಜೀವದಿಂದಿರುವ ವರೆಗೂ ಅರಸನ ಸಮ್ಮುಖದಲ್ಲಿ ರೊಟ್ಟಿಯನ್ನು ಯಾವಾಗಲೂ ತಿನ್ನುತ್ತಾ ಇದ್ದನು.
30 ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು.

ಯೆರೆಮಿಾಯ ಪುಸ್ತಕದಿಂದ ಪ್ರವಾದಿಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು

ಯೆರೆಮಿಯ 34

ಚಿದ್ಕೀಯನಿಗೆ ಎಚ್ಚರಿಕೆ

1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚ ರನೂ ಅವನ ಸೈನ್ಯವೆಲ್ಲವೂ ಅವನ ಆಡಳಿತದ ಭೂಮಿಯ ಎಲ್ಲಾ ರಾಜ್ಯಗಳೂ ಎಲ್ಲಾ ಜನಾಂಗಗಳೂ ಯೆರೂಸಲೇಮಿಗೂ ಅದರ ಎಲ್ಲಾ ಪಟ್ಟಣಗಳಿಗೂ ವಿರೋಧವಾಗಿ ಯುದ್ಧಮಾಡುವಾಗ ಕರ್ತನಿಂದ ಯೆರೆವಿಾಯನಿಗೆ ಉಂಟಾದ ವಾಕ್ಯವೇನಂ ದರೆ–
ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ–ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕ ದ್ದೇನಂದರೆ–ಕರ್ತನು ಹೀಗೆ ಹೇಳುತ್ತಾನೆ–ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸುತ್ತೇನೆ; ಅವನು ಅದನ್ನು ಬೆಂಕಿಯಿಂದ ಸುಡು ವನು.
ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳು ವದಿಲ್ಲ; ಆದರೆ ನಿಶ್ಚಯವಾಗಿ ಹಿಡಿಯಲ್ಪಟ್ಟು, ಅವನ ಕೈಯಲ್ಲಿ ಒಪ್ಪಿಸಲ್ಪಡುವಿ; ನಿನ್ನ ಕಣ್ಣುಗಳು ಬಾಬೆಲಿನ ಅರಸನ ಕಣ್ಣುಗಳನ್ನು ನೋಡುವವು, ಅವನು ಎದುರೆ ದುರಾಗಿ ಸಾಕ್ಷಾತ್ತಾಗಿ ನಿನ್ನ ಸಂಗಡ ಮಾತನಾಡು ವನು; ನೀನು ಬಾಬೆಲಿಗೆ ಹೋಗುವಿ.
ಆದಾಗ್ಯೂ ಯೆಹೂದದ ಅರಸನಾದ ಚಿದ್ಕೀಯನೇ, ಕರ್ತನ ವಾಕ್ಯ ವನ್ನು ಕೇಳು. ಕರ್ತನು ಹೀಗೆ ಹೇಳುತ್ತಾನೆ–ನೀನು ಕತ್ತಿಯಿಂದ ಸಾಯುವದಿಲ್ಲ.
ಸಮಾಧಾನದಲ್ಲಿ ಸಾಯುವಿ; ಹಿಂದೆ ಇದ್ದ ಪೂರ್ವದ ಅರಸನಾದ ನಿನ್ನ ಪಿತೃಗಳನ್ನು ಸುಟ್ಟ ಪ್ರಕಾರ ನಿನಗೋಸ್ಕರ (ಸುಗಂಧ ಗಳನ್ನು) ಸುಡುವರು; ಹಾ, ಒಡೆಯನೇ, ಎಂದು ಹೇಳಿ ನಿನಗೋಸ್ಕರ ಗೋಳಾಡುವರು; ನಾನೇ ವಾಕ್ಯವನ್ನು ನುಡಿದಿದ್ದೇನೆಂದು ಕರ್ತನು ಅನ್ನುತ್ತಾನೆ.
ಆಗ ಪ್ರವಾದಿಯಾದ ಯೆರೆವಿಾಯನು ಈ ವಾಕ್ಯಗಳ ನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದ ಅರಸನಾದ ಚಿದ್ಕೀಯನಿಗೆ ಹೇಳಿದನು.
ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೂ ಯೆಹೂದದಲ್ಲಿ ಮಿಕ್ಕ ಸಮಸ್ತ ಪಟ್ಟಣಗಳಿಗೂ ಅಂದರೆ ಲಾಕೀಷಿಗೂ ಅಜೇ ಕಕ್ಕೂ ವಿರೋಧವಾಗಿ ಯುದ್ಧ ಮಾಡಿದಾಗಲೇ ಹೇಳಿ ದನು. ಯೆಹೂದದ ಪಟ್ಟಣಗಳಲ್ಲಿ ಈ ಕೋಟೆಯುಳ್ಳ ಪಟ್ಟಣಗಳು ನಿಂತಿದ್ದವು.
70 ವರ್ಷಗಳ ಗಡಿಪಾರು ಕಾರಣ ದಾನಿಯೇಲನು ಅಧ್ಯಾಯ 9 ಮತ್ತು ಆತನ ಉಪವಾಸ (2 ಪೂರ್ವಕಾಲವೃತ್ತಾ 36:21 ಓದಿರಿ)

ದಾಸರಿಗೆ ಸ್ವತಂತ್ರ

8 ಅರಸನಾದ ಚಿದ್ಕೀಯನು ಯೆರೂಸಲೇಮಿನಲ್ಲಿದ್ದ ಎಲ್ಲಾ ಜನರ ಸಂಗಡ ಒಡಂಬಡಿಕೆ ಮಾಡಿ
ಒಬ್ಬೊಬ್ಬನು ತನ್ನ ತನ್ನ ದಾಸ ದಾಸಿಯನ್ನು ಅವನು ಇಬ್ರೀಯನಾಗಲಿ ಇಬ್ರೀಯಳಾಗಲಿ ಇದ್ದರೆ ಸ್ವತಂತ್ರರಾಗಿ ಕಳುಹಿಸ ಬೇಕೆಂದು ಒಬ್ಬನಾದರೂ ಅವರಿಂದ ಅಂದರೆ ತನ್ನ ಸಹೋದರನಾದ ಯೆಹೂದ್ಯನಿಂದ ಸೇವೆ ತಕ್ಕೊಳ್ಳ ಬೇಡವೆಂದು ಅವರಿಗೆ ಬಿಡುಗಡೆಯನ್ನು ಸಾರಿದ ಮೇಲೆ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು.
10 ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ಒಬ್ಬೊಬ್ಬನು ತನ್ನ ತನ್ನ ದಾಸನನ್ನೂ ತನ್ನ ತನ್ನ ದಾಸಿಯನ್ನೂ ಬಿಡುಗಡೆಯಾಗಿ ಕಳುಹಿಸ ಬೇಕೆಂದೂ ಅವರಿಂದ ಸೇವೆ ತಕ್ಕೊಳ್ಳಬಾರದೆಂದೂ ಕೇಳಿದ ಮೇಲೆ ವಿಧೇಯರಾಗಿದ್ದು ಅವರನ್ನು ಕಳುಹಿಸಿ ಬಿಟ್ಟರು.
11 ಅವರು ತರುವಾಯ ತಿರುಗಿಕೊಂಡು ತಾವು ಬಿಡುಗಡೆಯಾಗಿ ಕಳುಹಿಸಿಬಿಟ್ಟಿದ್ದ ದಾಸದಾಸಿ ಯರನ್ನು ತಿರಿಗಿ ಬರಮಾಡಿ ಅವರನ್ನು ದಾಸ ದಾಸಿಯ ರಾಗಿಯೂ ವಶಮಾಡಿಕೊಂಡರು.
12 ಆದದರಿಂದ ಕರ್ತನ ವಾಕ್ಯವು ಯೆರೆವಿಾಯನಿಗೆ ಕರ್ತನಿಂದ ಉಂಟಾಗಿ ಹೇಳಿದ್ದೇನಂದರೆ–
13 ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ–ನಾನು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿದ್ದ ದಾಸರ ಮನೆಯೊಳಗಿಂದ ಹೊರಗೆ ತಂದ ದಿನದಲ್ಲಿ ಅವರ ಸಂಗಡ ಒಡಂಬಡಿಕೆಮಾಡಿ
14 ಏಳು ವರುಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಮಾರಲ್ಪಟ್ಟಿದ್ದ ತನ್ನ ಸಹೋದರನಾದ ಇಬ್ರಿಯನನ್ನು ಕಳುಹಿಸಬೇಕೆಂದೂ ಅವನು ನಿನಗೆ ಆರು ವರುಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕೆಂದೂ ಹೇಳಿದೆನು; ನಿಮ್ಮ ಪಿತೃಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ.
15 ಈಗ ನೀವು ತಿರುಗಿ ಕೊಂಡು ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಒಬ್ಬೊಬ್ಬನು ತನ್ನ ತನ್ನ ನೆರೆಯವನಿಗೆ ಬಿಡುಗಡೆಯನ್ನು ಸಾರಿದಿರಿ; ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಮನೆ ಯಲ್ಲಿ ನನ್ನ ಮುಂದೆ ಒಡಂಬಡಿಕೆಯನ್ನು ಮಾಡಿದಿರಿ.
16 ಆದರೆ ತಿರುಗಿಕೊಂಡು ನನ್ನ ಹೆಸರನ್ನು ಅಪವಿತ್ರ ಮಾಡಿ ನೀವು ಅವರ ಮನಸ್ಸು ಬಂದ ಹಾಗೆ ಬಿಡುಗಡೆಯಾಗಿ ಕಳುಹಿಸಿದ್ದ ನಿಮ್ಮ ನಿಮ್ಮ ದಾಸದಾಸಿ ಯರನ್ನು ಒಬ್ಬೊಬ್ಬನು ತಿರಿಗಿ ಬರಮಾಡಿ ನಿಮಗೆ ದಾಸದಾಸಿಯರಾಗುವ ಹಾಗೆ ವಶಮಾಡಿಕೊಂಡಿ ದ್ದೀರಿ.
17 ಆದದರಿಂದ ಕರ್ತನು ಹೀಗೆ ಹೇಳುತ್ತಾನೆ–ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
18 ನನ್ನ ಒಡಂಬ ಡಿಕೆಯನ್ನು ವಿಾರಿದ ಮನುಷ್ಯರನ್ನೂ ಕರುವನ್ನೂ ಎರಡು ಭಾಗಮಾಡಿ ಅದರ ತುಂಡುಗಳ ನಡುವೆ ದಾಟಿಹೋಗಿ ನನ್ನ ಮುಂದೆ ಮಾಡಿದ ಒಡಂಬಡಿಕೆಯ ವಾಕ್ಯಗಳನ್ನು ಸ್ಥಾಪಿಸದೆ ಇರುವವರನೂ
19 ಯೆಹೂದದ ಪ್ರಧಾನ ರನ್ನೂ ಯೆರೂಸಲೇಮಿನ ಪ್ರಧಾನರನ್ನೂ ಕಂಚುಕಿ ಯರನ್ನೂ ಯಾಜಕರನ್ನೂ ಕರುವಿನ ತುಂಡುಗಳ ನಡುವೆ ದಾಟಿಹೋದ ದೇಶದ ಜನರೆಲ್ಲರನ್ನೂ
20 ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ಒಪ್ಪಿಸುವೆನು: ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗುವವು.
21 ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಿರುವ ಬಾಬೆಲಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.
22 ಕರ್ತನು ಹೇಳುವದೇನಂದರೆ–ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರಿಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡು ವರು; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗ ಮಾಡುವೆನು.

ಅರಸನಾದ ಚಿದ್ಕೀಯನ ಮೇಲೆ ನ್ಯಾಯತೀರ್ಪು
 
ಯೆರೆಮಿಯ 52
1 ಚಿದ್ಕೀಯನು ಆಳುವದಕ್ಕೆ ಆರಂಭಿಸಿದಾಗ ಇಪ್ಪತ್ತೊಂದು ವರುಷದವನಾಗಿದ್ದನು; ಅವನು ಹನ್ನೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು; ಅವನ ತಾಯಿಯ ಹೆಸರು ಲಿಬ್ನದವನಾದ ಯೆರೆವಿಾಯನ ಮಗಳಾದ ಹಮೂಟಲ್‌.
ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
ಕರ್ತನು ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವ ವರೆಗೆ ಮಾಡಿದ ಕೋಪದಿಂದ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
ಅವನ ಆಳಿಕೆಯ ಒಂಭತ್ತನೇ ವರುಷದಲ್ಲಿ, ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ತನ್ನ ಸಮಸ್ತ ಸೈನ್ಯದ ಸಂಗಡ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದಕ್ಕೆ ವಿರೋಧವಾಗಿ ದಂಡಿಳಿದು ಅದಕ್ಕೆ ವಿರೋಧವಾಗಿ ಸುತ್ತಲೂ ಕೋಟೆಗಳನ್ನು ಕಟ್ಟಿದನು.
ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೇ ವರುಷದ ವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು.
ನಾಲ್ಕನೇ ತಿಂಗಳಲ್ಲಿ, ತಿಂಗಳಿನ ಒಂಭತ್ತನೇ ದಿವಸದಲ್ಲಿ ದೇಶಸ್ಥರಿ ಗೋಸ್ಕರ ರೊಟ್ಟಿ ಇಲ್ಲದೆ ಪಟ್ಟಣದಲ್ಲಿ ಕ್ಷಾಮವು ಕಠಿಣವಾಗಿತ್ತು.
ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು.
ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು.
ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್‌ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು.
10 ಬಾಬೇಲಿನ ಅರಸನು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣುಗಳ ಮುಂದೆ ಕೊಂದು ಹಾಕಿಸಿದನು. ಯೆಹೂದದ ಪ್ರಧಾನರೆಲ್ಲ ರನ್ನೂ ಸಹ ರಿಬ್ಲದಲ್ಲಿ ಕೊಂದು ಹಾಕಿಸಿದನು.
11 ಇದಲ್ಲದೆ ಬಾಬೆಲಿನ ಅಸನು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿಸಿ, ಅವನನ್ನು ಹಿತ್ತಾಳೆಯ ಸಂಕೋಲೆಗಳಿಂದ ಕಟ್ಟಿಸಿ, ಬಾಬೆಲಿಗೆ ಒಯ್ದು ಅವನು ಸಾಯುವ ದಿನದ ವರೆಗೆ ಸೆರೆಮನೆಯಲ್ಲಿ ಇಟ್ಟನು.
12 ಬಾಬೆಲಿನ ಅರಸನಾದ ನೆಬೂಕದೇಚ್ಚರನ ಹತ್ತೊಂಭತ್ತನೇ ವರುಷದ, ಐದನೇ ತಿಂಗಳಿನ, ಹತ್ತನೇ ದಿವಸದಲ್ಲಿ, ಬಾಬೆಲಿನ ಅರಸನ ಸೇವಕನೂ ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂ ಸಲೇಮಿಗೆ ಬಂದು,
13 ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
14 ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು.
15 ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
16 ಆದರೆ ಕಾವಲಿನವರ ಅಧಿಪತಿಯಾದ ನೆಬೂಜರದಾನನು ದೇಶದ ಬಡವರಲ್ಲಿ ಕೆಲವರನ್ನು ದ್ರಾಕ್ಷೇತೋಟ ಕಾಯು ವವರಾಗಿಯೂ ಬೇಸಾಯ ಮಾಡುವವರಾಗಿಯೂ ಬಿಟ್ಟನು.
17 ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು.
18 ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು.
19 ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
20 ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು.
21 ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು.
22 ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು;
23 ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು.

ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟರು

24 ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು.
25 ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು.
26 ಇವರನ್ನು ಕಾವಲಿನ ಅಧಿಪತಿಯಾದ ನೆಬೂಜರ ದಾನನು ತಕ್ಕೊಂಡು ಬಾಬೆಲಿನ ಅರಸನ ಬಳಿಗೆ ರಿಬ್ಲಕ್ಕೆ ಒಯ್ದನು.
27 ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್‌ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು.
28 ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ–ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು.
29 ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು.
30 ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು.

ಯೆಹೋಯಾಖೀನನು ಸೆರೆಯಿಂದ ಬಿಡುಗಡೆಯಾದನು

31 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೇ ವರುಷದಲ್ಲಿ, ಹನ್ನೆರಡನೇ ತಿಂಗಳಿನ ಇಪ್ಪತ್ತೈದನೇ ದಿವಸದಲ್ಲಿ ಆದದ್ದೇನಂ ದರೆ–ಬಾಬೆಲಿನ ಅರಸನಾದ ಎವೀಲ್ಮೆರೋದಕನು ತನ್ನ ಆಳಿಕೆಯ ಮೊದಲನೇ ವರುಷದಲ್ಲಿ ಯೆಹೂದದ ಅರಸನಾದ ಯೆಹೋಯಾಖೀನನ ತಲೆಯನ್ನು ಎತ್ತಿ ಅವನನ್ನು ಸೆರೆಮನೆಯೊಳಗಿಂದ ಹೊರಗೆ ತರಿಸಿ ಅವನ ಸಂಗಡ ಕರುಣೆಯಿಂದ ಮಾತನಾಡಿ
32 ಅವನ ಸಿಂಹಾ ಸನವನ್ನು ತನ್ನ ಸಂಗಡ ಬಾಬೆಲಿನಲ್ಲಿದ್ದ ಅರಸರ ಸಿಂಹಾಸನಗಳ ಮೇಲೆ ಇರಿಸಿ ಅವನ ಸೆರೆಮನೆಯ ವಸ್ತ್ರಗಳನ್ನು ಬದಲಾಯಿಸಿದನು.
33 ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.
34 ಅವನ ಆಹಾರದ ವಿಷಯ ವೇನಂದರೆ–ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.

ದಾನಿಯೇಲನ ಪುಸ್ತಕದಿಂದ ಪ್ರವಾದಿಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು

ದಾನಿಯೇಲನು 1

ಬಾಬೆಲಿನಲ್ಲಿ ದಾನಿಯೇಲನ ತರಬೇತಿ

1 ಯೆಹೂದದ ಅರಸನಾದ ಯೆಹೋಯಾ ಕೀಮನ ಆಳಿಕೆಯ ಮೂರನೆಯ ವರುಷ ದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂ ಸಲೇಮಿಗೆ ಬಂದು ಮುತ್ತಿಗೆ ಹಾಕಿದನು.
ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್‌ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
ಅರಸನು ತನ್ನ ಕಂಚುಕಿಯರ ಯಜಮಾನನಾದ ಅಶ್ವೆವಜನ ಸಂಗಡ ಮಾತನಾಡಿ ಅವನು ಇಸ್ರಾಯೇಲಿನ ಮಕ್ಕಳೊಳಗೆ ಕೆಲವರನ್ನು ಅರಸನ ಸಂತಾನದೊಳ ಗಿಂದಲೂ ಮತ್ತು ಪ್ರಧಾನರಲ್ಲಿಯೂ
ಕಳಂಕ ಇಲ್ಲ ದವರಾಗಿಯೂ ಸುಂದರರಾಗಿಯೂ ಸಕಲ ಜ್ಞಾನದಲ್ಲಿ ಪ್ರವೀಣರಾಗಿಯೂ ತಿಳುವಳಿಕೆಯಲ್ಲಿ ನಿಪುಣರಾ ಗಿಯೂ ಮತ್ತು ವಿಜ್ಞಾನದಲ್ಲಿ ತಿಳುವಳಿಕೆಯುಳ್ಳವ ರಾಗಿಯೂ ಅರಸನ ಅರಮನೆಯಲ್ಲಿ ಸೇವೆಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಕಸ್ದೀಯರ ವಿದ್ಯೆಯನ್ನೂ ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು.
ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು.
ಇವರಲ್ಲಿ ಯೆಹೂದನ ಮಕ್ಕಳೊಳಗಿಂದ ದಾನಿಯೇಲ, ಹನನ್ಯ, ವಿಾಶಾಯೇಲ, ಅಜರ್ಯ ಎಂಬವರಿದ್ದರು.
ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್‌ನೆಂದೂ ವಿಾಶಾಯೇಲನನ್ನು ಮೇಶಕ್‌ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು.
ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು.
ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು.
10 ಕಂಚುಕಿಯ ಯಜಮಾ ನನು ಹೇಳಿದ್ದೇನಂದರೆ–ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯನಾದ ಅರಸನಿಗೆ ನಾನು ಭಯಪಡುತ್ತೇನೆ; ಅವನು ಯಾಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು? ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ ಅಂದನು.
11 ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್‌, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ–
12 ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ.
13 ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು.
14 ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ ಹತ್ತು ದಿವಸಗಳ ವರೆಗೂ ಅವರನ್ನು ಪರೀಕ್ಷಿಸಿದನು.
15 ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು.
16 ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂತ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು.
17 ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು.
18 ಆಗ ಅರಸನು ಅವರನ್ನು ತರಬೇಕೆಂದು ಹೇಳಿದ್ದರಿಂದ ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು.
19 ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು.
20 ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.

ಬಂಗಾರದ ಪ್ರತಿಮೆ ಮತ್ತು ಉರಿಯುವ ಬೆಂಕಿಯ ಆವಿ

ದಾನಿಯೇಲನು 3
1 ಅರಸನಾದ ನೆಬೂಕದ್ನೆಚ್ಚರನು ಅರವತ್ತು ಮೊಳ ಎತ್ತರವಾಗಿಯೂ ಆರು ಮೊಳ ಅಗಲವಾಗಿಯೂ ಇರುವ ಒಂದು ಬಂಗಾರದ ಪ್ರತಿ ಮೆಯನ್ನು ಮಾಡಿಸಿ, ಬಾಬೆಲ್‌ ಪ್ರಾಂತ್ಯದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
ಆ ಮೇಲೆ ಅರಸನಾದ ನೆಬೂಕದ್ನೆಚ್ಚರನು ಪ್ರಭುಗಳನ್ನೂ ರಾಜ್ಯ ಪಾಲರನ್ನೂ ಆಲೋಚನಾಕರ್ತರು ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಬೊಕ್ಕಸದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿ ಷ್ಠೆಗೆ ಕರೆಯಿಸಿದನು.
ಆಗ ಪ್ರಧಾನರು (ಆಲೋಚ ನಾಗಾರರು) ರಾಜ್ಯಪಾಲರು ಅಧಿಕಾರಸ್ಥರು, ನ್ಯಾಯಾ ಧಿಪತಿಗಳು, ಬೊಕ್ಕಸದವರು ಸಲಹೆಗಾರರು, ಪಂಡಿ ತರು, ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೆಗಾಗಿ ಕೂಡಿ ಬಂದು ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ಬಂದು ನಿಂತರು.
ಆಗ ಸಾರುವವನು ಗಟ್ಟಿ ಯಾಗಿ ಕೂಗಿ–ಓ ಪ್ರಜೆಗಳೇ, ಜನಾಂಗಗಳೇ ಮತ್ತು ನಾನಾ ಭಾಷೆಯವರೇ, ನಿಮಗೆ ಆಜ್ಞಾಪಿಸುವದೇ ನಂದರೆ–
ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.
ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು.
ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು
ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ–ಓ ಅರಸನೇ, ನೀನು ನಿರಂತರವಾಗಿ ಬಾಳು.
10 ಓ ಅರಸನೇ, ನೀನು ಪ್ರತಿಯೊಬ್ಬ ಮನುಷ್ಯನು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ
11 ಅಡ್ಡಬೀಳದೆಯೂ ಆರಾಧಿಸದೆಯೂ ಇರುವವ ನನ್ನು ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡಬೇಕೆಂದೂ ಆಜ್ಞೆಕೊಟ್ಟಿರುವೆಯಲ್ಲಾ!
12 ಈಗ ನೀನು ಬಾಬೆಲ್‌ ಪ್ರಾಂತ್ಯದ ಕೆಲಸಗಳ ಮೇಲೆ ಇಟ್ಟಿರುವ ಕೆಲವರು ಯೆಹೂದ್ಯರು ಇದ್ದಾರೆ, ಅಂದರೆ ಶದ್ರಕ್‌ ಮೇಷಕ್‌ ಅಬೇದ್‌ನೆಗೋ. ಓ ಅರಸನೇ, ಈ ಮನು ಷ್ಯರು ನಿನ್ನನ್ನು ಲಕ್ಷಿಸುವದಿಲ್ಲ. ಅವರು ನಿನ್ನ ದೇವರು ಗಳನ್ನೂ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯ ನ್ನಾದರೂ ಸೇವಿಸಲಿಲ್ಲ ಎಂದು ಹೇಳಿದರು.
13 ಆಗ ನೆಬೂಕದ್ನೆಚ್ಚರನು ಕೋಪವುಳ್ಳವನಾಗಿಯೂ ರೌದ್ರ ವುಳ್ಳವನಾಗಿಯೂ ಶದ್ರಕ್‌ ಮೇಷಕ್‌ ಅಬೇದ್‌ ನೆಗೋರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆ ತಂದರು.
14 ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ–ಶದ್ರಕ್‌ ಮೇಷಕ್‌ ಅಬೇದೆನೆಗೋ ಎಂಬ ವರೇ ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾ ಧಿಸದೆ ಇರಬೇಕೆಂದಿರುವಿರೋ?
15 ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.
16 ಆಗ ಶದ್ರಕ್‌ ಮೇಷಕ್‌ ಅಬೇದ್‌ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ–ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ.
17 ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು.
18 ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.
19 ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್‌ ಮೇಷಕ್‌ಅಬೇದ್‌ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು.
20 ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್‌, ಮೇಷಕ್‌, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.
21 ಅವರು ತಮ್ಮ ಶಲ್ಯ, ಇಜಾರು, ಮುಂಡಾಸ ಮೊದಲಾದವುಗಳನ್ನು ಧರಿಸಿಕೊಂಡವರಾಗಿರುವಾಗ ಅವರು ಧಗಧಗನೆ ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಲ್ಪಟ್ಟರು.
22 ಅರಸನ ಆಜ್ಞೆಯು ತೀಕ್ಷ್ಣವಾಗಿಯೂ ಆವಿಗೆಯು ಧಗಧಗನೆ ಉರಿದದ್ದರಿಂದಲೂ ಬೆಂಕಿಯ ಜ್ವಾಲೆಯು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು.
23 ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವ ರಾಗಿ ಧಗಧಗನೆ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಬಿದ್ದರು.
24 ಆಗ ಅರಸನಾದ ನೆಬೂಕದ್ನೆ ಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು ತನ್ನ ಆಲೋಚನಾಗಾರರ ಸಂಗಡ ಮಾತನಾಡಿ–ನಾವು ಮೂವರು ಮನುಷ್ಯರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿದೆ ವಲ್ಲವೇ? ಅಂದನು. ಆಗ ಅವರು ಅರಸನಿಗೆ–ಓ ಅರಸನೇ, ಹೌದು, ಸತ್ಯ ಎಂದು ಉತ್ತರಿಸಿದರು.
25 ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ–ಇಗೋ, ಕಟ್ಟಲ್ಪಡದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿ ರುವದನ್ನು ನೋಡುತ್ತೇನೆ; ಅವರಿಗೆ ಯಾವ ಹಾನಿಯೂ ಇಲ್ಲ; ಅಲ್ಲದೆ ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು.
26 ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ–ಓ ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
27 ಆಗ ಪ್ರಧಾನರು ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು ಎಲ್ಲರೂ ಒಟ್ಟುಗೂಡಿ ಇವರ ಶರೀರದ ಮೇಲೆ ಬೆಂಕಿಯ ಅಧಿಕಾರವು ಇಲ್ಲದಿ ರುವದನ್ನೂ ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಡದಿರುವದನ್ನೂ ಅವರ ಅಂಗಿಗಳು ಬದಲಾಗದಿರು ವದನ್ನೂ ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವ ಆ ಮನುಷ್ಯರನ್ನು ಕಂಡರು.
28 ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ–ಶದ್ರಕ್‌ ಮೇಷಕ್‌ ಅಬೇದ್‌ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ.
29 ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.
30 ಆಗ ಅರಸನು ಶದ್ರಕ್‌ ಮೇಷಕ್‌ ಅಬೇದ್‌ನೆಗೋ ಎಂಬ ವರನ್ನು ಬಾಬೆಲ್‌ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.

ನೆಬೂಕದ್ನೆಚ್ಚರನಿಗೆ ಉಂಟಾದ ಮರದ ದರ್ಶನ

ದಾನಿಯೇಲನು 4
1 ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ–ನಿಮಗೆ ಶಾಂತಿಯು ಹೆಚ್ಚಾಗಲಿ.
ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ;
ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.
ಆದದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವದಕ್ಕೋಸ್ಕರ ಬಾಬೆಲಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.
ಆಗ ಮಂತ್ರಗಾರರು, ಜೋತಿಷ್ಯರು, ಕಸ್ದೀಯರು, ಶಕುನಗಾರರು ಒಳಗೆ ಬಂದರು; ನಾನು ಕನಸನ್ನು ಅವರಿಗೆ ತಿಳಿಸಿದೆನು; ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.
ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ–
ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.
10 ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು–ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.
11 ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು.
12 ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು.
13 ನನ್ನ ಹಾಸಿಗೆಯ ಮೇಲೆ ನನ್ನ ಮನಸ್ಸಿನ ದರ್ಶನ ಗಳನ್ನು ನಾನು ನೋಡಲಾಗಿ; ಇಗೋ, ಒಬ್ಬ ಪಾಲಕನು ಮತ್ತು ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು.
14 ಅವನು ಗಟ್ಟಿಯಾಗಿ ಕೂಗಿ–ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ.
15 ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ.
16 ಅವನ ಹೃದಯವು ಮನುಷ್ಯನ ಹೃದಯದಂತೆ ಇರದೆ ಬದಲಾಗಲಿ; ಮೃಗದ ಹೃದಯವು ಅವನಿಗೆ ಕೊಡಲ್ಪಡಲಿ; ಏಳು ಕಾಲಗಳು ಅವನನ್ನು ದಾಟಿಹೋಗಲಿ ಎಂದು ಹೇಳಿದನು.
17 ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.
18 ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು.

ದಾನಿಯೇಲನು ದರ್ಶನದ ಅರ್ಥವನ್ನುತಿಳಿಸುತಾನೆ

19 ಆಗ ಬೆಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ– ಬೆಲ್ತೆಶಚ್ಚರನೇ, ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಕಳವಳಪಡಿಸದಿರಲಿ ಅಂದನು. ಆಗ ಬೆಲ್ತೆಶ ಚ್ಚರನು ಪ್ರತ್ಯುತ್ತರವಾಗಿ–ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.
20 ನೀನು ಕಂಡ ಮರವು ಬೆಳೆದು ಬಲವಾ ದದ್ದೂ ಅದರ ಎತ್ತರವು ಆಕಾಶಕ್ಕೂ ಅದರ ದೃಷ್ಟಿಯು ಭೂಮಿಯ ಎಲ್ಲಾ ಕಡೆಯವರೆಗೂ ಇವೆ;
21 ಅದರ ಎಲೆಗಳು ಅಂದವಾಗಿದ್ದವು, ಫಲವು ಬಹಳವಾಗಿತ್ತು, ಅದರಲ್ಲಿ ಎಲ್ಲರಿಗೂ ಆಹಾರ ಇತ್ತು; ಅದರ ಕೆಳಗೆ ಬಯಲಿನ ಮೃಗಗಳು ವಾಸಮಾಡಿದ್ದವು; ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸಮಾಡಿದ್ದವು.
22 ಓ ಅರಸನೇ, ಆ ಮರವು ನೀನೇ ಆಗಿರುವಿ, ನೀನು ಬೆಳೆದು ಬಲವಾಗಿರುವಿ; ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ ನಿನ್ನ ಅಧಿಕಾರವು ಭೂಮಿಯ ಅಂತ್ಯದ ವರೆಗೂ ಮುಟ್ಟುವದು.
23 ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು–ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ.
24 ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ.
25 ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.
26 ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.
27 ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.

ಕನಸು ನೆರವೇರಿತು

28 ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭ ವಿಸಿತು.
29 ಹನ್ನೆರಡು ತಿಂಗಳಾದ ಮೇಲೆ ಅವನು ಬಾಬೆಲಿನ ರಾಜ್ಯದ ಅರಮನೆಯಲ್ಲಿ ತಿರುಗಾಡಿದನು.
30 ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ–ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.
31 ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ–ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು.
32 ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
33 ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು.
34 ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
35 ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
36 ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.
37 ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
ದೇವಾಲಯದ ಪಾತ್ರೆಗಳನ್ನು ದುರುಪಯೋಗಪಡಿಸಿಕೊಂಡದರಿಂದ ಬಂದ ನ್ಯಾಯತೀರ್ಪು (ಯೆರೆಮಿಯ 52:18)

ಗೋಡೆಯ ಮೇಲೆ ಬರೆಯುವ ಕೈಭಾಗ

ದಾನಿಯೇಲನು 5

1 ಅರಸನಾದ ಬೆಲ್ಯಚ್ಚರನು ತನ್ನ ಪ್ರಭುಗಳಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಆ ಸಾವಿರ ಮಂದಿಯ ಮುಂದೆ ಅವನು ದ್ರಾಕ್ಷಾರಸವನ್ನು ಕುಡಿದನು.
ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.
ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.
ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.
ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
ಆಗ ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ ಕಸ್ದೀಯರನ್ನೂ ಶಕುನರನ್ನೂ ಕರೆಸಿ ಬಾಬೆಲಿನ ಜ್ಞಾನಿ ಗಳಿಗೆ ಹೇಳಿದ್ದೇನಂದರೆ–ಯಾವನೂ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ತಿಳಿಸುವನೋ ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ ರಾಜ್ಯದ ಮೂರನೆಯ ಅಧಿಕಾರಿ ಯಾಗಿ ಮಾಡುವೆನು ಅಂದನು.
ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹ ವನ್ನು ಓದಲೂ ಅದರ ಅರ್ಥವನ್ನು ಅರಸನಿಗೆ ತಿಳಿ ಸಲೂ ಅವರಿಗೆ ಆಗದೆಹೋಯಿತು.
ಆಗ ಅರಸ ನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು, ಅವನ ಮುಖವು ಕಳೆಗುಂದಿತು. ಅವನ ಪ್ರಭುಗಳು ವಿಸ್ಮಯಗೊಂಡರು.
10 ಆಗ ಅರಸನ ಮತ್ತು ಅವನ ಪ್ರಭುಗಳ ಮಾತುಗಳಿಗಾಗಿ ರಾಣಿಯು ಔತಣದ ಮನೆಗೆ ಬಂದು ಮಾತನಾಡಿ ಹೇಳಿದ್ದೇನಂದರೆ–ಓ ಅರಸನೇ, ನಿರಂತರವಾಗಿ ಬಾಳು. ನಿನ್ನ ಆಲೋ ಚನೆಗಳು ನಿನ್ನನ್ನು ಕಳವಳಪಡಿಸದಿರಲಿ; ನಿನ್ನ ಮುಖವು ಕಳೆಗುಂದದಿರಲಿ;
11 ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
12 ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು.
13 ಆಗ ದಾನಿಯೇಲನು ಅರಸನ ಮುಂದೆ ತರಲ್ಪಟ್ಟನು. ಅರಸನು ದಾನಿಯೇಲನಿಗೆ–ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ?
14 ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ ಬೆಳಕೂ ಬುದ್ಧಿಯೂ ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ.
15 ಈಗ ಈ ಬರಹವನ್ನು ಓದುವದಕ್ಕೂ ಅದರ ಅಭಿಪ್ರಾಯವನ್ನು ನನಗೆ ತಿಳಿಸು ವದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ತರಲ್ಪಟ್ಟಿದ್ದಾರೆ, ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು.
16 ನೀನು ಅರ್ಥಗಳನ್ನು ವಿವರಿಸುವದ ರಲ್ಲಿಯೂ ಮರ್ಮಗಳನ್ನು ಬಿಚ್ಚುವದರಲ್ಲಿಯೂ ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ; ಹೀಗಾದರೆ ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ತಿಳಿಸುವದಕ್ಕೂ ನಿನ್ನಿಂದ ಆದರೆ ನೀನು ಧೂಮ್ರವಸ್ತ್ರ ಧರಿಸಲ್ಪಟ್ಟು ಕೊರಳಿಗೆ ಚಿನ್ನದ ಹಾರ ಹಾಕಿಸಿಕೊಂಡವನಾಗಿ ರಾಜ್ಯದ ಮೂರನೆಯ ಅಧಿಕಾರಿ ಯಾಗುವಿ ಎಂದು ಹೇಳಿದನು.
17 ಆಗ ದಾನಿಯೇಲನು ಅರಸನ ಮುಂದೆ–ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳನ್ನು ಮತ್ತೊಬ್ಬರಿಗೆ ಕೊಡು, ನಾನು ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ತಿಳಿಸು ವೆನು ಅಂದನು.
18 ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.
19 ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು.
20 ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು;
21 ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು.
22 ಅವನ ಮಗನಾದ ಓ ಬೇಲ್ಯಚ್ಚರನೇ–ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ
23 ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
24 ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು.
25 ಆ ಬರಹವು ಏನಂದರೆ ಮೆನೇ ಮೆನೇ ತೇಕಲ್‌ ಉಫ ರ್ಸಿನ್‌,
26 ಇದರ ಅರ್ಥವು ಹೀಗಿದೆ–ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ;
27 ತೇಕೆಲ್‌ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.
28 ಪೆರೇಸ್‌ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು.
29 ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು.
30 ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.
31 ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
 
ಯೆಹೆಜ್ಕೇಲನು ಬಾಬೆಲಿನಲ್ಲಿ ಸೆರೆಯಾಗಿದ್ದಾಗ ಕಂಡ ದೇವರ ದರ್ಶನ
 
ಯೆಹೆಜ್ಕೇಲನು 1
1 ನಾನು ಸೆರೆಯವರ ಜೊತೆ ಕೆಬಾರ್‌ ನದಿಯ ಬಳಿಯಲ್ಲಿರುವಾಗ ಮೂವತ್ತ ನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆದದ್ದೇನಂದರೆ, ಆಕಾಶಗಳು ತೆರೆಯಲ್ಪ ಟ್ಟವು; ನಾನು ದೇವರ ದರ್ಶನಗಳನ್ನು ಕಂಡೆನು.
ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಖೀನನ ಸೆರೆಯ ಐದನೆಯ ವರುಷದಲಿ
ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್‌ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.

 
 

Related Quiz Articles