ಮತ್ತಾಯನು 8
28
ಆತನು ಆಚೆಯ ದಡದ ಗದರೇನರ ದೇಶಕ್ಕೆ ಬಂದಾಗ ದೆವ್ವಗಳು ಹಿಡಿದಿದ್ದ ಇಬ್ಬರು ಸಮಾಧಿ ಗಳೊಳಗಿಂದ ಆತನ ಎದುರಿಗೆ ಬಂದರು. ಅವರು ಬಹು ಉಗ್ರತೆಯುಳ್ಳವರಾಗಿದ್ದದರಿಂದ ಯಾವ ಮನು ಷ್ಯನೂ ಆ ಮಾರ್ಗವಾಗಿ ಹೋಗುವ ಹಾಗಿದ್ದಿಲ್ಲ.
29 ಆಗ ಇಗೋ, ಅವರು–ಯೇಸುವೇ, ದೇವ ಕುಮಾರನೇ, ನಿನ್ನೊಂದಿಗೆ ನಮ್ಮ ಗೊಡವೆ ಏನು? ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು.
30 ಆಗ ಅವರಿಗೆ ಬಹು ದೂರದಲ್ಲಿ ಬಹಳ ಹಂದಿಗಳ ಗುಂಪು ಮೇಯುತ್ತಿತ್ತು.
31 ಆದದರಿಂದ ದೆವ್ವಗಳು ಆತನಿಗೆ–ನೀನು ನಮ್ಮನ್ನು ಹೊರಗೆ ಹಾಕುವದಾದರೆ ಆ ಹಂದಿಗಳ ಗುಂಪಿನೊಳಗೆ ಸೇರಿಕೊಳ್ಳುವದಕ್ಕೆ ನಮಗೆ ಅಪ್ಪಣೆ ಕೊಡು ಎಂದು ಬೇಡಿಕೊಂಡವು.
32 ಆತನು ಅವುಗಳಿಗೆ–ಹೋಗಿರಿ ಅಂದನು. ಆಗ ಅವು ಹೊರಗೆ ಬಂದು ಹಂದಿಗಳ ಗುಂಪಿನೊಳಗೆ ಸೇರಿಕೊಂಡವು; ಆಗ ಇಗೋ, ಹಂದಿಗಳ ಗುಂಪೆಲ್ಲಾ ಸಮುದ್ರದ ಕಡಿದಾದ ಸ್ಥಳಕ್ಕೆ ಉಗ್ರವಾಗಿ ಓಡಿಹೋಗಿ ನೀರಿನಲ್ಲಿ ಬಿದ್ದು ಸತ್ತು ಹೋದವು.
33 ಮತ್ತು ಅವುಗಳನ್ನು ಕಾಯುತ್ತಿದ್ದವರು ಪಟ್ಟಣ ದೊಳಕ್ಕೆ ಓಡಿಹೋಗಿ ಎಲ್ಲವನ್ನೂ ದೆವ್ವಗಳು ಹಿಡಿದಿದ್ದವರಿಗೆ ಸಂಭವಿಸಿದ್ದನ್ನೂ ತಿಳಿಯಪಡಿಸಿದರು.
34 ಆಗ ಇಗೋ, ಪಟ್ಟಣದವರೆಲ್ಲರು ಯೇಸುವನ್ನು ಸಂಧಿಸುವದಕ್ಕೆ ಹೊರಗೆ ಬಂದರು; ಮತ್ತು ಅವರು ಆತನನ್ನು ನೋಡಿ ತಮ್ಮ ಮೇರೆಗಳನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.