ದೇವರ ರಾಜ್ಯ ಮತ್ತು ಪರಲೋಕ ರಾಜ್ಯ

ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.

ಮತ್ತಾಯನು 5:3 ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.

ಯಾವುದಕ್ಕೂ ಚಿಂತೆ ಮಾಡದೆ ದೇವರ ರಾಜ್ಯವನ್ನು ಹುಡುಕಿರಿ

ಮತ್ತಾಯನು 6
25 ಆದಕಾರಣ ನಾನು ನಿಮಗೆ ಹೇಳುವದೇ ನಂದರೆ–ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ
26 ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
27 ನಿಮ್ಮಲ್ಲಿ ಯಾವ ನಾದರೂ ಚಿಂತೆಮಾಡಿ ತನ್ನ ನೀಳವನ್ನು ಒಂದು ಮೊಳ ಉದ್ದ ಬೆಳೆಸಿಕೊಳ್ಳಲು ಸಾಧ್ಯವಾದೀತೇ?
28 ಮತ್ತು ಉಡುಪಿಗಾಗಿ ನೀವು ಯಾಕೆ ಚಿಂತೆ ಮಾಡುತ್ತೀರಿ? ಹೊಲದಲ್ಲಿ ತಾವರೆಗಳು ಹೇಗೆ ಬೆಳೆಯುತ್ತವೆ ಎಂಬದನ್ನು ಗಮನಿಸಿರಿ; ಅವು ಕಷ್ಟಪಡು ವದಿಲ್ಲ ಮತ್ತು ನೂಲುವದೂ ಇಲ್ಲ.
29 ಆದರೂ ನಾನು ನಿಮಗೆ ಹೇಳುವದೇನಂದರೆ– ಸೊಲೊಮೋನನು ಸಹ ತನ್ನ ಎಲ್ಲಾ ವೈಭವದಲ್ಲಿಯೂ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ.
30 ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ?
31 ಆದಕಾರಣ–ನಾವು ಏನು ಊಟಮಾಡಬೇಕು? ಇಲ್ಲವೆ ಏನು ಕುಡಿಯಬೇಕು? ಇಲ್ಲವೆ ಯಾವದನ್ನು ಧರಿಸಿಕೊಳ್ಳಬೇಕು ಎಂದು ಹೇಳುತ್ತಾ ಚಿಂತೆಮಾಡ ಬೇಡಿರಿ.
32 (ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ.
33 ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.
34 ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.

ಲೂಕನು 12
22 ಆತನು ತನ್ನ ಶಿಷ್ಯರಿಗೆ–ನೀವು ನಿಮ್ಮ ಪ್ರಾಣಕ್ಕೆ ಏನು ತಿನ್ನಬೇಕು ಇಲ್ಲವೆ ನಿಮ್ಮ ದೇಹಕ್ಕೆ ಏನು ಹೊದ್ದು ಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
23 ಊಟಕ್ಕಿಂತ ಪ್ರಾಣವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು.
24 ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ; ಅವುಗಳಿಗೆ ಉಗ್ರಾಣವಾಗಲೀ ಕಣಜವಾಗಲೀ ಇಲ್ಲ; ಆದಾಗ್ಯೂ ದೇವರು ಅವುಗಳಿಗೆ ಆಹಾರ ಕೊಡುತ್ತಾನೆ; ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚಿನವರಾಗಿದ್ದೀರಲ್ಲಾ.
25 ನಿಮ್ಮಲ್ಲಿ ಯಾವನು ಚಿಂತೆ ಮಾಡಿ ತನ್ನ ನೀಳಕ್ಕೆ ಒಂದು ಮೊಳವನ್ನು ಕೂಡಿಸಿ ಯಾನು?
26 ಹಾಗಾದರೆ ಅತ್ಯಲ್ಪವಾಗಿರುವದನ್ನು ನೀವು ಮಾಡಲಾರದವರಾಗಿದ್ದರೆ ಉಳಿದವುಗಳಿಗೋಸ್ಕರ ನೀವು ಚಿಂತೆಮಾಡುವದೇನು?
27 ಹೂವುಗಳು ಹೇಗೆ ಬೆಳೆಯುತ್ತವೆ ಯೋಚಿಸಿರಿ; ಅವು ಕಷ್ಟಪಡು ವದಿಲ್ಲ, ನೂಲುವದಿಲ್ಲ; ಆದಾಗ್ಯೂ ಸೊಲೊಮೋ ನನು ತನ್ನ ಎಲ್ಲಾ ವೈಭವದಲ್ಲಿ ಸಹ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
28 ಓ ಅಲ್ಪ ವಿಶ್ವಾಸಿಗಳೇ, ಹಾಗಾದರೆ ಈಹೊತ್ತು ಹೊಲದಲ್ಲಿದ್ದು ನಾಳೆ ಒಲೆಯಲ್ಲಿ ಹಾಕಲ್ಪಡುವ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವನಲ್ಲವೇ?
29 ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ.
30 ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು.
31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ. ಆಗ ಇವೆಲ್ಲವುಗಳು ನಿಮಗೆ ಕೂಡಿಸಲ್ಪಡುವವು.
32 ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.

ಮತ್ತಾಯನು 9
35 ತರುವಾಯ ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಸಂಚರಿ ಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಿಸುತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಪ್ರತಿಯೊಂದು ಅಸ್ವಸ್ಥತೆಯನ್ನೂ ರೋಗವನ್ನೂ ವಾಸಿಮಾಡಿದರು.
36 ಆದರೆ ಆತನು ಜನರ ಸಮೂಹಗಳನ್ನು ಕಂಡು ಅವರ ಮೇಲೆ ಕನಿಕರಪಟ್ಟನು; ಯಾಕಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಚದರಿಸಲ್ಪಟ್ಟು ಬಳಲಿದವರಾಗಿದ್ದರು.
37 ಆಗ ಆತನು ತನ್ನ ಶಿಷ್ಯ ರಿಗೆ–ಬೆಳೆಯು ನಿಜವಾಗಿಯೂ ಬಹಳ; ಆದರೆ ಕೆಲಸದವರು ಸ್ವಲ್ಪ.
38 ಆದದರಿಂದ ಬೆಳೆಯ ಯಜ ಮಾನನು ಕೆಲಸಗಾರರನ್ನು ತನ್ನ ಬೆಳೆಗೆ ಕಳುಹಿಸುವಂತೆ ಆತನನ್ನು ಪ್ರಾರ್ಥಿಸಿರಿ ಅಂದನು.

ಮತ್ತಾಯನು 10
5 ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ–ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
ಆದರೆ ತಪ್ಪಿಸಿಕೊಂಡ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ಹೋಗಿರಿ.
ನೀವು ಹೋಗುವಾಗ– ಪರಲೋಕ ರಾಜ್ಯವು ಸಮಾಪವಾಯಿತು ಎಂದು ಸಾರಿ ಹೇಳಿರಿ.
ರೋಗಿಗಳನ್ನು ಸ್ವಸ್ಥಮಾಡಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ಸತ್ತವರನ್ನು ಎಬ್ಬಿಸಿರಿ, ದೆವ್ವಗಳನ್ನು ಬಿಡಿಸಿರಿ; ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತ ವಾಗಿ ಕೊಡಿರಿ.
ನಿಮ್ಮ ಹಮ್ಮಾಣಿಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಹಿತ್ತಾಳೆ ಇಟ್ಟುಕೊಳ್ಳಬೇಡಿರಿ.
10 ಪ್ರಯಾಣಕ್ಕೆ ಹಸಿಬೆಯನ್ನಾಗಲೀ ಎರಡು ಮೇಲಂಗಿಗಳ ನ್ನಾಗಲೀ ಕೆರಗಳನ್ನಾಗಲೀ ಕೋಲುಗಳನ್ನಾಗಲೀ ತಕ್ಕೊ ಳ್ಳಬೇಡಿರಿ; ಯಾಕಂದರೆ ಕೆಲಸ ಮಾಡುವವನು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
11 ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ;
12 ನೀವು ಒಂದು ಮನೆಯೊಳಕ್ಕೆ ಬಂದಾಗ ಅವರನ್ನು ವಂದಿಸಿರಿ.
13 ಆ ಮನೆಯು ಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ಅದರ ಮೇಲೆ ಬರಲಿ; ಆದರೆ ಅದು ಅಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.

ಲೂಕನು 9
1 ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು.
ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು.
ಆತನು ಅವರಿಗೆ–ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.
ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ.
5 ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಹೋದರೆ ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದ ಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ ಅಂದನು.
ಅವರು ಊರುಗಳನ್ನು ಹಾದು ಹೋಗುವಾಗ ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿ ಸ್ವಸ್ಥ ಮಾಡುತ್ತಾ ಹೋದರು.

ಯೋಹಾನನು 18
36 ಯೇಸು ಪ್ರತ್ಯುತ್ತರವಾಗಿ–ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರಿಗೆ ಒಪ್ಪಿಸಲ್ಪಡದ ಹಾಗೆ ನನ್ನ ಸೇವಕರು ಕಾದಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ ಅಂದನು.
37 ಆದದರಿಂದ ಪಿಲಾತನು ಆತನಿಗೆ–ಹಾಗಾದರೆ ನೀನು ಅರಸನೋ ಅನ್ನಲು ಯೇಸು ಪ್ರತ್ಯುತ್ತರವಾಗಿ–ನಾನು ಅರಸ ನಾಗಿದ್ದೇನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿಕೊಡುವದಕ್ಕೋಸ್ಕರ ಹುಟ್ಟಿ ಅದಕ್ಕೋಸ್ಕರವೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸಂಬಂಧಿಸಿದ ಪ್ರತಿಯೊ ಬ್ಬನು ನನ್ನ ಸ್ವರವನು
38 ಪಿಲಾ ತನು ಆತನಿಗೆ–ಸತ್ಯ ಅಂದರೇನು? ಅಂದನು. ಅವನು ಇದನ್ನು ಕೇಳಿದ ಮೇಲೆ ತಿರಿಗಿ ಯೆಹೂದ್ಯರ ಬಳಿಗೆ ಹೊರಗೆ ಬಂದು ಅವರಿಗೆ–ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.

ಲೂಕನು 17
20 ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಲು ಆತನು ಅವರಿಗೆ ಪ್ರತ್ಯುತ್ತರವಾಗಿ–ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವದಿಲ್ಲ.
21 ಇದಲ್ಲದೆ–ಇಗೋ, ಇಲ್ಲಿದೆ! ಇಲ್ಲವೆ ಅಗೋ, ಅಲ್ಲಿದೆ ಎಂದು ಅವರು ಹೇಳುವದಕ್ಕಾಗು ವದಿಲ್ಲ; ಯಾಕಂದರೆ ಇಗೋ, ದೇವರ ರಾಜ್ಯವು ನಿಮ್ಮೊಳಗೆ ಇದೆ ಅಂದನು.

ರೋಮಾಪುರದವರಿಗೆ 14: 17
ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ.

ಪರಲೋಕರಾಜ್ಯವು ಸಮಾಪ ವಾಗಿದೆ

ಮತ್ತಾಯನು 3
1 ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ–
ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.
ಯಾಕಂದರೆ–ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ.

ಮಾರ್ಕನು 1
ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.
10 ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
11 ಆಗ–ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
12 ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
13 ಆತನು ನಾಲ್ವತ್ತು ದಿವಸ ಅಡವಿ ಯಲ್ಲಿ ಸೈತಾನನಿಂದ ಶೋಧಿಸಲ್ಪಡುತ್ತಾ ಕಾಡು ಮೃಗ ಗಳೊಂದಿಗೆ ಇದ್ದನು; ಮತ್ತು ದೂತರು ಆತನನ್ನು ಉಪಚರಿಸಿದರು.
14 ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ–
15 ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ ಅಂದನು.

ಮತ್ತಾಯನು 4
12 ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಯೇಸು ಕೇಳಿ ಗಲಿಲಾಯಕ್ಕೆ ಹೊರಟುಹೋದನು.
13 ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್‌, ನೆಫ್ತಲೀಮ್‌ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
14 ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು; ಅದೇನಂದರೆ–
15 ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್‌ ಪ್ರಾಂತ್ಯದಲ್ಲಿಯೂ ನೆಫ್ತಲೀಮ್‌ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ
16 ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ.
17 ಅಂದಿನಿಂದ ಯೇಸು–ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪಿಸಿತು ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.

ಲೂಕನು 10
5 ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು–ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ.
ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು.
ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ;
ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ.
ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ.
10 ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ–
11 ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ.
12 ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.

ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ

ಮತ್ತಾಯನು 12
28 ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ.
29 ಇಲ್ಲವೆ ಯಾವನಾದರೂ ಮೊದಲು ಬಲವುಳ್ಳ ಮನುಷ್ಯನನ್ನು ಕಟ್ಟಿಹಾಕದ ಹೊರತು ಅವನ ಮನೆ ಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳು ವದಕ್ಕಾದೀತೇ? ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವದಕ್ಕಾಗುವದು.
30 ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು.
31 ಆದಕಾರಣ ನಾನು ನಿಮಗೆ ಹೇಳುವದೇ ನಂದರೆ– ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು; ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ.
32 ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ.

ಲೂಕನು 11
14 ತರುವಾಯ ಆತನು ಒಂದು ಮೂಕದೆವ್ವವನ್ನು ಹೊರಡಿಸುತ್ತಿರುವಾಗ ಆದದ್ದೇನಂದರೆ, ಆ ದೆವ್ವವು ಹೊರಟು ಹೋದ ಮೇಲೆ ಆ ಮೂಕನು ಮಾತನಾಡಿ ದನು; ಅದಕ್ಕೆ ಜನರು ಆಶ್ಚರ್ಯಪಟ್ಟರು.
15 ಆದರೆ ಅವರಲ್ಲಿ ಕೆಲವರು–ದೆವ್ವಗಳ ಅಧಿಪತಿಯಾದ ಬೆಲ್ಜೆ ಬೂಲನಿಂದ ಅವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
16 ಬೇರೆಯವರು ಆತನನ್ನು ಶೋಧಿಸುವವ ರಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸುವಂತೆ ಆತನನ್ನು ಕೇಳಿದರು.
17 ಆದರೆ ಆತನು ಅವರ ಅಲೋಚನೆಗಳನ್ನು ತಿಳಿದವನಾಗಿ ಅವರಿಗೆ–ತನ್ನಲ್ಲಿ ವಿರೋಧವಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುವದು; ಒಂದು ಮನೆಯು ತನಗೆ ವಿರೋಧವಾಗಿ ವಿಭಾಗಿಸಲ್ಪಟ್ಟರೆ ಅದು ಬಿದ್ದು ಹೋಗುವದು.
18 ಸೈತಾನನು ಸಹ ತನಗೆ ವಿರೋಧವಾಗಿ ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನ ರಾಜ್ಯವು ನಿಲ್ಲುವದು ಹೇಗೆ? ಯಾಕಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಹೊರಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.
19 ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯ ತೀರಿಸುವವರಾಗಿರುವರು.
20 ಆದರೆ ನಾನು ದೇವರ ಹಸ್ತದಿಂದಲೇ ದೆವ್ವಗಳನ್ನು ಹೊರಡಿಸುವದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
21 ಆಯುಧ ಗಳನ್ನು ಧರಿಸಿಕೊಂಡು ಬಲಿಷ್ಠನಾದವನೊಬ್ಬನು ತನ್ನ ಅರಮನೆಯನ್ನು ಕಾಯುವದಾದರೆ ಅವನ ಸೊತ್ತು ಸುರಕ್ಷಿತವಾಗಿರುವದು.
22 ಆದರೆ ಅವನಿಗಿಂತ ಬಲಿ ಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ ಅವನು ನಂಬಿಕೊಂಡಿದ್ದ ಆಯುಧಗಳನ್ನು ಅವನಿಂದ ತಕ್ಕೊಂಡು ತನ್ನ ಸುಲಿಗೆಗಳನ್ನು ಹಂಚುವನು.
23 ನನ್ನ ಜೊತೆಯಲ್ಲಿ ಇಲ್ಲದಿರುವವನು ನನಗೆ ವಿರೋಧವಾಗಿ ದ್ದಾನೆ; ನನ್ನೊಂದಿಗೆ ಕೂಡಿಸದೆ ಇರುವವನು ಚದರಿ ಸುತ್ತಾನೆ.
24 ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದಮೇಲೆ ನೀರಿಲ್ಲದ ಸ್ಥಳಗಳಲ್ಲಿ ತಿರು ಗುತ್ತಾ ವಿಶ್ರಾಂತಿಯನ್ನು ಹುಡುಕಿ ಏನೂ ಕಾಣದೆ ಅದು–ನಾನು ಹೊರಟು ಬಂದ ನನ್ನ ಮನೆಗೆ ಹಿಂದಿ ರುಗುವೆನು ಎಂದು ಅಂದುಕೊಳ್ಳುತ್ತದೆ.
25 ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿದ್ದನ್ನು ಕಂಡಿತು.
26 ಆಗ ಅದು ಹೋಗಿ ತನಗಿಂತಲೂ ಕೆಟ್ಟವು ಗಳಾದ ಬೇರೆ ಏಳು ದುರಾತ್ಮಗಳನ್ನು ತನ್ನೊಂದಿಗೆ ಕರಕೊಂಡು ಒಳಗೆ ಸೇರಿ ಅಲ್ಲಿ ವಾಸಮಾಡುವವು; ಮತ್ತು ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವದು ಅಂದನು.

ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳುವದು

ಮತ್ತಾಯನು 13
10 ತರುವಾಯ ಶಿಷ್ಯರು ಬಂದು ಆತನಿಗೆ–ನೀನು ಸಾಮ್ಯಗಳಲ್ಲಿ ಅವರೊಂದಿಗೆ ಯಾಕೆ ಮಾತನಾಡುತ್ತೀ ಎಂದು ಕೇಳಲು
11 ಆತನು ಪ್ರತ್ಯುತ್ತರವಾಗಿ ಅವ ರಿಗೆ–ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ.
12 ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಮತ್ತು ಅವನಿಗೆ ಹೆಚ್ಚು ಸಮೃದ್ಧಿಯಾಗುವದು; ಆದರೆ ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು.
13 ಆದದರಿಂದ ನಾನು ಅವರಿಗೆ ಸಾಮ್ಯಗಳಲ್ಲಿ ಮಾತ ನಾಡುತ್ತೇನೆ; ಯಾಕಂದರೆ ಅವರು ನೋಡಿದರೂ ಕಾಣುವದಿಲ್ಲ ಮತ್ತು ಕೇಳಿದರೂ ತಿಳುಕೊಳ್ಳುವದಿಲ್ಲ; ಇಲ್ಲವೆ ಅವರು ಗ್ರಹಿಸುವದು ಇಲ್ಲ
14 ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನಂದರೆ — ನೀವು ಕೇಳುತ್ತೀರಿ, ಕೇಳಿದರೂ ತಿಳು ಕೊಳ್ಳುವದೇ ಇಲ್ಲ; ಮತ್ತು ನೋಡುತ್ತೀರಿ, ನೋಡಿ ದರೂ ಗ್ರಹಿಸುವದೇ ಇಲ್ಲ.
15 ಯಾಕಂದರೆ ಇವರು ತಮ್ಮ ಕಣ್ಣುಗಳಿಂದ ನೋಡಿ ತಮ್ಮ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದ ಹಾಗೆಯೂ ನಾನು ಇವರನ್ನು ಸ್ವಸ್ಥಮಾಡದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಮತ್ತು ಇವರ ಕಿವಿಗಳು ಕೇಳದ ಹಾಗೆ ಮಂದವಾದವು; ಇದಲ್ಲದೆ ಇವರು ತಮ್ಮ ಕಣ್ಣುಗ
16 ಆದರೆ ನಿಮ್ಮ ಕಣ್ಣುಗಳು ನೋಡುವದ ರಿಂದಲೂ ನಿಮ್ಮ ಕಿವಿಗಳು ಕೇಳುವದರಿಂದಲೂ ಅವು ಧನ್ಯವಾದವುಗಳೇ.
17 ನಾನು ನಿಮಗೆ ನಿಜವಾಗಿ ಹೇಳುವದೇನಂದರೆ–ನೀವು ನೋಡುವಂಥವುಗಳನ್ನು ಮತ್ತು ಕೇಳುವಂಥವುಗಳನ್ನು ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೋಡುವದಕ್ಕೂ ಕೇಳುವದಕ್ಕೂ ಅಪೇಕ್ಷಿಸಿದರು; ಆದರೆ ಅವರು ನೋಡಲಿಲ್ಲ ಮತ್ತು ಕೇಳಲಿಲ್ಲ.

ಪರಲೋಕರಾಜ್ಯದಲ್ಲಿ ಪ್ರವೇಶಿಸು

ಮತ್ತಾಯನು 7
21
ಕರ್ತನೇ, ಕರ್ತನೇ ಎಂದು ನನಗೆ ಹೇಳುವ ಪ್ರತಿಯೊಬ್ಬನು ಪರಲೋಕರಾಜ್ಯದಲ್ಲಿ ಪ್ರವೇಶಿಸು ವದಿಲ್ಲ; ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ಅದರಲ್ಲಿ ಪ್ರವೇಶಿ ಸುವನು.
22 ಆ ದಿನದಲ್ಲಿ–ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು.
23 ಆಗ ನಾನು ಅವರಿಗೆ–ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.

ಮತ್ತಾಯನು 5
17 ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು.
18 ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
19 ಆದದರಿಂದ ಯಾವನಾದರೂ ಈ ಆಜ್ಞೆಗಳಲ್ಲಿ ಚಿಕ್ಕದಾದ ಒಂದನ್ನು ಮಾರಿ ಹಾಗೆಯೇ ಜನರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅಲ್ಪನೆಂದು ಕರೆಯಲ್ಪಡುವನು; ಯಾವನಾದರೂ ಇವುಗಳನ್ನು ಕೈಕೊಂಡು ಬೋಧಿಸಿದರೆ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಕರೆಯಲ್ಪಡು ವನು.
20 ನಾನು ನಿಮಗೆ ಹೇಳುವದೇನಂದರೆ– ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವದಕ್ಕಾಗುವದೇ ಇಲ್ಲ.
21 ನೀನು ನರಹತ್ಯ ಮಾಡಬಾರದು; ಯಾವನಾ ದರೂ ನರಹತ್ಯಮಾಡಿದರೆ ನ್ಯಾಯತೀರ್ಪಿನ ಅಪಾ ಯಕ್ಕೆ ಒಳಗಾಗುವನು ಎಂದು ಪೂರ್ವಿಕರು ಹೇಳಿರು ವದನ್ನು ನೀವು ಕೇಳಿದ್ದೀರಿ.
22 ನಾನು ನಿಮಗೆ ಹೇಳುವದೇನಂದರೆ– ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ– ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು
23 ಆದದರಿಂದ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಗೆ ತಂದಾಗ ನಿನಗೆ ವಿರೋಧ ವಾದದ್ದು ನಿನ್ನ ಸಹೋದರನಿಗೆ ಇದೆಯೆಂದು ನೆನಪಿಗೆ ಬಂದರೆ
24 ನಿನ್ನ ಕಾಣಿಕೆಯನ್ನು ನೀನು ಅಲ್ಲಿಯೇ ಯಜ್ಞವೇದಿಯ ಮುಂದೆ ಬಿಟ್ಟು ಹೊರಟು ಹೋಗಿ ಮೊದಲು ನಿನ್ನ ಸಹೋದರನೊಂದಿಗೆ ಒಂದಾಗು; ತರುವಾಯ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು.
25 ನಿನ್ನ ವಿರೋಧಿಯ ಸಂಗಡ ನೀನು ದಾರಿಯ ಲ್ಲಿರುವಾಗಲೇ ತ್ವರೆಯಾಗಿ ಅವನ ಕೂಡ ಒಂದಾಗು; ಇಲ್ಲವಾದರೆ ಯಾವ ಸಮಯದಲ್ಲಿಯಾದರೂ ಆ ವಿರೋಧಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ಮತ್ತು ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು; ಆಗ ನೀನು ಸೆರೆಯಲ್ಲಿ ಹಾಕಲ್ಪಡುವಿ.
26 ನಾನು ನಿನಗೆ ನಿಜವಾಗಿ ಹೇಳುವದೇನಂದರೆ–ನೀನು ಕೊನೆಯ ಕಾಸನ್ನು ಸಲ್ಲಿಸುವ ತನಕ ಯಾವ ವಿಧದಿಂದಲೂ ಅಲ್ಲಿಂದ ಹೊರಗೆ ಬರುವದೇ ಇಲ್ಲ.
27 ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ;
28 ಆದರೆ ನಾನು ನಿಮಗೆ ಹೇಳುವದೇನಂದರೆ–ಒಬ್ಬ ಸ್ತ್ರೀಯನ್ನು ಮೋಹಿಸುವದಕ್ಕೆ ನೋಡುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದ್ದಾನೆ.
29 ಆದದರಿಂದ ನಿನ್ನ ಬಲಗಣ್ಣು ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.
30 ನಿನ್ನ ಬಲಗೈ ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.

ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.

ಮತ್ತಾಯನು 11
ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ — ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ.
ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
10 ಯಾಕಂ ದರೆ–ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು.
11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ–ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ.
12 ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.
13 ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.
14 ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ.
15 ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.

ಲೂಕನು 16
14 ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.
15 ಆಗ ಆತನು ಅವರಿಗೆ–ಮನುಷ್ಯರ ಮುಂದೆ ನೀತಿವಂತರಾಗಿ ಮಾಡಿ ಕೊಳ್ಳುವವರು ನೀವೇ; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾನೆ; ಯಾಕಂದರೆ ಮನುಷ್ಯರಲ್ಲಿ ಯಾವದು ಶ್ರೇಷ್ಠವೆಂದು ಎಣಿಸಲ್ಪ ಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
16 ನ್ಯಾಯ ಪ್ರಮಾಣವೂ ಪ್ರವಾದನೆಗಳೂ ಯೋಹಾ ನನವರೆಗೆ ಇದ್ದವು; ದೇವರ ರಾಜ್ಯವು ಅಂದಿನಿಂದ ಸಾರಲ್ಪಡುತ್ತಾ ಇದೆ, ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಾನೆ.
17 ನ್ಯಾಯಪ್ರಮಾಣದ ಒಂದು ಗುಡುಸಾದರೂ ಬಿದ್ದು ಹೋಗುವದಕ್ಕಿಂತ ಆಕಾಶವೂ ಭೂಮಿಯೂ ಅಳಿದು ಹೋಗುವದು ಸುಲಭ.

ಯೋಹಾನನು 3
1 ಫರಿಸಾಯರಲ್ಲಿ ಯೆಹೂದ್ಯರ ಅಧಿಕಾರಿ ಯಾದ ನಿಕೊದೇಮನೆಂಬ ಒಬ್ಬ ಮನುಷ್ಯ ನಿದ್ದನು.
ಇವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ–ರಬ್ಬಿಯೇ (ಗುರುವು), ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು, ಯಾಕಂದರೆ ದೇವರು ಒಬ್ಬನ ಕೂಡ ಇಲ್ಲದ ಹೊರತು ನೀನು ಮಾಡುವ ಅದ್ಭುತಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು ಅಂದನು.
ಯೇಸು ಪ್ರತ್ಯುತ್ತರವಾಗಿ ಅವನಿಗೆ–ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು.
ನಿಕೊದೇಮನು ಆತನಿಗೆ–ಒಬ್ಬನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವದಾದೀತೇ ಎಂದು ಕೇಳಿದನು.
ಯೇಸು ಪ್ರತ್ಯುತ್ತರವಾಗಿ ಅವನಿಗೆ–ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
ಶರೀರದಿಂದ ಹುಟ್ಟಿದ್ದು ಶರೀ ರವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ.
ನೀವು ತಿರಿಗಿ ಹುಟ್ಟತಕ್ಕದ್ದು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.
ಗಾಳಿಯು ತನ್ನ ಮನಸ್ಸು ಬಂದ ಕಡೆಗೆ ಬೀಸುತ್ತದೆ; ನೀನು ಅದರ ಶಬ್ದವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗು ತ್ತದೋ ಹೇಳಲಾರಿ; ಅದರಂತೆಯೇ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನು ಇದ್ದಾನೆ ಅಂದನು.

ಕೀರ್ತನೆಗಳು 103
15 ಮನುಷ್ಯನ ದಿವಸಗಳೋ ಹುಲ್ಲಿನ ಹಾಗೆ ಅವೆ; ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ.
16 ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು.
17 ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ
18 ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು.
19 ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ.
20 ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,

ಪೇತ್ರನು ಪ್ರಕಟನೆಯ ಮೂಲಕ ಅಧಿಕಾರವನ್ನು ಪಡೆಯುತ್ತಾನೆ

ಮತ್ತಾಯನು 16
13 ಯೇಸು ಕೈಸರೈಯ ಫಿಲಿಪ್ಪಿ ಪ್ರಾಂತ್ಯಗಳಿಗೆ ಬಂದಾಗ ಆತನು ತನ್ನ ಶಿಷ್ಯರಿಗೆ–ಮನುಷ್ಯಕುಮಾರ ನಾಗಿರುವ ನನ್ನನ್ನು ಜನರು ಯಾರೆಂದು ಹೇಳುತ್ತಾರೆ ಎಂದು ಕೇಳಿದನು.
14 ಆಗ ಅವರು– ನಿನ್ನನ್ನು ಕೆಲ ವರು ಬಾಪ್ತಿಸ್ಮ ಮಾಡಿಸುವ ಯೋಹಾನನು, ಕೆಲ ವರು–ಎಲೀಯನು, ಮತ್ತು ಬೇರೆಯವರು–ಯೆರೆವಿಾಯನು ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಾರೆ ಅಂದರು.
15 ಆತನು ಅವರಿಗೆ–ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಿ ದನು.
16 ಅದಕ್ಕೆ ಸೀಮೋನ ಪೇತ್ರನು ಪ್ರತ್ಯುತ್ತರ ವಾಗಿ–ನೀನು ಕ್ರಿಸ್ತನು, ಜೀವವುಳ್ಳ ದೇವರಕುಮಾರನು ಎಂದು ಹೇಳಿದನು.
17 ಆಗ ಯೇಸು ಪ್ರತ್ಯುತ್ತರವಾಗಿ ಅವನಿಗೆ–ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಯಾಕಂದರೆ ರಕ್ತಮಾಂಸವಲ್ಲ (ಮನುಷ್ಯರಲ್ಲ), ಪರಲೋಕದಲ್ಲಿರುವ ನನ್ನ ತಂದೆಯೇ ಅದನ್ನು ನಿನಗೆ ಪ್ರಕಟಿಸಿದನು ಎಂದು ಹೇಳಿದನು.
18 ನಾನು ಸಹ ನಿನಗೆ ಹೇಳುವದೇ ನಂದರೆ–ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
19 ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುತ್ತೇನೆ; ನೀನು ಯಾವದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು; ನೀನು ಯಾವ ದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು ಅಂದನು.
20 ತರುವಾಯ ತಾನು ಕ್ರಿಸ್ತನಾಗಿರುವ ಯೇಸು ಎಂದು ಯಾರಿಗೂ ಹೇಳಬಾರದು ಎಂಬದಾಗಿ ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.

ದೇವರ ರಾಜ್ಯದ ಬೋಧನೆ

ಮತ್ತಾಯನು 4
23 ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.
24 ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು. ಆತನು ಅವರನ್ನು ಸ್ವಸ್ಥಪಡಿಸಿದನು.
25 ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು.

ಅಪೊಸ್ತಲರ ಕೃತ್ಯಗಳು 28
ಪೌಲನು ಕಟ್ಟಿಗೆಯ ಹೊರೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಿದಾಗ ಆ ಕಾವಿನ ದೆಸೆಯಿಂದ ಒಂದು ವಿಷ ಸರ್ಪವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಸುತ್ತಿಕೊಂಡಿತು.
ಆ ವಿಷಜಂತು ಅವನ ಕೈಯಿಂದ ಜೋತಾಡುವದನ್ನು ಆ ಅನಾಗರಿಕರು ನೋಡಿ–ಈ ಮನುಷ್ಯನು ಸಮುದ್ರದಿಂದ ತಪ್ಪಿಸಿ ಕೊಂಡರೂ ಪ್ರತೀಕಾರವು ಇವನನ್ನು ಬದುಕಗೊಡಿಸು ವದಿಲ್ಲ. ಇವನು ನಿಸ್ಸಂದೇಹವಾಗಿ ಕೊಲೆ ಪಾತಕನು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
ಆಗ ಅವನು ಆ ಜಂತನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಯಾವ ಅಪಾಯವೂ ಅವನಿಗೆ ಆಗಲಿಲ್ಲ.
ಹೇಗಿದ್ದರೂ ಅವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು; ಬಹಳ ಹೊತ್ತಿನವರೆಗೂ ಅವರು ನೋಡಿದ ಮೇಲೆ ಯಾವ ಅಪಾಯವೂ ಅವನಿಗೆ ಬಾರದೆ ಇರುವದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಅವನೊಬ್ಬ ದೇವರೆಂ
ಅದೇ ಸ್ಥಳದಲ್ಲಿ ಪೊಪ್ಲಿಯ ಎಂಬ ಆ ದ್ವೀಪದ ಮುಖ್ಯಸ್ಥನಿಗೆ ಆಸ್ತಿ ಇತ್ತು; ಅವನು ನಮ್ಮನ್ನು ಸೇರಿಸಿಕೊಂಡು ಮೂರು ದಿವಸ ಆದರದಿಂದ ಸತ್ಕರಿಸಿ ದನು.
ಇದಾದ ಮೇಲೆ ಪೊಪ್ಲಿಯನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಬಿದ್ದುಕೊಂಡಿ ದ್ದಾಗ ಪೌಲನು ಒಳಗೆ ಪ್ರವೇಶಿಸಿ ಪ್ರಾರ್ಥನೆ ಮಾಡಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ಸ್ವಸಮಾಡಿದನು.
ಇದಾದ ಮೇಲೆ ಆ ದ್ವೀಪದಲ್ಲಿ ರೋಗಗಳಿದ್ದ ಬೇರೆಯವರೂ ಬಂದು ಸ್ವಸ್ಥರಾದರು.
10 ಅವರು ಸಹ ನಮ್ಮನ್ನು ಬಹಳವಾಗಿ ಗೌರವಿಸಿ ಸನ್ಮಾನಿಸಿದರು; ನಾವು ಹೊರಟಾಗ ನಮಗೆ ಅವಶ್ಯ ವಾದವುಗಳನ್ನು ತಂದು ಹಡಗಿನಲ್ಲಿಟ್ಟರು.
11 ಮೂರು ತಿಂಗಳಾದ ಮೇಲೆ ಆ ದ್ವೀಪದಲ್ಲಿ ಶೀತಕಾಲ ಕಳೆದ ನಂತರ ಅಶ್ವಿನೀ ದೇವತೆಯ ಚಿನ್ಹೆ ಇದ್ದ ಅಲೆಕ್ಸಾಂದ್ರಿಯದ ಹಡಗನ್ನು ಹತ್ತಿ ನಾವು ಹೊರಟೆವು.
12 ತರುವಾಯ ಸುರಕೂಸಿಗೆ ಸೇರಿ ನಾವು ಅಲ್ಲಿ ಮೂರು ದಿವಸಗಳು ಇದ್ದೆವು.
13 ಅಲ್ಲಿಂದ ನಾವು ಸುತ್ತಿಕೊಂಡು ರೇಗಿಯಕ್ಕೆ ಬಂದೆವು; ಒಂದು ದಿವಸವಾದ ಮೇಲೆ ದಕ್ಷಿಣದ ಗಾಳಿಯು ಬೀಸಿದಾಗ ಮರುದಿನ ನಾವು ಪೊತಿಯೋಲಕ್ಕೆ ಸೇರಿದೆವು.
14 ಅಲ್ಲಿ ನಾವು ಸಹೋದರರನ್ನು ನೋಡಿದಾಗ ಅವರು ನಮ್ಮನ್ನು ಏಳು ದಿವಸ ತಮ್ಮೊಂದಿಗೆ ಇರಬೇಕೆಂದು ಬೇಡಿಕೊಂಡರು; ಹೀಗೆ ನಾವು ರೋಮ್‌ ಕಡೆಗೆ ಹೊರಟೆವು.
15 ಅಲ್ಲಿದ್ದ ಸಹೋದರರು ನಮ್ಮ ವಿಷಯ ವಾಗಿ ಕೇಳಿ ನಮ್ಮನ್ನು ಸಂಧಿಸುವದಕ್ಕಾಗಿ ಅಪ್ಪಿಯ ಪೇಟೆ ಮತ್ತು ತ್ರಿಛತ್ರದ ವರೆಗೆ ಬಂದಾಗ ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರಮಾಡಿ ಧೈರ್ಯ ಗೊಂಡನು.
16 ನಾವು ರೋಮ್‌ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.
17 ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರ ಮುಖ್ಯಸ್ಥರನ್ನು ಒಟ್ಟಾಗಿ ಕರೆದನು. ಅವರು ಕೂಡಿ ಬಂದಾಗ ಅವನು ಅವರಿಗೆ–ಜನರೇ, ಸಹೊ ದರರೇ, ಜನರಿಗಾಗಲೀ ನಮ್ಮ ಪಿತೃಗಳ ಆಚಾರಗಳಿ ಗಾಗಲೀ ವಿರೋಧವಾಗಿ ಯಾವದನ್ನೂ ಮಾಡ ದಿದ್ದರೂ ಯೆರೂಸಲೇಮಿನಿಂದ ರೋಮ್‌ನವರ ಕೆ
18 ಅವರು ನನ್ನನ್ನು ಪರೀಕ್ಷಿಸಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿ ದ್ದರು.
19 ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ.
20 ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.
21 ಆಗ ಅವರು ಅವನಿಗೆ–ನಿನ್ನ ವಿಷಯವಾಗಿ ಯೂದಾಯದಿಂದ ನಮಗೆ ಯಾವ ಪತ್ರಗಳು ಬಂದಿಲ್ಲ, ಇಲ್ಲವೆ ಇಲ್ಲಿ ಬಂದ ಸಹೋದರರಲ್ಲಿ ಯಾವನೂ ನಿನ್ನ ವಿಷಯವಾಗಿ ಕೆಟ್ಟದ್ದೇನೂ ತೋರಿಸ ಲಿಲ್ಲ ಮತ್ತು ಹೇಳಲಿಲ್ಲ.
22 ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.
23 ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು.
24 ಅವನು ಹೇಳಿದ ಮಾತುಗಳನ್ನು ಕೆಲವರು ನಂಬಿ ದರು; ಆದರೆ ಕೆಲವರು ನಂಬದೆ ಹೋದರು.
25 ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ–ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ–
26 ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ;
27 ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ
28 ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.

1 ಕೊರಿಂಥದವರಿಗೆ 15
42 ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರ ವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡು ತ್ತದೆ. ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
43 ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎಬ್ಬಿಸಲ್ಪಡುತ್ತದೆ; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
44 ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎಬ್ಬಿಸಲ್ಪಡುತ್ತದೆ; ಪ್ರಾಕೃತದೇಹವಿರುವದಾದರೆ ಆತ್ಮಿಕ ದೇಹವೂ ಇರುವದು.
45 ಬರೆದಿರುವ ಪ್ರಕಾರ– ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು; ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ.
46 ಹೇಗಿದ್ದರೂ ಆತ್ಮಿಕವಾದದ್ದು ಮೊದಲ ನೆಯದಲ್ಲ, ಪ್ರಾಕೃತವಾದದ್ದು ಮೊದಲನೆಯದು; ಆಮೇಲೆ ಆತ್ಮಿಕವಾದದ್ದು.
47 ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
48 ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
49 ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾ ತನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು.
50 ಸಹೋದರರೇ, ನಾನು ಹೇಳುವದೇನಂದರೆ– ಮಾಂಸವು ರಕ್ತವು ದೇವರ ರಾಜ್ಯಕ್ಕೆ ಬಾಧ್ಯವಾಗ ಲಾರವು; ಇಲ್ಲವೆ ಲಯವಾಗುವದು ನಿರ್ಲಯತ್ವಕ್ಕೆ ಬಾಧ್ಯವಾಗುವದಿಲ್ಲ.
51 ಇಗೋ, ಮರ್ಮವಾಗಿದ್ದ ಒಂದು ಸಂಗತಿಯನ್ನು ನಿಮಗೆ ತಿಳಿಸುತ್ತೇನೆ– ನಾವೆಲ್ಲರೂ ನಿದ್ರೆಹೋಗುವದಿಲ್ಲ, ಆದರೆ ನಾವೆ ಲ್ಲರೂ ಮಾರ್ಪಡುವೆವು.
52 ಕಡೇ ತುತೂರಿಯು ಧ್ವನಿಯಾಗುವಾಗ ನಾವು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.
53 ಲಯ ವಾಗುವಂಥದ್ದು (ಈ ದೇಹವು) ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವಂಥ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ.
54 ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ–ಜಯವು ಮರಣವನ್ನು ನುಂಗಿತು ಎಂಬದೇ.
55 ಓ ಮರಣವೇ, ನಿನ್ನ ಕೊಂಡಿಯೆಲ್ಲಿ? ಓ ಸಮಾಧಿಯೇ ನಿನ್ನ ಜಯವೆಲ್ಲಿ?
56 ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ.
57 ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.

1 ಕೊರಿಂಥದವರಿಗೆ 4
16 ಆದದರಿಂದ ನನ್ನನ್ನು ಹಿಂಬಾಲಿಸ ಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
17 ಈ ಕಾರಣ ದಿಂದ ಕರ್ತನಲ್ಲಿ ನನ್ನ ಪ್ರಿಯ ಮಗನಾದ ತಿಮೊಥೆ ಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೆನೆ; ಅವನು ಕರ್ತನಲ್ಲಿ ನಂಬಿಗಸ್ತನಾಗಿದ್ದಾನೆ; ಅವನು ಕ್ರಿಸ್ತನಲ್ಲಿ ನನ್ನ ನಡಾವಳಿಯನ್ನು ಅಂದರೆ ನಾನು ಎಲ್ಲೆಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವ ಕ್ರಮ ವನ್ನು ನಿಮ್ಮ ನೆನಪಿಗೆ ತರು
18 ನಾನು ನಿಮ್ಮ ಬಳಿಗೆ ಬರುವದಿಲ್ಲವೇನೋ ಎಂದು ಕೆಲವರು ಉಬ್ಬಿಕೊಂಡಿದ್ದಾರೆ.
19 ಆದರೆ ಕರ್ತನ ಚಿತ್ತವಿದ್ದರೆ ನಾನು ಬೇಗ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿ ರುವವರ ಮಾತನ್ನಲ್ಲ, ಅವರ ಶಕ್ತಿಯನ್ನೇ ಗೊತ್ತು ಮಾಡಿಕೊಳ್ಳುವೆನು.
20 ದೇವರ ರಾಜ್ಯವು ಮಾತಿನಲ್ಲಿ ಇಲ್ಲ, ಆದರೆ ಶಕ್ತಿಯಲ್ಲಿಯೇ ಆಧಾರಗೊಂಡಿದೆ.
21 ನಿಮ್ಮ ಇಷ್ಟವೇನು? ನಾನು ಬೆತ್ತತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯ ಭಾವದಿಂದಲೂ ಕೂಡಿದವನಾಗಿ ಬರಲೋ?

ಇನ್ನೊಬ್ಬರ ಆಹಾರದ ಮೇಲೆ ಮುಗ್ಗರಿಸಬೇಡಿ

ರೋಮಾಪುರದವರಿಗೆ 14
13 ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.
14 ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.
15 ನಿನ್ನ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವಾದರೆ ಪ್ರೀತಿಗೆ ತಕ್ಕಂತೆ ನೀನು ಇನ್ನು ನಡೆಯುವ ವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಸತ್ತನೋ ಅವನನ್ನು ನಿನ್ನ ಆಹಾರದಿಂದ ಕೆಡಿಸಬಾರದು.
16 ನಿಮಗಿರುವ ಮೇಲು ದೂಷಣೆಗೆ ಆಸ್ಪದವಾಗಬಾರದು.
17 ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ.
18 ಕ್ರಿಸ್ತನ ಸೇವೆಯನ್ನು ಮಾಡುವವನು ಈ ವಿಷಯಗಳಲ್ಲಿ ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೆ.
19 ಆದದರಿಂದ ನಾವು ಸಮಾಧಾನವನ್ನುಂಟು ಮಾಡುವವುಗಳನೂ ಪರಸ್ಪರ ಭಕ್ತಿವೃದ್ಧಿಯನ್ನುಂಟು ಮಾಡುವವುಗಳನ್ನೂ ಅನುಸರಿಸೋಣ.
20 ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ.
21 ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ.
22 ನಿನಗೆ ನಂಬಿಕೆಯಿದೆಯೋ? ದೇವರ ಸನ್ನಿಧಿಯಲ್ಲಿ ಅದು ನಿನಗೇ ಇರಲಿ. ಒಬ್ಬನು ತಾನು ಒಪ್ಪುವ ವಿಷಯದಲ್ಲಿ ತನ್ನನ್ನು ತಾನು ಖಂಡಿಸಿ ಕೊಳ್ಳದಿದ್ದರೆ ಅವನು ಧನ್ಯನು.
23 ಸಂಶಯಪಟ್ಟು ಉಣ್ಣುವವನು ದಂಡಿಸಲ್ಪಡುವನು; ಯಾಕಂದರೆ ಅವನು ನಂಬಿಕೆಯಿಂದ ಉಣ್ಣುವದಿಲ್ಲ. ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ.

ರಾಜ್ಯಗಳ ಕನಸನ್ನು ದಾನಿಯೇಲನು ವ್ಯಾಖ್ಯಾನಿಸುತ್ತಾನೆ

ದಾನಿಯೇಲನು 2
31 ಓ ರಾಜನೇ, ನೀನು ನೋಡಲಾಗಿ, ಇಗೋ, ಒಂದು ದೊಡ್ಡ ಪ್ರತಿಮೆಯು ಕಾಣಿಸಿತು. ಮಹಾ ಪ್ರಕಾಶಮಾನ ವಾದ ಈ ದೊಡ್ಡ ಪ್ರತಿಮೆಯು ನಿನ್ನ ಮುಂದೆ ನಿಂತಿತ್ತು; ಅದರ ಆಕಾರವು ಭಯಂಕರವಾಗಿತ್ತು.
32 ಈ ಪ್ರತಿ ಮೆಯ ತಲೆಯು ಚೊಕ್ಕ ಬಂಗಾರದಿಂದಲೂ ಅದರ ಎದೆಯು ಮತ್ತು ತೋಳುಗಳು ಬೆಳ್ಳಿಯಿಂದಲೂ ಅದರ ಹೊಟ್ಟೆಯು ಮತ್ತು ತೊಡೆಗಳು ಹಿತ್ತಾಳೆಯಿಂದಲೂ
33 ಅದರ ಕಾಲುಗಳು ಕಬ್ಬಿಣದಿಂದಲೂ ಅದರ ಪಾದಗಳು ಅರ್ಧ ಕಬ್ಬಿಣವೂ ಮತ್ತು ಅರ್ಧ ಮಣ್ಣು ಆಗಿತ್ತು.
34 ನೀನು ನೋಡುತ್ತಿರಲಾಗಿ, ಒಂದು ಕಲ್ಲು ಕೈಗಳ ಸಹಾಯವಿಲ್ಲದೆ ಒಡೆಯಲ್ಪಟ್ಟು ಅರ್ಧ ಕಬ್ಬಿ ಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದ ಗಳನ್ನು ಬಡಿದು ಅವುಗಳನ್ನು ಚೂರುಚೂರು ಮಾಡಿತು.
35 ಆಮೇಲೆ ಕಬ್ಬಿಣವೂ ಮಣ್ಣೂ ಹಿತ್ತಾಳೆಯೂ ಬೆಳ್ಳಿಯೂ ಮತ್ತು ಬಂಗಾರವೂ ಕೂಡ ಒಡೆದು ಚೂರು ಚೂರಾಗಿ ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾ ದವು; ಅವುಗಳಿಗೆ ಎಡೆ ಸಿಗದ ಹಾಗೆ ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು; ಪ್ರತಿಮೆಯನ್ನು ಬಡಿದ ಕಲ್ಲು ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
36 ಇದೇ ಕನಸು! ಮತ್ತು ಇದರ ಅರ್ಥವನ್ನು ನಾವು ಅರಸನ ಮುಂದೆ ಹೇಳು ತ್ತೇವೆ.
37 ಓ ಅರಸನೇ, ನೀನು ಅರಸರಿಗೆ ಅರಸನಾಗಿ ರುವೆ; ಪರಲೋಕದ ದೇವರು ನಿನಗೆ ರಾಜ್ಯವನ್ನೂ ಬಲವನ್ನೂ ಅಧಿಕಾರವನ್ನೂ ಘನವನ್ನೂ ಕೊಟ್ಟಿದ್ದಾನೆ.
38 ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.
39 ನಿನ್ನ ತರುವಾಯ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯ ಏಳುವದು; ಅನಂತರ ಮೂರನೇ ಹಿತ್ತಾಳೆಯ ರಾಜ್ಯ ಬರುವದು. ಅದು ಸಮಸ್ತ ಭೂಮಿಯ ಮೇಲೂ ದೊರೆತನ ನಡೆಸುವದು.
40 ನಾಲ್ಕನೇ ರಾಜ್ಯವು ಕಬ್ಬಿ ಣದ ಹಾಗೆ ಬಲವಾಗಿ ಇರುವದು. ಕಬ್ಬಿಣವು ಸಮಸ್ತ ವಸ್ತುಗಳನ್ನು ವಶಮಾಡಿಕೊಂಡು ಚೂರು ಚೂರು ಮಾಡುತ್ತದೆ; ಕಬ್ಬಿಣವು ಹೇಗೆ ಎಲ್ಲವುಗಳನ್ನು ಚೂರು ಮಾಡುವದೋ ಹಾಗೆಯೇ ಆ ರಾಜ್ಯವು ಚೂರು ಚೂರಾಗಿ ಧ್ವಂಸ ಮಾಡುವದು.
41 ನೀನು ಪಾದಗ ಳನ್ನೂ ಕಾಲಿನ ಬೆರಳುಗಳನ್ನೂ ಅರ್ಧ ಕುಂಬಾರನ ಮಣ್ಣಿನಿಂದಲೂ ಅರ್ಧ ಕಬ್ಬಿಣದಿಂದಲೂ ಉಂಟಾದ ವೆಂದು ನೀನು ನೋಡಿದೆಯಲ್ಲಾ? ಅದೇ ರೀತಿ ಆ ರಾಜ್ಯವು ವಿಭಾಗಿಸಲ್ಪಡುವದು; ಆದರೆ ನೀನು ಜೇಡಿ ಮಣ್ಣಿನ ಸಂಗಡ ಕಲಸಿದ ಕಬ್ಬಿಣವನ್ನು ನೋಡಿದ ಹಾಗೆ ಕಬ್ಬಿಣದ ಬಲವು ಅದರಲ್ಲಿರುವದು.
42 ಪಾದದ ಬೆರಳುಗಳು ಅರ್ಧ ಕಬ್ಬಿಣದಿಂದಲೂ ಅರ್ಧ ಮಣ್ಣಿ ನಿಂದಲೂ ಮಾಡಿದ ಹಾಗೆ ರಾಜ್ಯವು ಅರ್ಧ ಮುರಿದದ್ದಾಗಿಯೂ ಅರ್ಧ ಬಲವಾಗಿಯೂ ಇರುವದು.
43 ನೀನು ಕಬ್ಬಿಣವು ಜೇಡಿಮಣ್ಣಿನ ಸಂಗಡ ಕಲಸಿರು ವದನ್ನು ನೋಡಿದ ಹಾಗೆ ಅವರು ಮನುಷ್ಯನ ವಂಶಾ ವಳಿಯೊಂದಿಗೆ ಬೆರೆತುಕೊಳ್ಳುವರು; ಆದರೆ ಕಬ್ಬಿಣವು ಮಣ್ಣಿನ ಸಂಗಡ ಕೂಡಿಕೊಳ್ಳದ ಪ್ರಕಾರ ಅವರು ಒಬ್ಬರ ಸಂಗಡ ಒಬ್ಬರು ಕೂಡಿಕೊಳ್ಳುವದಿಲ್ಲ.
44 ಅರ ಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವನು. ಅದರ ರಾಜ್ಯ ವನ್ನು ಬೇರೆ ಜನರಿಗೆ ಕೊಡದೆ ಆ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಿ ಮುಗಿಸಿ ಎಂದೆಂದಿಗೂ ನಿಲ್ಲುವದು.
45 ಆ, ಕಲ್ಲು ಕೈಗಳ ಸಹಾಯವಿಲ್ಲದೆ ಬೆಟ್ಟದೊಳಗಿಂದ ಒಡೆಯಲ್ಪಟ್ಟು ಕಬ್ಬಿಣವನ್ನೂ ಹಿತ್ತಾಳೆಯನ್ನೂ ಮಣ್ಣನ್ನೂ ಬೆಳ್ಳಿಯನ್ನೂ ಬಂಗಾರವನ್ನೂ ಧ್ವಂಸ ಮಾಡಿತೆಂದು ನೀನು ನೋಡಿದ್ದು ಇದೇ. ಮಹಾದೇವರು ಇನ್ನು ಮೇಲೆ ಸಂಭವಿಸುವಂಥದ್ದನ್ನು ಅರಸನಿಗೆ ತಿಳಿಯಪಡಿಸಿ ದ್ದಾನೆ; ಕನಸು ನಿಶ್ಚಯವಾಗಿದೆ; ಅದರ ಅರ್ಥಗಳೂ ಸತ್ಯವಾಗಿವೆ ಅಂದನು.

ದಾನಿಯೇಲನು 7
23 ಹೀಗೆ ಅವನು–ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗು ವದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ ಭೂಮಿಯನ್ನೆಲ್ಲಾ ತುಳಿದು, ತುಂಡುತುಂಡು ಮಾಡು ವಂಥದ್ದಾಗಿಯೂ ಇರುವದು.
24 ಆ ಹತ್ತು ಕೊಂಬು ಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸುಗಳಾ ಗಿವೆ; ಅನಂತರ ಇನ್ನೊಬ್ಬನು ಹುಟ್ಟುವನು ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.
25 ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
26 ಆದರೆ ನ್ಯಾಯ ಸಭೆಯು ಕುಳಿತು ಅವನ ಅಧಿಕಾರವನ್ನು ತೆಗೆದುಹಾಕಿ, ಕೊನೆಯ ವರೆಗೂ ಅದನ್ನು ಸಂಹರಿಸಿ ನಾಶಪಡಿಸುವದು.
27 ರಾಜ್ಯವೂ ದೊರೆತನವೂ ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತು ಮಹೋನ್ನತನ ಪರಿಶುದ್ಧವಾದ ಜನರಿಗೆ ಕೊಡಲ್ಪಡುವದು; ಆತನ ರಾಜ್ಯವು ನಿತ್ಯವಾದ ರಾಜ್ಯ ಮತ್ತು ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವವು ಮತ್ತು ವಿಧೇಯವಾಗಿರುವವು.

ಪ್ರಕಟನೆ 11
15 ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ– ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
16 ತರುವಾಯ ದೇವರ ಸಮಕ್ಷಮದಲ್ಲಿ ತಮ ತಮ್ಮ ಆಸನಗಳ ಮೇಲೆ ಕೂತಿರುವ ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡಬಿದ್ದು–
17 ಓ ಕರ್ತನೇ, ಸರ್ವಶಕ್ತನಾದ ದೇವರೇ, ಇರುವಾತನೂ ಇದ್ದಾತನೂ ಬರುವಾತನೂ ಆಗಿರುವ ನೀನು ನಿನ್ನ ಮಹಾಅಧಿಕಾರ ವನ್ನು ವಹಿಸಿಕೊಂಡು ಆಳಿದ್ದರಿಂದ ನಾವು ನಿನಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತೇವೆ ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
18 ಜನಾಂಗಗಳು ಕೋಪಿಸಿ ಕೊಂಡವು, ನಿನ್ನ ಕೋಪವು ಬಂದಿತು. ಸತ್ತವರು ತೀರ್ಪು ಹೊಂದುವದಕ್ಕೂ ನೀನು ನಿನ್ನ ಸೇವಕರಾದ ಪ್ರವಾದಿಗಳಿಗೂ ಪರಿಶುದ್ಧರಿಗೂ ನಿನ್ನ ನಾಮಕ್ಕೆ ಭಯಪಡುವ ಚಿಕ್ಕವರಿಗೂ ದೊಡ್ಡವರಿಗೂ ಪ್ರತಿ ಫಲವನ್ನು ಕೊಡುವದಕ್ಕೆ ಮತ್ತು ಭೂಮಿಯನ್ನು ನಾಶಮಾಡುವವರನು
19 ಆಗ ಪರಲೋಕದಲ್ಲಿ ದೇವಾಲಯವು ತೆರೆಯ ಲ್ಪಟ್ಟಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.

ಜೆಕರ್ಯ 14
ಆ ದಿನದಲ್ಲಿ ಆಗುವದೇ ನಂದರೆ–ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು.
ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
ಕರ್ತನು ಭೂಮಿಗೆಲ್ಲಾ ಅರಸನಾಗಿರುವನು; ಆ ದಿನದಲ್ಲಿ ಕರ್ತನು ಒಬ್ಬನೇ ಇರುವನು; ಆತನ ಹೆಸರು ಒಂದೇ.

ಕೊನೆಯ ತೀರ್ಪು

ಮತ್ತಾಯನು 24
ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
10 ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.
11 ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
12 ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು.
13 ಆದರೆ ಕಡೇವರೆಗೆ ತಾಳುವವನೇ ರಕ್ಷಿಸಲ್ಪಡುವನು.
14 ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವದು; ತರುವಾಯ ಅಂತ್ಯಬರುವದು.

ಮತ್ತಾಯನು 25
31 ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
32 ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು;
33 ಆತನು ಕುರಿಗಳನ್ನು ತನ್ನ ಬಲಗಡೆ ಯಲ್ಲಿಯೂ ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ–ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
35 ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
36 ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು.
37 ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ–ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ
38 ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
39 ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು.
40 ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ–ನಾನು ನಿಮಗೆ ನಿಜವಾಗಿ ಹೇಳುತ್ತೇನೆ–ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
41 ಆತನು ಎಡಗಡೆ ಯಲ್ಲಿರುವವರಿಗೆ–ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
42 ನಾನು ಹಸಿದವನಾಗಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿ ಯುವದಕ್ಕೆ ಕೊಡಲಿಲ್ಲ.
43 ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಗೆ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂಧಿಸಲಿಲ್ಲ ಎಂದು ಹೇಳುವನು.
44 ಆಗ ಅವರು ಸಹ ಪ್ರತ್ಯುತ್ತರವಾಗಿ ಆತನಿಗೆ–ಕರ್ತನೇ, ನೀನು ಯಾವಾಗ ಹಸಿದದ್ದನ್ನೂ ಬಾಯರಿದ್ದನ್ನೂ ಪರದೇಶಿ ಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥ ನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ನೋಡಿ ನಿನಗೆ ಉಪಚಾರ ಮಾಡಲಿಲ್ಲ ಎಂದು ಹೇಳುವರು.
45 ಆಗ ಆತನು ಅವರಿಗೆ ಪ್ರತ್ಯುತ್ತರವಾಗಿ–ನಾನು ನಿಮಗೆ ನಿಜವಾಗಿ ಹೇಳುವದೇನಂದರೆ, ನೀವು ಇವ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡದೆ ಹೋದ ದರಿಂದ ನನಗೂ ಮಾಡಲಿಲ್ಲ ಎಂದು ಹೇಳುವನು.
46 ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.

ಅಪೊಸ್ತಲರ ಕೃತ್ಯಗಳು 1
ಆತನು ಅವರೊಂದಿಗೆ ಕೂಡಿಕೊಂಡಿದ್ದಾಗ–ನೀವು ಯೆರೂಸಲೇಮಿನಿಂದ ಹೊರಟುಹೋಗದೆ ನನ್ನಿಂದ ಕೇಳಿದ ತಂದೆಯ ವಾಗ್ದಾನಕೋಸ್ಕರ ಕಾಯ ಬೇಕೆಂದು ಅವರಿಗೆ ಅಪ್ಪಣೆಕೊಟ್ಟನು.
ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು.
ಅವರು ಕೂಡಿಬಂದಾಗ ಆತ ನಿಗೆ–ಕರ್ತನೇ, ಈ ಸಮಯದಲ್ಲಿಯೇ ನೀನು ಇಸ್ರಾ ಯೇಲ್ಯರಿಗೆ ರಾಜ್ಯವನ್ನು ಪುನಃ ಸ್ಥಾಪಿಸುವಿಯೋ ಎಂದು ಕೇಳಿದರು.
ಆತನು ಅವರಿಗೆ–ತಂದೆಯು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಸಮಯ ಗಳನ್ನೂ ಕಾಲಗಳನ್ನೂ ತಿಳಿದುಕೊಳ್ಳುವದು ನಿಮಗೆ ಸಂಬಂಧಪಟ್ಟದ್ದಲ್ಲ.
ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.

ಪರಲೋಕ ರಾಜ್ಯದ ಸಾಮ್ಯಗಳು

ಮತ್ತಾಯನು 13
ಬಿತ್ತುವವನ ಸಾಮ್ಯ

1 ಅದೇ ದಿನದಲ್ಲಿ ಯೇಸು ಆ ಮನೆಯಿಂ ಹೊರಟುಹೋಗಿ ಸಮುದ್ರದ ಬಳಿಯಲಿ ಕೂತುಕೊಂಡನು.
ಆಗ ಜನರ ದೊಡ್ಡ ಸಮೂಹಗಳು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ದೋಣಿ ಯನ್ನು ಹತ್ತಿ ಕೂತುಕೊಂಡನು. ಮತ್ತು ಆ ಸಮೂಹ ದವರೆಲ್ಲಾ ದಡದ ಮೇಲೆ ನಿಂತಿದ್ದರು.
ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆ–ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟನು.
ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಆಗ ಪಕ್ಷಿಗಳು ಬಂದು ಅವು ಗಳನ್ನು ನುಂಗಿಬಿಟ್ಟವು.
ಕೆಲವು ಬಹಳ ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು; ಅಲ್ಲಿ ಆಳವಾದ ಮಣ್ಣು ಇಲ್ಲದ್ದರಿಂದ ತಕ್ಷಣವೇ ಅವು ಮೊಳೆತವು;
ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಅವುಗಳಿಗೆ ಬೇರು ಇಲ್ಲದ್ದರಿಂದ ಒಣಗಿಹೋದವು.
ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
ಆದರೆ ಬೇರೆಯವುಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು ಕೆಲವು ಮೂವತ್ತರಷ್ಟು ಫಲಕೊಟ್ಟವು.
ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.

ಬಿತ್ತುವವನ ಸಾಮ್ಯದ ವಿವರಣೆ
18 
ಆದದರಿಂದ ಬಿತ್ತುವವನ ಸಾಮ್ಯದ ವಿಷಯವಾಗಿ ನೀವು ಕೇಳಿರಿ:
19 ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ.
20 ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ;
21 ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
22 ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.
23 ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.

ಹಣಜಿಯ ಸಾಮ್ಯ
24 ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ–ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.
25 ಹೇಗಂದರೆ ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಯನ್ನು ಬಿತ್ತಿ ಹೊರಟು ಹೋದನು.
26 ಅದು ಮೊಳೆತು ಫಲಕೊಟ್ಟಾಗ ಹಣಜಿ ಸಹ ಕಾಣಿಸಿ ಕೊಂಡಿತು.
27 ಆದದರಿಂದ ಮನೇಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ–ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದಿ ಯಲ್ಲಾ? ಹಾಗಾದರೆ ಈ ಹಣಜಿಯು ಎಲ್ಲಿಂದ ಬಂತು ಎಂದು ಕೇಳಿದರು.
28 ಅವನು ಅವರಿಗೆ–ಒಬ್ಬ ವೈರಿ ಯು ಇದನ್ನು ಮಾಡಿದ್ದಾನೆ ಅಂದನು. ಆದರೆ ಸೇವಕರು ಅವನಿಗೆ–ಹಾಗಾದರೆ ನಾವು ಹೋಗಿ ಅವುಗಳನ್ನು ಕೂಡಿಸುವಂತೆ ನೀನು ಇಷ್ಟಪಡುತ್ತೀಯೋ ಎಂದು ಕೇಳಿದರು.
29 ಆದರೆ ಅವನು–ಬೇಡ, ನೀವು ಹಣಜಿಯನ್ನು ಕೂಡಿಸುವಾಗ ಅವುಗಳೊಂದಿಗೆ ಗೋದಿಯನ್ನೂ ಕಿತ್ತೀರಿ.
30 ಸುಗ್ಗೀಕಾಲದ ವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ–ಮೊದಲು ಹಣಜಿಯನ್ನು ಕೂಡಿಸಿ ಅದನ್ನು ಸುಡುವದಕ್ಕೆ ಹೊರೆ ಕಟ್ಟಿರಿ; ಆದರೆ ಗೋದಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು ಅಂದನು.

ಸಾಸಿವೆ ಕಾಳು ಮತ್ತು ಹುಳಿ
31 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ–ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.
32 ಅದು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದಾದದ್ದೇ ನಿಜ; ಆದರೆ ಅದು ಬೆಳೆದಾಗ ಎಲ್ಲಾ ಸಸಿಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.
33 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ–ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.

ಪ್ರವಾದನೆ ಮತ್ತು ಸಾಮ್ಯಗಳು
34 ಯೇಸು ಇವೆಲ್ಲವುಗಳನ್ನು ಜನಸಮೂಹ ದೊಂದಿಗೆ ಸಾಮ್ಯಗಳಲ್ಲಿ ಮಾತನಾಡಿದನು; ಸಾಮ್ಯ ವಿಲ್ಲದೆ ಆತನು ಅವರೊಂದಿಗೆ ಮಾತನಾಡಲಿಲ್ಲ.
35 ಹೀಗೆ–ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು; ಲೋಕದ ಅಸ್ತಿವಾರದಿಂದ ಮರೆಯಾಗಿ ಇಡಲ್ಪಟ್ಟವುಗಳನ್ನು ನಾನು ಹೊರಪಡಿಸುವೆನು ಎಂದು ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರಿತು.

ಹಣಜಿಯ ಸಾಮ್ಯದ ವಿವರಣೆ
36 ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು; ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ–ಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು.
37 ಆತನು ಪ್ರತ್ಯುತ್ತರವಾಗಿ ಅವರಿಗೆ– ಒಳ್ಳೇ ಬೀಜ ಬಿತ್ತುವ ವನು ಮನುಷ್ಯಕುಮಾರನು;
38 ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ.
39 ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ.
40 ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು.
41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು;
42 ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
43 ತರುವಾಯ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.

ಬಚ್ಚಿಟ್ಟಿದ ಸಂಪತ್ತಿನ ಸಾಮ್ಯ
44 ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.

ಬಹು ಬೆಲೆಯುಳ್ಳ ಒಳ್ಳೇ ಮುತ್ತಿನ ಸಾಮ್ಯ
45 ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.

ಬಲೆಯ ಸಾಮ್ಯ
47 ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
48 ಅದು ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಹೊರಗೆ ಬಿಸಾಡಿದರು.
49 ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು.
50 ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.
51 ಇದಲ್ಲದೆ ಯೇಸು ಅವರಿಗೆ–ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ ಎಂದು ಕೇಳಿದ್ದಕ್ಕೆ ಅವರು ಆತ ನಿಗೆ–ಕರ್ತನೇ, ಹೌದು ಎಂದು ಹೇಳಿದರು.
52 ಆತನು ಅವರಿಗೆ–ಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು.

ಮತ್ತಾಯನು 19
13 ತರುವಾಯ ಆತನು ತನ್ನ ಕೈಗಳನ್ನಿಟ್ಟು ಪ್ರಾರ್ಥಿಸು ವಂತೆ ಕೆಲವರು ಚಿಕ್ಕಮಕ್ಕಳನ್ನು ಆತನ ಬಳಿಗೆ ತಂದರು. ಆಗ ಶಿಷ್ಯರು ಅವರನ್ನು ಗದರಿಸಿದರು.
14 ಆದರೆ ಯೇಸು–ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರ ದಂತೆ ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ಪರಲೋಕರಾಜ್ಯವು ಇಂಥವರದೇ ಅಂದನು.
15 ಮತ್ತು ಆತನು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಅಲ್ಲಿಂದ ಹೊರಟು ಹೋದನು.

ಕೊಲೊಸ್ಸೆಯವರಿಗೆ 1
ಆದಕಾರಣ ನಾವು ಸಹ ಅದನ್ನು ಕೇಳಿದ ದಿವಸ ದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲಜ್ಞಾನವನ್ನೂ ಆತ್ಮೀಯ ಗ್ರಹಿಕೆಯನ್ನೂ ಹೊಂದಿ ಆತನ ಚಿತ್ತದ ವಿಷಯವಾದ ತಿಳುವಳಿಕೆ ಯಿಂದ ತುಂಬಿಕೊಂಡು
10 ಕರ್ತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿ ಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯ ವೆಂಬ ಫಲವನ್ನು ಕೊಡುತ್ತಾ ದೇವರ ಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿರಬೇಕೆಂತಲೂ
11 ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ
12 ಬೆಳಕಿ ನಲ್ಲಿರುವ ಪರಿಶುದ್ದರ ಬಾಧ್ಯತೆಯಲ್ಲಿ ಪಾಲುಗಾರ ರಾಗುವದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿ ಮಾಡುವವರಾಗಿರಬೇಕೆಂತಲೂ ನಾನು ಆಶಿಸುತ್ತೇನೆ.
13 ಆತನು (ದೇವರು) ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡಿಸಿ ತನ್ನ ಪ್ರಿಯಕುಮಾರನ ರಾಜ್ಯ ದೊಳಗೆ ಸೇರಿಸಿದನು.
14 ಆತನಲ್ಲಿ (ಆ ಕುಮಾರನಲ್ಲಿ) ಆತನ ರಕ್ತದ ಮೂಲಕ ನಮಗೆ ವಿಮೋಚನೆಯು ಅಂದರೆ ಪಾಪಪರಿಹಾರವು ಉಂಟಾಯಿತು.

ಲೂಕನು 13
22 ಆತನು ಪಟ್ಟಣಗಳನ್ನೂ ಹಳ್ಳಿಗಳನ್ನೂ ಹಾದು, ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣ ಮಾಡಿದನು.
23 ಆಗ ಒಬ್ಬನು ಆತನಿಗೆ–ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ ಎಂದು ಕೇಳಲು ಆತನು ಅವರಿಗೆ–
24 ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ.
25 ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ–ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ–ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.
26 ಆಗ ನೀವು–ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ.
27 ಆದರೆ ಆತನು–ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
28 ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
29 ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
30 ಆಗ ಇಗೋ, ಕೊನೆಯವರು ಮೊದಲನೆಯವರಾಗುವರು; ಮೊದ ಲನೆಯವರು ಕೊನೆಯವರಾಗುವರು ಎಂದು ಹೇಳಿದನು.

ಯೆಶಾಯ 9
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.

ಪ್ರಕಟನೆ 5
ನಾನು ನೋಡಲಾಗಿ ಇಗೋ, ಸಿಂಹಾಸ ನದ ಮತ್ತು ನಾಲ್ಕು ಜೀವಿಗಳ ಮಧ್ಯದಲ್ಲಿಯೂ ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ವಧಿಸಲ್ಪಟ್ಟಂತೆ ನಿಂತಿರುವದನ್ನು ಕಂಡೆನು; ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು; ಅವು ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮ
ಆತನು ಬಂದು ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯೊಳಗಿಂದ ಆ ಪುಸ್ತಕ ವನ್ನು ತೆಗೆದುಕೊಂಡನು.
ಆತನು ಆ ಪುಸ್ತಕವನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಮುಂದೆ ಅಡ್ಡಬಿದ್ದರು; ಅವರೆಲ್ಲರ ಕೈಗಳಲ್ಲಿ ವೀಣೆಗಳೂ ಪರಿ ಶುದ್ಧರ ಪರಿಮಳವಾದ ಪ್ರಾರ್ಥನೆಗಳಿಂದ ತುಂಬಿದ್ದ ಚಿನ್ನದ ಪಾತ್ರೆಗಳೂ ಇದ್ದವು.
ಅವರು ಹೊಸ ಹಾಡನ್ನು ಹಾಡುತ್ತಾ–ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;
10 ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು.
11 ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.
12 ಅವರು–ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು.
13 ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ–ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.
14 ಆಗ ನಾಲ್ಕು ಜೀವಿಗಳು–ಆಮೆನ್‌ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.

 
 

Related Quiz Articles