ದೇವದೂತರು

ಕೊಲೊಸ್ಸೆಯವರಿಗೆ 1:16 ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು.

ದೇವದೂತರು ಯೇಸುವಿಗೆ ಅಧೀನ ಮಾಡಲ್ಪಟ್ಟಿದ್ದಾರೆ
1 ಪೇತ್ರನು 3
18 ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.
19 ಆತನು ಆತ್ಮನಿಂದಲೇ ಸೆರೆಯಲ್ಲಿದ್ದ ಆತ್ಮಗಳಿಗೆ ಹೋಗಿ ಸಾರಿದನು;
20 ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.
21 ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).
22 ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೂತರೂ ಪ್ರಭುತ್ವ ಗಳೂ ಅಧಿಕಾರಗಳೂ ಆತನಿಗೆ ಅಧೀನ ಮಾಡಲ್ಪಟ್ಟಿದ್ದಾರೆ.

ದೇವದೂತರು ಸಂತೋಷಪಟ್ಟರು
ಇಬ್ರಿಯರಿಗೆ 12 

18 ಮುಟ್ಟಬಹುದಾದ ಮತ್ತು ಬೆಂಕಿ ಹತ್ತಿದಂಥ ಬೆಟ್ಟಕ್ಕೂ ಮೊಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
19 ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು;
20 (ಯಾಕಂದರೆ ಯಾವ ಮೃಗವಾ ದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲ ಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕೆಂದು ಅವರು ಆಜ್ಞಾಪಿಸಿದ್ದನ್ನು ತಾಳಲಾರದೆ ಇದ್ದರು.
21 ಇದಲ್ಲದೆ ಅಲ್ಲಿ ತೋರಿದ್ದು ಅಷ್ಟು ಭಯಂಕರವಾಗಿದ್ದದರಿಂದ ಮೋಶೆಯು–ನನಗೆ ಬಹು ಭಯವಾಗುತ್ತದೆ, ನಡು ಗುತ್ತೇನೆ ಎಂದು ಹೇಳಿದನು).
22 ಆದರೆ ನೀವು ಚೀಯೋನ್‌ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ
23 ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ
24 ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

ಲೂಕನು 2
ಹೀಗಿರಲಾಗಿ ಅವನು ತನ್ನ ವರ್ಗದ ಸರತಿಯ ಮೇರೆಗೆ ದೇವರ ಮುಂದೆ ಯಾಜಕನ ಉದ್ಯೋಗವನ್ನು ಮಾಡುತ್ತಿದ್ದಾಗ
ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.
10 ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.
11 ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.
12 ಜಕರೀ ಯನು ಅವನನ್ನು ನೋಡಿ ಕಳವಳದಿಂದ ಭಯಹಿಡಿ ದವನಾದನು.
13 ಆದರೆ ಆ ದೂತನು ಅವನಿಗೆ–ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.
14 ನಿನಗೆ ಆನಂದವೂ ಉಲ್ಲಾಸವೂ ಆಗುವದು; ಅನೇಕರು ಅವನ ಜನನದಲ್ಲಿ ಆನಂದಿಸುವರು.
15 ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.

ಲೂಕನು 15
ಯಾವ ಸ್ತ್ರೀಯು ತನ್ನಲ್ಲಿ ಹತ್ತು ಬೆಳ್ಳಿಯ ನಾಣ್ಯಗಳಿರಲಾಗಿ ಒಂದು ನಾಣ್ಯವನ್ನು ಕಳೆದುಕೊಂಡರೆ ದೀಪಹಚ್ಚಿ ಮನೆಯನ್ನು ಗುಡಿಸಿ ಅವಳು ಅದನ್ನು ಕಂಡುಕೊಳ್ಳುವ ವರೆಗೆ ಜಾಗ್ರತೆಯಿಂದ ಹುಡುಕುವ ದಿಲ್ಲವೇ?
ಅವಳು ಅದನ್ನು ಕಂಡುಕೊಂಡ ಮೇಲೆ ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ–ನನ್ನ ಸಂಗಡ ಸಂತೋಷಪಡಿರಿ; ಯಾಕಂ ದರೆ ನಾನು ಕಳಕೊಂಡಿದ್ದ ನಾಣ್ಯವನ್ನು ಕಂಡುಕೊಂಡೆನು ಅನ್ನುವಳು.
10 ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಬಹುಮಂದಿ ದೂತರು
ಪ್ರಕಟನೆ 5

11 ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.

ದೂತರು ಆಹಾರವನ್ನು ತಿಂದರು
ಕೀರ್ತನೆಗಳು 78
23 ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು.
24 ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.
25 ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.

ಇಬ್ರಿಯರಿಗೆ 13
1 ಸಹೋದರ ಪ್ರೀತಿಯು ನೆಲೆಯಾಗಿರಲಿ.
ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.

ದೇವರು ದೂತರಿಗೆ ಆಜ್ಞಾಪಿಸುವನು
ಕೀರ್ತನೆಗಳು 91
ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ
10 ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು.
11 ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
12 ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.

ಕೀರ್ತನೆಗಳು 103
19 ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ.
20 ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ,
21 ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ.
22 ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.

ಮತ್ತಾಯನು 4
ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ–
ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ–ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ
ಯೇಸು ಅವನಿಗೆ — ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು.

ದೂತರಿಗೆ ರಹಸ್ಯಗಳು
1 ಪೇತ್ರನು 1

ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
9 ನಿಮ್ಮ ನಂಬಿಕೆಯ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ.
10 ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
11 ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ಸಾಕ್ಷೀಕರಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವ ನೆಂಬದನ್ನು ಅವರು ಪರಿಶೋಧನೆ ಮಾಡಿದರು.
12 ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.

ಮನುಷ್ಯಕುಮಾರನು ದೂತರೊಡನೆ ಬರುವನು
ಮತ್ತಾಯನು 16

25 ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳ ಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣ ವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು.
26 ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?
27 ಯಾಕಂದರೆ ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯಲ್ಲಿ ತನ್ನ ದೂತರೊಡನೆ ಬಂದಾಗ ಆತನು ಪ್ರತಿಯೊಬ್ಬ ನಿಗೂ ಅವನವನ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವನು ಎಂದು ಹೇಳಿದನು.

ಮತ್ತಾಯನು 24
30 ಆಗ ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣುವದು; ಭೂಮಿಯ ಎಲ್ಲಾ ಗೋತ್ರದವರು ಗೋಳಾಡುವರು. ಮತ್ತು ಮನುಷ್ಯಕುಮಾರನು ಆಕಾಶದ ಮೇಘಗಳಲ್ಲಿ ಶಕ್ತಿಯೊಡನೆಯೂ ಮಹಾ ಪ್ರಭಾವದೊಂದಿಗೂ ಬರುವದನ್ನು ಅವರು ನೋಡು ವರು.
31 ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
32 ಈಗ ಅಂಜೂರ ಮರದ ಸಾಮ್ಯದಿಂದ ಕಲಿ ಯಿರಿ; ಆದರ ಕೊಂಬೆಯು ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿ ತೆಂದು ನೀವು ತಿಳಿದುಕೊಳ್ಳುವಿರಿ;
33 ಅದರಂತೆಯೇ ನೀವು ಇವುಗಳನ್ನೆಲ್ಲಾ ನೋಡುವಾಗ ಅದು ಸವಿಾಪ ದಲ್ಲಿ ಬಾಗಲುಗಳಲ್ಲಿಯೇ ಇದೆಯೆಂದು ತಿಳು ಕೊಳ್ಳಿರಿ.
34 ಇವೆಲ್ಲವುಗಳು ನೇರವೇರುವ ವರೆಗೆ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
35 ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.

1 ಥೆಸಲೊನೀಕದವರಿಗೆ 4
13 ಇದಲ್ಲದೆ ಸಹೋದರರೇ, ನಿರೀಕ್ಷೆಯಿಲ್ಲದ ಬೇರೆಯವರ ಹಾಗೆ ದುಃಖಿಸಿದಂತೆ ನಿದ್ರೆಹೋದವರ ವಿಷಯದಲ್ಲಿ ನೀವು ತಿಳಿದಿರಬೇಕೆಂದು ನಾನು ಇಚ್ಚಿಸುತ್ತೇನೆ.
14 ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ.
15 ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ, ಕರ್ತನು ಪ್ರತ್ಯಕ್ಷನಾಗು ವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದ ವರಿಗಿಂತ ಮುಂದಾಗುವದೇ ಇಲ್ಲ.
16 ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ ದೇವರ ತುತೂರಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;
17 ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘ ಗಳಲ್ಲಿ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾ ಕಾಲವೂ ಕರ್ತನ ಜೊತೆಯಲ್ಲಿರುವೆವು.
18 ಆದ ಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

ವೈಯಕ್ತಿಕ ದೂತರು
ಮತ್ತಾಯನು 18

10 ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ–ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.
11 ಯಾಕಂದರೆ ಮನುಷ್ಯಕುಮಾರನು ಕಳೆದುಹೋದ ದ್ದನ್ನು ರಕ್ಷಿಸುವದಕ್ಕಾಗಿ ಬಂದನು.
12 ನೀವು ಹೇಗೆ ಯೋಚಿಸುತ್ತೀರಿ? ಒಬ್ಬ ಮನುಷ್ಯ ನಿಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡು ಹೋದರೆ ಅವನು ತೊಂಭತ್ತೊಂಭತ್ತನ್ನು ಬಿಟ್ಟು ಬೆಟ್ಟಗಳಿಗೆ ಹೊರಟುಹೋಗಿ ತಪ್ಪಿಸಿಕೊಂಡ ದ್ದನ್ನು ಹುಡುಕುವದಿಲ್ಲವೇ?
13 ನಾನು ನಿಮಗೆ ನಿಜವಾಗಿ ಹೇಳುವದೇನಂದರೆ–ಅವನು ಅದನ್ನು ಕಂಡುಕೊಂಡರೆ ತಪ್ಪಿಸಿಕೊಳ್ಳದೆ ಇದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆದರ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆ.
14 ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

ಕೀರ್ತನೆಗಳು 34
ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ; ಆತನಲ್ಲಿ ಆಶ್ರ ಯಿಸಿಕೊಳ್ಳುವ ಮನುಷ್ಯನು ಧನ್ಯನು.

ದೂತರು ಸೇವೆಗೋಸ್ಕರ ಕಳುಹಿಸಲ್ಪಟ್ಟ ಊಳಿಗದ ಆತ್ಮಗಳು
ಇಬ್ರಿಯರಿಗೆ 1

10 ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.
11 ಅವು ನಾಶವಾಗುವವು; ಆದರೆ ನೀನು ಇರುವಾತನಾಗಿದ್ದೀ; ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು;
12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ; ಅವು ಮಾರ್ಪಡುವವು; ನೀನಾದರೋ ಏಕ ರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದು ಹೋಗುವದಿಲ್ಲ ಎಂತಲೂ ಹೇಳುತ್ತಾನೆ.
13 ಆದರೆ ದೂತರಲ್ಲಿ ಯಾವನ ವಿಷಯ ದಲ್ಲಿಯಾದರೂ–ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂಬದಾಗಿ ಎಂದಾದರೂ ಹೇಳಿ ದ್ದಾನೋ?
14 ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?

ಇಬ್ರಿಯರಿಗೆ 2
ನಾವು ಪ್ರಸ್ತಾಪಿಸುವ ಬರುವ ಆ ಲೋಕವನ್ನು ಆತನು ದೂತರಿಗೆ ಅಧೀನ ಮಾಡಲಿಲ್ಲವಲ್ಲಾ.
ಆದರೆ ಒಬ್ಬನು ಒಂದಾನೊಂದು ಸ್ಥಳದಲ್ಲಿ–ಮನುಷ್ಯನು ಎಷ್ಟು ಮಾತ್ರದವನು? ಅವನನ್ನು ನೀನು ಯಾಕೆ ನೆನಸಬೇಕು? ಇಲ್ಲವೆ ನರಪುತ್ರನು ಎಷ್ಟರವನು? ಅವನನ್ನು ಯಾಕೆ ದರ್ಶಿಸಬೇಕು?
ನೀನು ಅವನನ್ನು ದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವ ವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟು ನಿನ್ನ ಕೈಕೆಲಸಗಳ ಮೇಲೆ ಅವನನ್ನು ನೇಮಿಸಿದ್ದೀ;
ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ ಎಂದು ಸಾಕ್ಷಿ ಹೇಳಿದನು; ಆತನು ಎಲ್ಲವನ್ನೂ ಮನುಷ್ಯನಿಗೆ ಅಧೀನಮಾಡಿದ ನೆಂಬದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ; ಆದರೆ ಎಲ್ಲವೂ ಅವನಿಗೆ ಅಧೀನವಾಗಿರು ವದನ್ನು ನಾವು ಇನ್ನೂ ಕಾಣುವದಿಲ್ಲ.
9 ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ
10 ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.
11 ಯಾಕಂದರೆ ಪವಿತ್ರ ಮಾಡುವಾತನೂ ಪವಿತ್ರರಾದವರೆಲ್ಲರೂ ಒಬ್ಬಾತನಿಗೆ ಸಂಬಂಧಪಟ್ಟವರಾಗಿದ್ದಾರೆ. ಈ ಕಾರಣದಿಂದ ಆತನು ಅವರನ್ನು ಸಹೋದರರೆಂದು ಕರೆಯುವದಕ್ಕೆ ನಾಚಿಕೆ ಪಡದೆ–
12 ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿ ಪದಗಳನ್ನು ಹಾಡುವೆನು ಎಂತಲೂ
13 ನಾನು ಆತನ ಮೇಲೆ ಭರವಸವಿಡುವೆನು ಎಂತಲೂ ತಿರಿಗಿ–ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಎಂತಲೂ ಹೇಳುತ್ತಾನೆ.
14 ಇದಲ್ಲದೆ ಮಕ್ಕಳು ರಕ್ತಮಾಂಸಗಳಲ್ಲಿ ಪಾಲುಗಾರರಾದದರಿಂದ ಆತನು ಸಹ ಅವರಂತೆಯೇ ಆದನು; ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶ ಮಾಡುವದಕ್ಕೂ
15 ಮರಣ ಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಗಳಲ್ಲಿ ಭಾಗ ವಹಿಸಿದನು.
16 ಆತನು ನಿಜವಾಗಿಯೂ ದೂತರ ಸ್ವಭಾವವನ್ನು ಧರಿಸಿಕೊಳ್ಳದೆ ಅಬ್ರಹಾಮನ ಸಂತತಿಯ ಸ್ವಭಾವವನ್ನು ಧರಿಸಿಕೊಂಡನು.
17 ಆದದರಿಂದ ಆತನು ಎಲ್ಲವುಗಳಲ್ಲಿ ತನ್ನ ಸಹೋದರರಿಗೆ ಸಮಾನ ವಾಗಿ ಮಾಡಲ್ಪಟ್ಟನು. ಹೀಗೆ ಆತನು ಜನರ ಪಾಪಗಳಿ ಗೋಸ್ಕರ ಶಾಂತಿ ಮಾಡುವದಕ್ಕೆ ದೇವರ ಕಾರ್ಯ ಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.
18 ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.

ವಿಮೋಚನಕಾಂಡ 23
20 ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.
21 ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ.
22 ಆತನ ಮಾತಿಗೆ ನೀವು ನಿಜವಾಗಿಯೂ ವಿಧೇಯ ರಾಗಿ ಹೇಳಿದ್ದನ್ನೆಲ್ಲಾ ನೀವು ಮಾಡಿದರೆ ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ವಿರೋಧಿ ಯಾಗಿಯೂ ನಾನು ಇರುವೆನು.
23 ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರೂ ಹಿತ್ತಿಯರೂ ಪೆರಿಜೀಯರೂ ಕಾನಾನ್ಯರೂ ಹಿವ್ವಿಯರೂ ಯೆಬೂಸಿ ಯರೂ ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು.
24 ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು.
25 ನೀವು ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಬೇಕು. ಆಗ ಆತನು ನಿಮ್ಮ ರೊಟ್ಟಿಯನ್ನೂ ನೀರನ್ನೂ ಆಶೀರ್ವದಿಸುವನು, ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿ ಬಿಡುವೆನು.
26 ಗರ್ಭಸ್ರಾವವಾಗಲಿ ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವದಿಲ್ಲ; ನಿನ್ನ ದಿನಗಳ ಲೆಕ್ಕವನ್ನು ಪೂರ್ತಿಮಾಡುವೆನು.
27 ನನ್ನ ಭಯವನ್ನು ನಿಮ್ಮ ಮುಂದೆ ಕಳುಹಿಸಿ ನೀವು ಸೇರುವ ಜನರನ್ನೆಲ್ಲಾ ನಾಶಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿ ಸುವಂತೆ ಮಾಡುವೆನು.
28 ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು.
29 ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ
30 ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು.
31 ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
32 ಅವರ ಸಂಗಡಲೂ ಅವರ ದೇವರುಗಳ ಸಂಗಡಲೂ ಯಾವ ಒಡಂಬಡಿಕೆಯನ್ನೂ ಮಾಡಬಾರದು.
33 ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.

ಭೂಲೋಕವನ್ನು ಸೃಷ್ಟಿಸುವಾಗ ದೂತರು
ಯೋಬನು 38

1 ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು–
ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.
ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು.
ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು?
ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು?
ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು.

ಪೇತ್ರನನ್ನು ದೇವದೂತನು ತಪ್ಪಿಸಿದನು
ಅಪೊಸ್ತಲರ ಕೃತ್ಯಗಳು 12

ಹೆರೋದನು ಪೇತ್ರನನ್ನು ಹೊರಗೆ ತರಬೇಕೆಂದಿದ್ದ ಅದೇ ರಾತ್ರಿಯಲ್ಲಿ ಅವನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟು ಇಬ್ಬರು ಸೈನಿಕರ ಮಧ್ಯದಲ್ಲಿ ನಿದ್ರೆಮಾಡುತ್ತಿದ್ದನು; ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯು ತ್ತಿದ್ದರು.
ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ–ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು.
ಆ ದೂತನು ಅವನಿಗೆ–ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೆಯೇ ಮಾಡಿದನು. ಆ ದೂತನು ಅವನಿಗೆ ನಿನ್ನ ಮೇಲಂಗಿ ಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು.
ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ಅವನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ದರ್ಶನವೆಂದು ನೆನಸಿದನು.
10 ಅವನು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೆ ಆ ದೂತನು ಅವನನ್ನು ಬಿಟ್ಟು ಹೊರಟುಹೋದನು.
11 ಆಗ ಪೇತ್ರನು ಎಚ್ಚರವಾಗಿ– ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು.
12 ತರುವಾಯ ಅವನು ಯೋಚನೆ ಮಾಡಿಕೊಂಡು ಮಾರ್ಕನೆನಿಸಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.
13 ಪೇತ್ರನು ದ್ವಾರದ ಬಾಗಿಲನ್ನು ತಟ್ಟಿದಾಗ ರೋದೆ ಎಂಬ ಒಬ್ಬ ಹುಡುಗಿಯು ಕೇಳುವದಕ್ಕೆ ಬಂದಳು.
14 ಅವಳು ಪೇತ್ರನ ಧ್ವನಿಯನ್ನು ತಿಳಿದಾಗ ಸಂತೋಷದ ನಿಮಿತ್ತದಿಂದಲೇ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ–ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ ಎಂದು ಹೇಳಿದಳು.
15 ಅವರು ಅವಳಿಗೆ–ನಿನಗೆ ಹುಚ್ಚು ಹಿಡಿದದೆ ಎಂದು ಹೇಳಿದರು. ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳಿದ್ದಕ್ಕೆ ಅವರು–ಅವನು ಪೇತ್ರನ ದೂತನು ಅಂದರು.
16 ಅಷ್ಟರಲ್ಲಿ ಪೇತ್ರನು ಇನ್ನೂ ತಟ್ಟುತ್ತಾ ಇರಲು ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.
17 ಅವನು ಸುಮ್ಮನಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರ ರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟು ಹೋದನು.
18 ಬೆಳಗಾದ ಮೇಲೆ ಪೇತ್ರನು ಏನಾದ ನೆಂದು ಸೈನಿಕರಲ್ಲಿ ಬಹಳ ಕಳವಳ ಉಂಟಾಯಿತು.

ಯುದ್ಧಗಳಲ್ಲಿ ಹೋರಾಡುವ ದೂತರು
2 ಅರಸುಗಳು 19

32 ಆದ ದರಿಂದ ಕರ್ತನು ಅಶ್ಶೂರಿನ ಅರಸನನ್ನು ಕುರಿತು ಹೇಳುವದೇನಂದರೆ–ಅವನು ಈ ಪಟ್ಟಣದಲ್ಲಿ ಬರು ವದಿಲ್ಲ; ಅಲ್ಲಿ ಬಾಣವನ್ನು ಎಸೆಯುವದಿಲ್ಲ; ಗುರಾಣಿ ಹಿಡಿದುಕೊಂಡು ಅದರ ಮುಂದೆ ಸೇರುವದಿಲ್ಲ; ಅದಕ್ಕೆ ವಿರೋಧವಾಗಿ ದಿನ್ನೆಯನ್ನು ಹಾಕುವದಿಲ್ಲ.
33 ಅವನು ಬಂದ ಮಾರ್ಗವಾಗಿಯೇ ತಿರಿಗಿ ಹೋಗುವನು; ಆದರೆ ಅವನು ಈ ಪಟ್ಟಣದಲ್ಲಿ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ.
34 ನನ್ನ ನಿಮಿತ್ತವೂ ನನ್ನ ಸೇವಕನಾದ ದಾವೀದನ ನಿಮಿತ್ತವೂ ನಾನು ಈ ಪಟ್ಟಣವನ್ನು ಕಾಪಾಡಿ ಅದನ್ನು ರಕ್ಷಿಸುವೆನು ಎಂಬದೇ.
35 ಅದೇ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ದೂತನು ಹೊರಟು ಅಶ್ಶೂರಿನ ದಂಡಿನಲ್ಲಿ ಒಂದು ಲಕ್ಷ ಎಂಭತ್ತೈದು ಸಾವಿರ ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ ಇಗೋ, ಅವರೆಲ್ಲರೂ ಸತ್ತು ಹೆಣಗಳಾಗಿದ್ದರು.
36 ಅಶ್ಶೂರಿನ ಅರಸನಾದ ಸನ್ಹೇರೀಬನು ಹಿಂತಿರುಗಿಹೋಗಿ ನಿನೆವೆಯಲ್ಲಿ ವಾಸ ವಾಗಿದ್ದನು.
37 ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.

ವಿಮೋಚನಕಾಂಡ 14
ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು.
10 ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್‌ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್‌ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು.
11 ಅವರು ಮೋಶೆಗೆ–ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?
12 ನಾವು ಐಗುಪ್ತದೇಶ ದಲ್ಲಿದ್ದಾಗಲೇ–ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ಸೇವೆಮಾಡುವೆವು. ನಾವು ಅರಣ್ಯ ದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ಸೇವೆ ಮಾಡು ವದು ಒಳ್ಳೇದಾಗಿತ್ತಲ್ಲವೇ ಎಂದು ಹೇಳಿದರು.
13 ಅದಕ್ಕೆ ಮೋಶೆಯು ಜನರಿಗೆ–ನೀವು ಭಯಪಡ ಬೇಡಿರಿ; ಕದಲದೆ ನಿಲ್ಲಿರಿ; ಕರ್ತನು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವದಿಲ್ಲ.
14 ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು.
15 ಆಗ ಕರ್ತನು ಮೋಶೆಗೆ–ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್‌ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.
16 ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.
17 ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
18 ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು.
19 ಆಗ ಇಸ್ರಾಯೇಲ್‌ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
20 ಅದು ಐಗುಪ್ತ್ಯರ ದಂಡಿಗೂ ಇಸ್ರಾಯೇಲ್ಯರ ದಂಡಿಗೂ ನಡುವೆ ಬಂದಿತು. ಅದು ಅವರಿಗೆ ಮೇಘವೂ ಕತ್ತಲೂ ಆಗಿದ್ದು ಇಸ್ರಾಯೇಲ್ಯರಿಗೆ ರಾತ್ರಿ ಯಲ್ಲಿ ಬೆಳಕು ಕೊಡುವಂಥದ್ದಾಗಿದ್ದದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಿಲ್ಲ.
21 ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.
22 ಹೀಗೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.
23 ಐಗು ಪ್ತ್ಯರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆಯ ಸವಾರರೂ ಅವರನ್ನು ಹಿಂದಟ್ಟಿ ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
24 ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ
25 ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ–ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.
26 ಆಗ ಕರ್ತನು ಮೋಶೆಗೆ–ಐಗುಪ್ತ್ಯರ ಮೇಲೆಯೂ ಅವರ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನೀರು ತಿರಿಗಿ ಬರುವಹಾಗೆ ಸಮುದ್ರದ ಮೇಲೆ ಕೈಚಾಚು ಅಂದನು.
27 ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು.
28 ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.
29 ಆದರೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು.
30 ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.

ದೂತರು ಮಾರ್ಗದರ್ಶನ ಮಾಡುವನು
ಅಪೊಸ್ತಲರ ಕೃತ್ಯಗಳು 8

26 ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ–ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು.
27 ಅವನು ಎದ್ದು ಹೊರಟು ಹೋಗುತ್ತಿರುವಾಗ ಇಗೋ, ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾ ರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದ ಐಥಿಯೋಪ್ಯದವನಾದ ಒಬ್ಬ ಕಂಚುಕಿಯು ಆರಾಧನೆಗೋಸ್ಕರ ಯೆರೂಸಲೇಮಿಗೆ ಬಂದು
28 ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕೂತು ಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದು ತ್ತಿದ್ದನು;
29 ಆಗ ಆತ್ಮನು ಫಿಲಿಪ್ಪನಿಗೆ–ನೀನು ಆ ರಥದ ಹತ್ತಿರ ಹೋಗಿ ಅದನ್ನು ಸಂಧಿಸು ಎಂದು ಹೇಳಿದನು.
30 ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿರುವದನ್ನು ಕೇಳಿ–ನೀನು ಓದುವದು ನಿನಗೆ ತಿಳಿಯುತ್ತದೋ ಅನ್ನಲು
31 ಅವನು-ಯಾರಾದರೂ ನನಗೆ ತಿಳಿಸದ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ ಫಿಲಿಪ್ಪನು ಮೇಲಕ್ಕೆ ಬಂದು ತನ್ನ ಬಳಿಯಲ್ಲಿ ಕೂತುಕೊಳ್ಳಬೇಕೆಂದು ಅವನು ಅಪೇಕ್ಷೆಪಟ್ಟನು.

ದಾನಿಯೇಲನು 9
20 ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.
21 ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು.
22 ಅವನು ನನಗೆ ತಿಳಿಸಿ ನನ್ನೊಡನೆ ಮಾತಾಡಿ ಹೇಳಿದ್ದೇನಂದರೆ–ಓ ದಾನಿಯೇಲನೇ, ನಿನಗೆ ವಿವೇಕವನ್ನೂ ಬುದ್ಧಿಯನ್ನೂ ಕೊಡುವದಕ್ಕೆ ಈಗ ನಾನು ಬಂದಿದ್ದೇನೆ.
23 ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ಆಜ್ಞೆಯು ಬಂದಿತು. ಅದನ್ನು ನಿನಗೆ ತಿಳಿಸುವದಕ್ಕೆ ನಾನು ಬಂದಿದ್ದೇನೆ; ನೀನು ಅತಿಪ್ರಿಯನಾಗಿರುವಿ. ಆದದರಿಂದ ವಿಷಯ ವನ್ನು ಗ್ರಹಿಸಿಕೊಂಡು ದರ್ಶನವನ್ನು ಆಲೋಚಿಸು.

ದಾನಿಯೇಲನು 12
1 ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು;

ದೂತರ (ಸೆರಾಫಿಯರು) ಆರು ರೆಕ್ಕೆಗಳು
ಯೆಶಾಯ 6

1 ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಕರ್ತನು ಉನ್ನ ತೋನ್ನತವಾಗಿ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.
ಅದರ ಮೇಲೆ ಸೆರಾಫಿಯರು ನಿಂತಿದ್ದರು! ಪ್ರತಿಯೊಬ್ಬನಿಗೂ ಆರು ರೆಕ್ಕೆಗಳಿದ್ದವು, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು.
ಒಬ್ಬನು ಮತ್ತೊಬ್ಬನಿಗೆ–ಸೈನ್ಯಗಳ ಕರ್ತನು ಪರಿ ಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲ ವೆಲ್ಲಾ ಆತನ ಮಹಿಮೆಯಿಂದ ತುಂಬಿಯದೆ ಎಂದು ಕೂಗಿ ಹೇಳಿದನು.
ಕೂಗುವವನ ಸ್ವರಕ್ಕೆ ದ್ವಾರದ ನಿಲುವುಗಳು ಕದಲಿದವು, ಆಲಯವು ಧೂಮದಿಂದ ತುಂಬಿತ್ತು.
ಆಗ ನಾನು–ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.
ಆಗ ಸೆರಾಫಿಯರಲ್ಲಿ ಒಬ್ಬನು ತಂಡಸದಿಂದ ಯಜ್ಞವೇದಿಯಲ್ಲಿರುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ಹಾರಿಬಂದು
ಅದನ್ನು ನನ್ನ ಬಾಯಲ್ಲಿ ಇಟ್ಟು–ಇಗೋ, ಇದು ನಿನ್ನ ತುಟಿಗೆ ತಗಲಿತು; ನಿನ್ನ ದೋಷವು ತೊಲಗಿ ನಿನ್ನ ಪಾಪವು ನೀಗಿ ಶುದ್ಧವಾಯಿತು ಎಂದು ಹೇಳಿದನು.

ದೇವಾಲಯದಲ್ಲಿ ಮಂಜೂಷದ ಮೇಲಿರುವ ಎರಡು ಕೆರೂಬಿಗಳು
2 ಪೂರ್ವಕಾಲವೃತ್ತಾ 3

1 ಆಗ ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ ಕರ್ತನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ದಾವೀದನು ಸಿದ್ಧಮಾಡಿದ ಯೆಬೂಸಿ ಯನಾದ ಒರ್ನಾನನ ಕಣದಲ್ಲಿ ಕರ್ತನ ಆಲಯವನ್ನು ಕಟ್ಟಲು ಪ್ರಾರಂಭಿಸಿದನು.
ಅವನು ತನ್ನ ಆಳಿಕೆಯ ನಾಲ್ಕನೇ ವರುಷದ ಎರಡನೇ ತಿಂಗಳಿನ ಎರಡನೇ ದಿವಸದಲ್ಲಿ ಕಟ್ಟುವದಕ್ಕೆ ಆರಂಭಿಸಿದನು.
ದೇವರ ಆಲಯವನ್ನು ಕಟ್ಟುವದಕ್ಕೆ ಸೊಲೊಮೋನನು ಹಾಕಿ ಸಿದ ಅಸ್ತಿವಾರಗಳು ಏನಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಅರವತ್ತು ಮೊಳವು ಅಗಲ ಇಪ್ಪತ್ತು ಮೊಳವು.
ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಇಪ್ಪತ್ತು ಮೊಳ ಉದ್ದವಾಗಿತ್ತು. ಮತ್ತು ನೂರ ಇಪ್ಪತ್ತು ಮೊಳ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಗಿಸಿದನು.
ಅವನು ದೊಡ್ಡ ಆಲಯವನ್ನು ತುರಾಯಿ ಮರಗಳಿಂದ ಮುಚ್ಚಿ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ ಅದರ ಮೇಲೆ ಖರ್ಜೂರದ ಗಿಡಗಳನ್ನೂ ಸರಪಣಿಗಳನ್ನೂ ಕೆತ್ತಿಸಿ ದನು.
ಸೌಂದರ್ಯದ ನಿಮಿತ್ತವಾಗಿ ಅಮೂಲ್ಯ ವಾದ ಕಲ್ಲುಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮಿನ ಬಂಗಾರವು.
ಆಲಯದ ತೊಲೆಗಳನ್ನೂ ಸ್ತಂಭಗಳನ್ನೂ ಗೋಡೆ ಗಳನ್ನೂ ಬಾಗಲುಗಳನ್ನೂ ಅವನು ಬಂಗಾರದಿಂದ ಹೊದಿಸಿ ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನ್ನು ಕೆತ್ತಿಸಿದನು.
ಇದಲ್ಲದೆ ಅತಿಪರಿಶುದ್ಧವಾದ ಆಲಯವನ್ನು ಮಾಡಿದನು; ಅದರ ಉದ್ದವು ಆಲಯದ ಅಗಲದ ಪ್ರಕಾರ ಇಪ್ಪತ್ತು ಮೊಳ; ಅಗಲ ಇಪ್ಪತ್ತು ಮೊಳವಾಗಿ ಇತ್ತು. ಅವನು ಅದನ್ನು ಆರು ನೂರು ತಲಾಂತುಗಳ ಶುದ್ಧ ಬಂಗಾರದಿಂದ ಹೊದಿಸಿದನು.
ಅದರ ಮೊಳೆ ಗಳು ಐವತ್ತು ಶೇಕೆಲುಗಳ ತೂಕ ಬಂಗಾರದ್ದಾಗಿದ್ದವು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
10 ಅತಿಪರಿಶುದ್ಧವಾದ ಆಲಯದಲ್ಲಿ ವಿಚಿತ್ರ ಕೆಲಸವಾದ ಎರಡು ಕೆರೂಬಿಗಳ ಪ್ರತಿಮೆ ಗಳನ್ನು ಮಾಡಿಸಿ ಬಂಗಾರದಿಂದ ಹೊದಿಸಿದನು.
11 ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದವಾಗಿ ದ್ದವು. ಒಂದು ರೆಕ್ಕೆಯು ಐದು ಮೊಳವಾಗಿದ್ದು ಆಲ ಯದ ಗೋಡೆಯ ವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಐದು ಮೊಳವಾಗಿದ್ದು ಇನ್ನೊಂದು ಕೆರೂಬಿಯ ರೆಕ್ಕೆಯ ವರೆಗೂ ಮುಟ್ಟಿತ್ತು.
12 ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳವಾಗಿದ್ದು ಆಲಯದ ಗೋಡೆಯ ವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಐದು ಮೊಳವಾಗಿದ್ದು ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿ ಕೊಂಡಿತ್ತು.
13 ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳಗಳ ವರೆಗೆ ಚಾಚಿಕೊಂಡವು; ಅವು ತಮ್ಮ ಕಾಲುಗಳ ಮೇಲೆ ನಿಂತವು; ಅವುಗಳ ಮುಖ ಗಳು ಒಳಪಾರ್ಶ್ವವಾಗಿದ್ದವು.
14 ತೆರೆಯನ್ನು ನೀಲ ಧೂಮ್ರ ರಕ್ತವರ್ಣಗಳಿಂದಲೂ ನಯವಾದ ನಾರಿನ ವಸ್ತ್ರದಿಂದಲೂ ಮಾಡಿಸಿ ಅದರಲ್ಲಿ ಕೆರೂಬಿಗಳನ್ನು ಮಾಡಿಸಿದನು.
15 ಇದಲ್ಲದೆ ಅವನು ಆಲಯದ ಮುಂದೆ ಮೂವ ತ್ತೈದು ಮೊಳ ಉದ್ದವಾದ ಎರಡು ಸ್ತಂಭಗಳನ್ನು ಮಾಡಿಸಿದನು; ಒಂದೊಂದರ ತುದಿಯ ಮೇಲೆ ಐದು ಮೊಳ ಉದ್ದ ಬೋದಿಗೆಯನ್ನು ಇಟ್ಟನು.
16 ಅವನು ದೈವೋಕ್ತಿಯ ಸ್ಥಾನದಲ್ಲಿರುವ ಹಾಗೆ ಸರಪಣಿಗಳನ್ನು ಮಾಡಿ ಸ್ತಂಭಗಳ ತುದಿಗಳ ಮೇಲೆ ಇಟ್ಟು ನೂರು ದಾಳಿಂಬರ ಹಣ್ಣುಗಳನ್ನು ಮಾಡಿ ಸರಪಣಿಗಳ ಮೇಲೆ ಇರಿಸಿದನು.
17 ಮಂದಿರದ ಮುಂದೆ ಆ ಸ್ತಂಭಗಳಲ್ಲಿ ಒಂದನ್ನು ಬಲಪಾರ್ಶ್ವದಲ್ಲಿಯೂ ಒಂದನ್ನು ಎಡ ಪಾರ್ಶ್ವದಲ್ಲಿಯೂ ನಿಲ್ಲಿಸಿದನು; ಬಲಪಾರ್ಶ್ವದಲ್ಲಿ ಇದ್ದ ಸ್ತಂಭಕ್ಕೆ ಯಾಕೀನ್‌ ಎಂದೂ ಎಡಪಾರ್ಶ್ವದಲ್ಲಿದ್ದ ಸ್ತಂಭಕ್ಕೆ ಬೋವಜ್‌ ಎಂದೂ ಹೆಸರಿಟ್ಟನು.

ವಿಮೋಚನಕಾಂಡ 25
10 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.
11 ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು.
12 ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
13 ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು,
14 ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
15 ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು.
16 ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು.
17 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.
18 ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು.
19 ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು.
20 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು.
21 ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು.
22 ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್‌ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.

ಸೂಚನೆಗಳೊಂದಿಗೆ ದೂತರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ
ಮತ್ತಾಯನು 4

1 ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು.
ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು.
ಆಗ ಆ ಶೋಧಕನು ಆತನ ಬಳಿಗೆ ಬಂದು–ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು.
ಆದರೆ ಆತನು ಪ್ರತ್ಯುತ್ತರವಾಗಿ–ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ–
ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ–ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ
ಯೇಸು ಅವನಿಗೆ — ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು.
ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ–
ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು.
10 ಆಗ ಯೇಸು ಅವನಿಗೆ–ಸೈತಾನನೇ, ಇಲ್ಲಿಂದ ತೊಲಗಿಹೋಗು; ಯಾಕಂದರೆ–ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು.
11 ಆಗ ಸೈತಾನನು ಆತನನ್ನು ಬಿಟ್ಟನು; ಮತ್ತು ಇಗೋ, ದೇವದೂತರು ಬಂದು ಆತನನ್ನು ಉಪಚರಿಸಿದರು.
12 ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಯೇಸು ಕೇಳಿ ಗಲಿಲಾಯಕ್ಕೆ ಹೊರಟುಹೋದನು.
13 ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್‌, ನೆಫ್ತಲೀಮ್‌ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
14 ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು; ಅದೇನಂದರೆ–
15 ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್‌ ಪ್ರಾಂತ್ಯದಲ್ಲಿಯೂ ನೆಫ್ತಲೀಮ್‌ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ
16 ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ.
17 ಅಂದಿನಿಂದ ಯೇಸು–ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪಿಸಿತು ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.
18 ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
19 ಆಗ ಆತನು ಅವರಿಗೆ– ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಾನು ನಿಮ್ಮನ್ನು ಮಾಡುವೆನು ಅಂದನು.
20 ಅವರು ತಕ್ಷಣವೇ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21 ಆತನು ಅಲ್ಲಿಂದ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬ ಅವನ ಸಹೋದರನಾದ ಯೋಹಾನ ಎಂಬ ಬೇರೆ ಇಬ್ಬರು ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿ ಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡು ಅವರನ್ನು ಕರೆದನು.
22 ಅವರು ತಕ್ಷಣವೇ ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.
23 ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.

ಕೈಯಲ್ಲಿ ಬಿಚ್ಚು ಕತ್ತಿಯೊಂದಿಗೆ ದೂತನು
ಅರಣ್ಯಕಾಂಡ 22

1 ಇಸ್ರಾಯೇಲ್‌ ಮಕ್ಕಳು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾ ಬಿನ ಬೈಲುಗಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಇಳುಕೊಂಡರು.
ಇಸ್ರಾಯೇಲ್ಯರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ಚಿಪ್ಪೋರನ ಮಗನಾದ ಬಾಲಾಕನು ನೋಡಿದನು.
ಆ ಜನರು ಬಹುಮಂದಿಯಾದದರಿಂದ ಮೋವಾಬಿನವರು ಅವರಿಗೆ ಬಹಳವಾಗಿ ಅಂಜಿದರು; ಮೋವಾಬಿ ನವರು ಇಸ್ರಾಯೇಲ್‌ ಮಕ್ಕಳನ್ನು ಕಂಡು ದಿಗಿಲು ಪಟ್ಟರು.
ಆದದರಿಂದ ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ ಹೇಳಿದ್ದೇನಂದರೆ–ಈಗ ಈ ಸಮೂಹವು ನಮ್ಮ ಸುತ್ತಲಿರುವದನ್ನೆಲ್ಲಾ ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ ಮೇಯುವದು. ಆ ಕಾಲದಲ್ಲಿ ಚಿಪ್ಪೋ ರನ ಮಗನಾದ ಬಾಲಾಕನು ಮೋವಾಬ್ಯರ ಅರಸ ನಾಗಿದ್ದನು.
ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ–ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.
ಈಗ ನೀನು ದಯಮಾಡಿ ಬಂದು ಈ ಜನವನ್ನು ನನಗಾಗಿ ಶಪಿಸು; ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಒಂದು ವೇಳೆ ನಾನು ಗೆದ್ದೇನು, ನಾವು ಅವರನ್ನು ಹೊಡೆದೇವು; ನಾನು ಅವರನ್ನು ದೇಶದೊಳಗಿಂದ ಹೊರಡಿಸೇನು; ನೀನು ಯಾವನನ್ನು ಆಶೀರ್ವದಿಸು ತ್ತೀಯೋ ಅವನು ಆಶೀರ್ವದಿಸಲ್ಪಟ್ಟವನೇ; ನೀನು ಯಾವನನ್ನು ಶಪಿಸುತ್ತೀಯೋ ಅವನು ಶಪಿಸಲ್ಪಟ್ಟವನೇ ಎಂದು ನಾನು ಬಲ್ಲೆನು.
ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಕಣಿ ಕೇಳುವದಕ್ಕಾಗಿ ತಮ್ಮ ಕೈಯಲ್ಲಿ ಕಾಣಿಕೆ ಗಳನ್ನು ತಕ್ಕೊಂಡು ಹೋದರು; ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು.
ಅವನು ಅವರಿಗೆ ಹೇಳಿದ್ದು–ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ; ಆಗ ಕರ್ತನು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು; ಆದ ಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳುಕೊಂಡರು.
ದೇವರು ಬಿಳಾಮನ ಬಳಿಗೆ ಬಂದು–ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು ಅಂದನು.
10 ಬಿಳಾ ಮನು ದೇವರಿಗೆ ಹೇಳಿದ್ದೇನಂದರೆ–ಚಿಪ್ಪೋರನ ಮಗನೂ ಮೋವಾಬಿನ ಅರಸನೂ ಬಾಲಾಕನು ನನ್ನ ಬಳಿಗೆ ಹೇಳಿಕಳುಹಿಸಿದ್ದೇನಂದರೆ–
11 ಇಗೋ, ಐಗುಪ್ತ ದೇಶದಿಂದ ಹೊರಟಿರುವ ಒಂದು ಜನಾಂಗವು ಭೂಮುಖವನ್ನು ಆವರಿಸಿಕೊಂಡಿದೆ; ಈಗ ನೀನು ಬಂದು ನನಗೋಸ್ಕರ ಅದನ್ನು ಶಪಿಸು; ಒಂದು ವೇಳೆ ಅದರ ಸಂಗಡ ಯುದ್ಧಮಾಡಿ ಅದನ್ನು ಹೊರಗೆ ಹಾಕುವದಕ್ಕೆ ನಾನು ಸಮರ್ಥನಾದೇನು ಎಂಬದು.
12 ಆಗ ದೇವರು ಬಿಳಾಮನಿಗೆ ಹೇಳಿದ್ದೇನಂದರೆನೀನು ಅವರ ಸಂಗಡ ಹೋಗಬೇಡ; ನೀನು ಆ ಜನವನ್ನು ಶಪಿಸಬೇಡ; ಅದು ಆಶೀರ್ವದಿಸಲ್ಪಟ್ಟಿದೆ.
13 ಆಗ ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ–ಕರ್ತನು ನಿಮ್ಮ ಸಂಗಡ ಹೋಗುವದಕ್ಕೆ ನನಗೆ ಅಪ್ಪಣೆ ಕೊಡುವದಿಲ್ಲ. ನೀವು ನಿಮ್ಮ ದೇಶಕ್ಕೆ ಹೋಗಿರಿ ಎಂದು ಹೇಳಲಾಗಿ,
14 ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು–ಬಿಳಾಮನು ನಮ್ಮ ಸಂಗಡ ಬರಲೊಲ್ಲನು ಅಂದರು.
15 ಆದರೆ ಬಾಲಾಕನು ತಿರಿಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಭುಗಳನ್ನು ಕಳುಹಿಸಿದನು.
16 ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಹೇಳಿ ದ್ದೇನಂದರೆ–ಚಿಪ್ಪೋರನ ಮಗನಾದ ಬಾಲಾಕನು ಹೀಗೆ ಹೇಳುತ್ತಾನೆ–ನೀನು ದಯಮಾಡಿ ನನ್ನ ಬಳಿಗೆ ಬರುವದಕ್ಕೆ ಯಾವದೂ ಅಡ್ಡಿಮಾಡಬಾರದು.
17 ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ನನಗೆ ಹೇಳುವದನ್ನೆಲ್ಲಾ ನಾನು ಮಾಡುವೆನು; ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು ಅಂದನು.
18 ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನ ಸೇವಕರಿಗೆ ಹೇಳಿದ್ದೇನಂದರೆ–ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಯನ್ನು ಬಂಗಾರವನ್ನು ಕೊಟ್ಟರೂ ನಾನು ನನ್ನ ದೇವರಾಗಿರುವ ಕರ್ತನ ಮಾತನ್ನು ವಿಾರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು.
19 ಆದರೆ ಈಗ ಕರ್ತನು ನನಗೆ ಮತ್ತೇನು ಹೇಳುವನೆಂದು ನಾನು ತಿಳುಕೊಳ್ಳುವ ಹಾಗೆ ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ ಅಂದನು.
20 ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ ಹೇಳಿದ್ದೇನಂದರೆ–ಈ ಮನುಷ್ಯರು ನಿನ್ನನ್ನು ಕರೆಯುವದಕ್ಕೆ ಬಂದಿದ್ದರೆ ನೀನು ಎದ್ದು ಅವರ ಸಂಗಡ ಹೋಗು; ಆದರೆ ನಾನು ನಿನಗೆ ಹೇಳುವ ಮಾತೇ ನೀನು ಆಡಬೇಕು ಅಂದನು.
21 ಬಿಳಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಯನ್ನು ಕಟ್ಟಿ ಮೋವಾಬಿನ ಪ್ರಭುಗಳ ಸಂಗಡ ಹೋದನು.

ಬಿಳಾಮನ ಕತ್ತೆ ಮತ್ತು ದೂತನು
22 
ಅವನು ಹೋದದರಿಂದ ದೇವರ ಕೋಪವು ಉರಿಯಿತು. ಕರ್ತನ ದೂತನು ಅವನಿಗೆ ಎದುರಾಳಿ ಯಾಗಿ ಮಾರ್ಗದಲ್ಲಿ ನಿಂತುಕೊಂಡನು; ಆದರೆ ಅವನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು; ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
23 ಕತ್ತೆಯು ಮಾರ್ಗದಲ್ಲಿ ನಿಂತಿದ್ದ ಕರ್ತನ ದೂತನನ್ನೂ ಅವನ ಕೈಯಲ್ಲಿರುವ ಬಿಚ್ಚು ಕತ್ತಿಯನ್ನೂ ನೋಡಿ ಮಾರ್ಗದಿಂದ ವಾರೆಯಾಗಿ ಹೊಲದೊಳಗೆ ಹೋಯಿತು; ಆಗ ಬಿಳಾಮನು ಕತ್ತೆಯನ್ನು ಮಾರ್ಗದೊಳಗೆ ತಿರುಗಿಸು ವದಕ್ಕೆ ಅದನ್ನು ಹೊಡೆದನು.
24 ಆದರೆ ಕರ್ತನ ದೂತನು ದ್ರಾಕ್ಷೇತೋಟಗಳ ಹಾದಿಯಲ್ಲಿ ಈಚೆ ಆಚೆ ಗೋಡೆ ಇದ್ದಲ್ಲಿ ನಿಂತನು.
25 ಕತ್ತೆಯು ಕರ್ತನ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡು ಬಿಳಾಮನ ಕಾಲನ್ನು ಗೋಡೆಗೆ ಒತ್ತಿ ಹಾಕಿತು; ಅವನು ಅದನ್ನು ಹೆಚ್ಚಾಗಿ ಹೊಡೆದನು.
26 ಆಗ ಕರ್ತನ ದೂತನು ಮುಂದೆ ಹೋಗಿ ಬಲಕ್ಕೂ ಎಡಕ್ಕೂ ತಿರುಗುವದಕ್ಕೆ ಮಾರ್ಗವಿಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ನಿಂತನು.
27 ಕತ್ತೆಯು ಕರ್ತನ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು; ಆದಕಾರಣ ಬಿಳಾಮನು ಕೋಪಿಸಿಕೊಂಡು ಕತ್ತೆಯನ್ನು ಬೆತ್ತದಿಂದ ಹೊಡೆದನು.
28 ಆಗ ಕರ್ತನು ಕತ್ತೆಯ ಬಾಯನ್ನು ತೆರೆದನು; ಅದು ಬಿಳಾಮನಿಗೆ–ಈಗ ನನ್ನನ್ನು ಮೂರುಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು ಎಂದು ಹೇಳಿತು.
29 ಬಿಳಾಮನು ಕತ್ತೆಗೆ–ನೀನು ನನಗೆ ಹಾಸ್ಯಮಾಡಿದಿಯಲ್ಲಾ? ನನ್ನ ಕೈಯಲ್ಲಿ ಕತ್ತಿ ಇದ್ದರೆ ನಾನು ಈಗಲೇ ನಿನ್ನನ್ನು ಕೊಂದುಹಾಕುತ್ತಿದ್ದೆ ಅಂದನು.
30 ಕತ್ತೆಯು ಬಿಳಾಮನಿಗೆ ಹೇಳಿದ್ದು–ನಾನು ನಿನ್ನದಾ ದಂದಿನಿಂದ ಈ ದಿವಸದ ವರೆಗೂ ನೀನು ಹತ್ತಿಕೊಂಡ ನಿನ್ನ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ಪ್ರಕಾರ ಮಾಡಿದೆನೋ ಅಂದಿತು. ಅದಕ್ಕ ವನು–ಇಲ್ಲ ಅಂದನು.
31 ಆಗ ಕರ್ತನು ಬಿಳಾಮನ ಕಣ್ಣುಗಳನ್ನು ತೆರೆದನು; ಅವನು ಮಾರ್ಗದಲ್ಲಿ ನಿಂತಿದ್ದ ಕರ್ತನ ದೂತನನ್ನೂ ಆತನ ಕೈಯಲ್ಲಿರುವ ಬಿಚ್ಚು ಕತ್ತಿಯನ್ನೂ ನೋಡಿ ಬೋರಲು ಬಿದ್ದನು.
32 ಕರ್ತನ ದೂತನು ಅವನಿಗೆ ಹೇಳಿದ್ದು–ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಯಾಕೆ? ಇಗೋ, ನಿನ್ನ ಮಾರ್ಗ ನನ್ನ ಮುಂದೆ ವಕ್ರವಾಗಿರುವದರಿಂದ ನಾನು ಎದುರಾಳಿ ಯಾಗಿ ಹೊರಟೆನು.
33 ಆ ಕತ್ತೆಯು ನನ್ನನ್ನು ನೋಡಿ ನನ್ನ ಮುಂದೆ ಈಗ ಮೂರು ಸಾರಿ ವಾರೆಯಾಗಿ ಹೋಯಿತು; ಅದು ನನ್ನ ಮುಂದೆ ವಾರೆಯಾಗಿ ಹೋಗದಿದ್ದರೆ ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದು ಹಾಕಿ ಅದನ್ನು ಪ್ರಾಣದಿಂದ ಉಳಿಸುತ್ತಿದ್ದೆನು ಅಂದನು.
34 ಆಗ ಬಿಳಾಮನು ಕರ್ತನ ದೂತನಿಗೆ ಹೇಳಿದ್ದುನಾನು ಪಾಪಮಾಡಿದ್ದೇನೆ; ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ; ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ ಅಂದನು.
35 ಆದರೆ ಕರ್ತನ ದೂತನು ಬಿಳಾಮನಿಗೆ–ಈ ಮನುಷ್ಯರ ಸಂಗಡ ಹೋಗು; ಹೋದರೂ ನಾನು ನಿನಗೆ ಹೇಳುವದನ್ನೇ ಹೇಳಬೇಕು ಅಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.

ದೂತರ ಮಿತಿ
2 ಪೇತ್ರನು 2
ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
10 ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ.
11 ದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಗೌರವವುಳ್ಳವರಿಗೆ ವಿರೋಧವಾಗಿ ನಿಂದೆಯನ್ನೂ ದೂಷಣೆಯನ್ನೂ ತರು ವದಿಲ್ಲ.
12 ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ
13 ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ.
14 ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.

ಪ್ರಕಟನೆ 22
1 ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.
ಅದರ ಬೀದಿಯ ಮಧ್ಯದಲ್ಲಿಯೂ ಆ ನದಿಯ ಉಭಯ ಪಾರ್ಶ್ವಗಳಲ್ಲಿಯೂ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಇದ್ದವು.
ಇನ್ನು ಮೇಲೆ ಶಾಪವೇನೂ ಇರುವದಿಲ್ಲ; ಅದರಲ್ಲಿ ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನವಿರುವದು. ಆತನ ಸೇವಕರು ಆತನನ್ನು ಸೇವಿಸುವರು.
ಅವರು ಆತನ ಮುಖವನ್ನು ನೋಡುವರು; ಅವರ ಹಣೆಗಳ ಮೇಲೆ ಆತನ ಹೆಸರು ಇರುವದು.
ಅಲ್ಲಿ ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪವಾಗಲಿ ಸೂರ್ಯನ ಬೆಳಕಾಗಲಿ ಬೇಕಾಗಿರುವ ದಿಲ್ಲ; ಯಾಕಂದರೆ ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು. ಅವರು ಯುಗಯುಗಾಂತರ ಗಳಲ್ಲಿಯೂ ಆಳುವರು.
ಆಮೇಲೆ ಅವನು ನನಗೆ–ಈ ಮಾತುಗಳು ನಂಬತಕ್ಕದ್ದೂ ಸತ್ಯವಾದದ್ದೂ ಆಗಿವೆ; ಪರಿಶುದ್ಧ ಪ್ರವಾದಿಗಳ ದೇವರಾದ ಕರ್ತನು ಬೇಗನೆ ಸಂಭವಿಸ ತಕ್ಕವುಗಳನ್ನು ತನ್ನ ಸೇವಕರಿಗೆ ತೋರಿಸುವದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು.
ಇಗೋ, ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಗಳನ್ನು ಕಾಪಾಡುವವನು ಧನ್ಯನು ಎಂದು ಹೇಳಿದನು.
ಯೋಹಾನನೆಂಬ ನಾನೇ ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ವಿಷಯಗಳನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
ಆಗ ಅವನು ನನಗೆ–ಇದನ್ನು ಮಾಡಬೇಡ ನೋಡು; ಯಾಕಂದರೆ ನಾನು ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕ ದಲ್ಲಿ ಹೇಳಿರುವವುಗಳನ್ನು ಕೈಕೊಂಡು ನಡೆಯುವವ ರಿಗೂ ಜೊತೆಯ ಸೇವಕನಾಗಿದ್ದೇನೆ; ದೇವರನ್ನು ಆರಾಧಿಸು ಎಂದು ನನಗೆ ಹೇಳಿದನು.
10 ಇದಲ್ಲದೆ ಅವನು ನನಗೆ–ಈ ಪುಸ್ತಕದಲ್ಲಿರುವ ಪ್ರವಾದನೆಯ ಹೇಳಿಕೆಗಳಿಗೆ ಮುದ್ರೆಹಾಕಬೇಡ; ಯಾಕಂದರೆ ಸಮಯವು ಸವಿಾಪವಾಗಿದೆ.
11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ಇನ್ನೂ ತನ್ನನ್ನು ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿವಂತ ನಾಗಲಿ; ಪವಿತ್ರನು ತಾನು ಇನ್ನೂ ಪವಿತ್ರನಾಗಿರಲಿ;

ನ್ಯಾಯಸ್ಥಾಪಕರು 6
11 ಕರ್ತನ ದೂತನು ಬಂದು ಅಬೀಯೆಜೆರನಾದ ಯೋವಾಷನು ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗ ನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷೇ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.
12 ಆಗ ಕರ್ತನ ದೂತನು ಅವ ನಿಗೆ ಪ್ರತ್ಯಕ್ಷನಾಗಿ ಅವನಿಗೆ–ಬಲಿಷ್ಠನಾದ ಪರಾಕ್ರಮ ಶಾಲಿಯೇ, ಕರ್ತನು ನಿನ್ನ ಸಂಗಡ ಇದ್ದಾನೆ ಅಂದನು.
13 ಆಗ ಗಿದ್ಯೋನನು ಅವನಿಗೆ–ನನ್ನ ಕರ್ತನೇ, ಕರ್ತನು ನಮ್ಮ ಸಂಗಡ ಇದ್ದರೆ ಇದೆಲ್ಲಾ ನಮಗೆ ಸಂಭವಿಸಿದ್ದೇನು? ಕರ್ತನು ನಮ್ಮನ್ನು ಐಗುಪ್ತದಿಂದ ಬರಮಾಡಲಿಲ್ಲವೋ ಎಂದು ನಮ್ಮ ತಂದೆಗಳು ನಮಗೆ ವಿವರಿಸಿ ಹೇಳಿದ ಆತನ ಅದ್ಭುತಗಳೆಲ್ಲಾ ಎಲ್ಲಿ? ಈಗ ಕರ್ತನು ನಮ್ಮನ್ನು ಕೈಬಿಟ್ಟು ಮಿದ್ಯಾನ್ಯರ ಕೈಗೆ ಒಪ್ಪಿಸಿ ದ್ದಾನೆ ಅಂದನು.
14 ಕರ್ತನು ಅವನನ್ನು ದೃಷ್ಟಿಸಿ ನೋಡಿ–ಈ ನಿನ್ನ ಶಕ್ತಿಯಿಂದ ಹೋಗು; ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿ ಸುವಿ; ನಾನು ನಿನ್ನನ್ನು ಕಳುಹಿಸಲಿಲ್ಲವೋ ಅಂದನು.
15 ಅದಕ್ಕವನು ಆತನಿಗೆ–ನನ್ನ ಕರ್ತನೇ, ನಾನು ಇಸ್ರಾಯೇಲನ್ನು ಹೇಗೆ ರಕ್ಷಿಸಲಿ? ಮನಸ್ಸೆಯಲ್ಲಿ ನನ್ನ ಕುಟುಂಬವು ಬಡತನದ್ದು; ನನ್ನ ತಂದೆಯ ಮನೆಯಲ್ಲಿ ನಾನು ಅಲ್ಪನು ಅಂದನು.
16 ಆದರೆ ಕರ್ತನು ಅವ ನಿಗೆ–ನಾನು ನಿನ್ನ ಸಂಗಡ ಖಂಡಿತವಾಗಿ ಇರುವ ದರಿಂದ ನೀನು ಮಿದ್ಯಾನ್ಯರನ್ನು ಒಬ್ಬ ಮನುಷ್ಯನೋ ಎಂಬಂತೆ ಹೊಡೆಯುವಿ ಅಂದನು.
17 ಅದಕ್ಕವನುಈಗ ನಿನ್ನ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ ನನ್ನ ಸಂಗಡ ಮಾತಾಡುವಾತನು ನೀನೇ ಎಂಬದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು.
18 ನಾನು ನಿನ್ನ ಬಳಿಗೆ ನನ್ನ ಕಾಣಿಕೆಯನ್ನು ತಂದು ನಿನ್ನ ಮುಂದೆ ಇಡುವ ವರೆಗೆ ನೀನು ಈ ಸ್ಥಳವನ್ನು ಬಿಟ್ಟುಹೋಗ ಬಾರದು ಎಂದು ಬೇಡಿಕೊಂಡನು. ಅದಕ್ಕೆ ಆತನುನೀನು ತಿರುಗಿ ಬರುವತನಕ ನಾನು ಕಾದಿರುವೆನು ಅಂದನು.
19 ಆಗ ಗಿದ್ಯೋನನು ಒಳಗೆ ಹೋಗಿ ಒಂದು ಮೇಕೆಯ ಮರಿಯನ್ನೂ ಒಂದು ಏಫಾದ ಹಿಟ್ಟಿನಲ್ಲಿ ಹುಳಿ ಇಲ್ಲದ ರೊಟ್ಟಿಯನ್ನೂ ಸಿದ್ಧಮಾಡಿ ಮಾಂಸವನ್ನು ಪುಟ್ಟಿಯಲ್ಲಿ ಇಟ್ಟು ರಸವನ್ನು ಪಾತ್ರೆಯಲ್ಲಿ ಹೊಯಿದು ಅದನ್ನು ಹೊರಗೆ ಮರದ ಕೆಳಗೆ ಇದ್ದ ಆತನ ಬಳಿ ಯಲ್ಲಿ ತಂದಿಟ್ಟನು.
20 ದೇವದೂತನು ಅವನಿಗೆನೀನು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ತೆಗೆದುಕೊಂಡು ಈ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ ಅಂದನು. ಅವನು ಹಾಗೆಯೇ ಮಾಡಿದನು.
21 ಆಗ ಕರ್ತನ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆ ಯಿಂದ ಎದ್ದು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿ ಗಳನ್ನೂ ದಹಿಸಿಬಿಟ್ಟಿತು. ಆಗ ಕರ್ತನ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.
22 ಅವನು ಕರ್ತನ ದೂತನೆಂದು ಗಿದ್ಯೋನನು ತಿಳಿದಾಗ ಗಿದ್ಯೋ ನನು–ಅಯ್ಯೋ! ಓ ಕರ್ತನಾದ ದೇವರೇ, ನಾನು ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿ ದೆನು ಅಂದನು.
23 ಆದರೆ ಕರ್ತನು ಅವನಿಗೆ–ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವದಿಲ್ಲ ಅಂದನು.
24 ಗಿದ್ಯೋನನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿ ಯೆಹೋವ ಷಾಲೋಮ್‌ ಎಂದು ಅದಕ್ಕೆ ಹೆಸರಿಟ್ಟನು. ಅದು ಈ ವರೆಗೂ ಅಬೀಯೆಜೆರಿಯರ ಒಫ್ರದಲ್ಲಿ ಇನ್ನೂ ಇದೆ.
25 ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ–ನೀನು ನಿನ್ನ ತಂದೆಗಿರುವ ಎತ್ತುಗಳಲ್ಲಿ ಎಳೇದಾದ ಏಳು ವರುಷದ ಎರಡನೇ ಹೋರಿಯನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಗೆ ಇರುವ ಬಾಳನ ಬಲಿಪೀಠವನ್ನು ಕೆಡವಿ ಅದರ ಸವಿಾಪದಲ್ಲಿರುವ ತೋಪನ್ನು ಕಡಿದು ಹಾಕಿ
26 ಈ ಪರ್ವತದ ತುದಿಯಲ್ಲಿ ನೇಮಕವಾದ ಸ್ಥಳದಲ್ಲಿ ನಿನ್ನ ದೇವರಾದ ಕರ್ತನಿಗೆ ಬಲಿಪೀಠವನ್ನು ಕಟ್ಟಿ ಆ ಎರಡನೇ ಹೋರಿಯನ್ನು ತಂದು ಅದನ್ನು ನೀನು ಕಡಿದುಹಾಕಿದ ತೋಪಿನ ಕಟ್ಟಿಗೆಗಳ ಮೇಲೆ ದಹನಬಲಿಯಾಗಿ ಅರ್ಪಿಸು ಅಂದನು.
27 ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ತೆಗೆದುಕೊಂಡು ಕರ್ತನು ತನಗೆ ಹೇಳಿದ ಹಾಗೆಯೇ ಮಾಡಿದನು. ಆದರೆ ಹಗಲಲ್ಲಿ ಮಾಡದ ಹಾಗೆ ಅವನು ತನ್ನ ತಂದೆಯ ಮನೆಯವರಿಗೂ ಆ ಊರಿನ ಮನುಷ್ಯರಿಗೂ ಭಯಪಟ್ಟಿದ್ದರಿಂದ ರಾತ್ರಿಯಲ್ಲಿ ಮಾಡಿ ದನು.

ನಾವು ಪುನರುತ್ಥಾನದಲ್ಲಿ ದೂತರಂತೆ ಇರುತ್ತೇವೆ
ಮತ್ತಾಯನು 22

28 ಆದದರಿಂದ ಪುನರುತ್ಥಾನದಲ್ಲಿ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿ ಯಾಗಿರುವಳು? ಯಾಕಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡಿದ್ದರಲ್ಲಾ ಎಂದು ಕೇಳಿದರು.
29 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ–ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
30 ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.
31 ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ–
32 ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
33 ಜನ ಸಮೂಹದವರು ಇದನ್ನು ಕೇಳಿ ಆತನ ಬೋಧನೆಗೆ ವಿಸ್ಮಯಗೊಂಡರು.

1 ಕೊರಿಂಥದವರಿಗೆ 15
35 ಆದರೆ ಒಬ್ಬನು–ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು.
36 ಮೂಢನು ನೀನು; ನೀನು ಬಿತ್ತಿರುವದು ಸಾಯದ ಹೊರತು ಜೀವಿತವಾಗು ವದಿಲ್ಲ.
37 ಒಂದು ವೇಳೆ ಗೋಧಿಯನ್ನಾಗಲಿ ಬೇರೆ ಯಾವದೋ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವದಿಲ್ಲ.
38 ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ.
39 ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯರ ಶರೀರ ಬೇರೆ, ಪಶುಗಳ ಶರೀರ ಬೇರೆ, ವಿಾನುಗಳದು ಬೇರೆ, ಪಕ್ಷಿಗಳದು ಬೇರೆ.
40 ಇದಲ್ಲದೆ ಆಕಾಶದ ದೇಹಗಳು ಮತ್ತು ಭೂಮಂಡಲದ ದೇಹಗಳು ಇವೆ;ಆದರೆ ಆಕಾಶದ ಮಹಿಮೆ ಒಂದು ವಿಧ ಮತ್ತು ಭೂಮಂಡಲದ ಮಹಿಮೆ ಮತ್ತೊಂದು ವಿಧ.
41 ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ.
42 ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರ ವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡು ತ್ತದೆ. ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
43 ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎಬ್ಬಿಸಲ್ಪಡುತ್ತದೆ; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
44 ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎಬ್ಬಿಸಲ್ಪಡುತ್ತದೆ; ಪ್ರಾಕೃತದೇಹವಿರುವದಾದರೆ ಆತ್ಮಿಕ ದೇಹವೂ ಇರುವದು.
45 ಬರೆದಿರುವ ಪ್ರಕಾರ– ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು; ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ.
46 ಹೇಗಿದ್ದರೂ ಆತ್ಮಿಕವಾದದ್ದು ಮೊದಲ ನೆಯದಲ್ಲ, ಪ್ರಾಕೃತವಾದದ್ದು ಮೊದಲನೆಯದು; ಆಮೇಲೆ ಆತ್ಮಿಕವಾದದ್ದು.
47 ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
48 ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
49 ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾ ತನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು.
50 ಸಹೋದರರೇ, ನಾನು ಹೇಳುವದೇನಂದರೆ– ಮಾಂಸವು ರಕ್ತವು ದೇವರ ರಾಜ್ಯಕ್ಕೆ ಬಾಧ್ಯವಾಗ ಲಾರವು; ಇಲ್ಲವೆ ಲಯವಾಗುವದು ನಿರ್ಲಯತ್ವಕ್ಕೆ ಬಾಧ್ಯವಾಗುವದಿಲ್ಲ.
51 ಇಗೋ, ಮರ್ಮವಾಗಿದ್ದ ಒಂದು ಸಂಗತಿಯನ್ನು ನಿಮಗೆ ತಿಳಿಸುತ್ತೇನೆ– ನಾವೆಲ್ಲರೂ ನಿದ್ರೆಹೋಗುವದಿಲ್ಲ, ಆದರೆ ನಾವೆ ಲ್ಲರೂ ಮಾರ್ಪಡುವೆವು.
52 ಕಡೇ ತುತೂರಿಯು ಧ್ವನಿಯಾಗುವಾಗ ನಾವು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.
53 ಲಯ ವಾಗುವಂಥದ್ದು (ಈ ದೇಹವು) ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವಂಥ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ.
54 ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ–ಜಯವು ಮರಣವನ್ನು ನುಂಗಿತು ಎಂಬದೇ.

ಲೂಕನು 20
35 ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ.
36 ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ.

ಯಾಜಕನನ್ನು ಮೂಕನನ್ನಾಗಿ ಮಾಡುವ ದೂತನು
ಲೂಕನು 1

ಯೂದಾಯದ ಅರಸನಾದ ಹೆರೋದನ ದಿನ ಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರಿಯನೆಂದು ಹೆಸರಿದ್ದ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ಕುಮಾರ್ತೆಯರಿಗೆ ಸಂಬಂಧಪಟ್ಟವಳು. ಆಕೆಯ ಹೆಸರು ಎಲಿಸಬೇತ್‌.
ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.
ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕ ಳಿರಲಿಲ್ಲ; ಅವರಿಬ್ಬರೂ ಬಹಳ ಪ್ರಾಯಹೋದವರಾ ಗಿದ್ದರು.
ಹೀಗಿರಲಾಗಿ ಅವನು ತನ್ನ ವರ್ಗದ ಸರತಿಯ ಮೇರೆಗೆ ದೇವರ ಮುಂದೆ ಯಾಜಕನ ಉದ್ಯೋಗವನ್ನು ಮಾಡುತ್ತಿದ್ದಾಗ
ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.
10 ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.
11 ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.
12 ಜಕರೀ ಯನು ಅವನನ್ನು ನೋಡಿ ಕಳವಳದಿಂದ ಭಯಹಿಡಿ ದವನಾದನು.
13 ಆದರೆ ಆ ದೂತನು ಅವನಿಗೆ–ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.
14 ನಿನಗೆ ಆನಂದವೂ ಉಲ್ಲಾಸವೂ ಆಗುವದು; ಅನೇಕರು ಅವನ ಜನನದಲ್ಲಿ ಆನಂದಿಸುವರು.
15 ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.
16 ಅವನು ಇಸ್ರಾ ಯೇಲಿನ ಮಕ್ಕಳಲ್ಲಿ ಅನೇಕರನ್ನು ಅವರ ದೇವರಾದ ಕರ್ತನ ಕಡೆಗೆ ತಿರುಗಿಸುವನು.
17 ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.
18 ಆಗ ಜಕರೀಯನು ಆ ದೂತನಿಗೆ–ಇದನ್ನು ನಾನು ಯಾವದರಿಂದ ತಿಳು ಕೊಳ್ಳಲಿ? ಯಾಕಂದರೆ ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯಗತಿಸಿದವಳು ಅಂದನು.
19 ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ–ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.
20 ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.
21 ಆಗ ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದಲ್ಲಿ ಬಹಳ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
22 ಅವನು ಹೊರಗೆ ಬಂದಾಗ ಅವರೊಂದಿಗೆ ಮಾತನಾಡಲಾರದೆ ಇದ್ದನು; ಅದಕ್ಕ ವರು ಅವನು ದೇವಾಲಯದಲ್ಲಿ ಒಂದು ದರ್ಶನವನ್ನು ಕಂಡನೆಂದು ಗ್ರಹಿಸಿದರು; ಯಾಕಂದರೆ ಅವನು ಅವರಿಗೆ ಸನ್ನೆ ಮಾಡುತ್ತಾ ಮಾತಿಲ್ಲದವನಾಗಿದ್ದನು.
23 ಇದಾದ ಮೇಲೆ ತನ್ನ ಸೇವೆಯ ದಿನಗಳು ಮುಗಿದ ಕೂಡಲೆ ಅವನು ತನ್ನ ಸ್ವಂತ ಮನೆಗೆ ಹೊರಟು ಹೋದನು.
24 ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಗರ್ಭಿಣಿಯಾಗಿ ಐದು ತಿಂಗಳು ತನ್ನನ್ನು ಮರೆಮಾಡಿಕೊಂಡು–
25 ಜನರಲ್ಲಿ ನನಗಿದ್ದ ಅವ ಮಾನವನ್ನು ತೆಗೆದುಹಾಕುವದಕ್ಕಾಗಿ ಕರ್ತನು ನನ್ನ ಮೇಲೆ ದೃಷ್ಟಿಯಿಟ್ಟ ದಿನಗಳಲ್ಲಿ ನನಗೆ ಹೀಗೆ ಮಾಡಿದನು ಎಂದು ಹೇಳಿದಳು.

ಯೆಹೆಜ್ಕೇಲನು ಕಂಡ ದೇವರ ದರ್ಶನಗಳು
ಯೆಹೆಜ್ಕೇಲನು 1

1 ನಾನು ಸೆರೆಯವರ ಜೊತೆ ಕೆಬಾರ್‌ ನದಿಯ ಬಳಿಯಲ್ಲಿರುವಾಗ ಮೂವತ್ತ ನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆದದ್ದೇನಂದರೆ, ಆಕಾಶಗಳು ತೆರೆಯಲ್ಪ ಟ್ಟವು; ನಾನು ದೇವರ ದರ್ಶನಗಳನ್ನು ಕಂಡೆನು.
ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಖೀನನ ಸೆರೆಯ ಐದನೆಯ ವರುಷದಲಿ
ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್‌ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.
ನಾನು ನೋಡಲಾಗಿ ಇಗೋ, ಉತ್ತರದಿಂದ ಸುಳಿಗಾಳಿ ಬಂದಿತು. ಒಂದು ಮಹಾ ಮೇಘವೂ ಝಗಝಗಿಸುವ ಬೆಂಕಿಯೂ ಅದರ ಸುತ್ತಲು ಪ್ರಕಾಶವೂ ಇತ್ತು; ಬೆಂಕಿಯ ಮಧ್ಯದಲ್ಲಿ ಥಳಥಳಿಸುವಂಥದ್ದು ಹೊಂಬಣ್ಣದ ಹಾಗಿತ್ತು.
ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರ ಟಿತು. ಅವುಗಳ ಆಕಾರವೇನಂದರೆ–ಅವುಗಳಿಗೆ ಮನುಷ್ಯನ ರೂಪವಿತ್ತು.
ಪ್ರತಿಯೊಂದಕ್ಕೂ ನಾಲ್ಕು ಮುಖಗಳು ನಾಲ್ಕು ರೆಕ್ಕೆಗಳು ಇದ್ದವು.
ಅವುಗಳ ಕಾಲುಗಳು ನೆಟ್ಟಗಿದ್ದವು; ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು ಹಿತ್ತಾಳೆಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.
ಅವುಗಳಿಗೆ ರೆಕ್ಕೆಗಳ ಕೆಳಗೆ ಅವುಗಳ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು; ಮತ್ತು ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು.
ಅವುಗಳ ರೆಕ್ಕೆಗಳು ಒಂದಕ್ಕೊಂದು ಜೋಡಿಸಲ್ಪಟ್ಟು ಅವು ಹೋಗುವಾಗ ತಿರುಗಿಕೊಳ್ಳದೆ ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು.
10 ಅವು ಗಳ ಮುಖಗಳ ರೂಪದ ಪ್ರಕಾರ ಅವು ನಾಲ್ಕು ಜೀವಿಗಳು ಮನುಷ್ಯನ ರೂಪದ ಮುಖವನ್ನು ಹೊಂದಿದ್ದವು; ಬಲಗಡೆಯಲ್ಲಿ ಸಿಂಹದ ಮುಖವೂ ಎಡಗಡೆ ಯಲ್ಲಿ ಎತ್ತಿನ ಮುಖವೂ ಆ ನಾಲ್ಕಕ್ಕೆ ಹದ್ದಿನ ಮುಖವೂ ಇತ್ತು.
11 ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು.
12 ಅವು ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು; ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಹೋದವು; ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.
13 ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
14 ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು.
15 ಆಗ ನಾನು ಆ ಜೀವಿಗಳನ್ನು ನೋಡಲಾಗಿ ಇಗೋ, ಜೀವಿಗಳಿಂದ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖಗಳುಳ್ಳದ್ದಾಗಿ ರುವದನ್ನು ನೋಡಿದೆನು.
16 ಆ ಚಕ್ರಗಳ ಆಕಾರವೂ ಅವುಗಳ ಕೆಲಸವೂ ಪೀತರತ್ನ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ರೂಪವಿದ್ದು ಅವುಗಳ ಆಕಾರವೂ ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು.
17 ಅವು ಹೋಗುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು, ಅವು ಹೋಗುವಾಗ ಹಿಂತಿರುಗಲಿಲ್ಲ.
18 ಅವುಗಳ ಚಕ್ರಗಳು ಎತ್ತರವಾ ಗಿಯೂ ಭಯಂಕರ ವಾಗಿಯೂ ಇದ್ದವು; ಆ ನಾಲ್ಕು ಚಕ್ರಗಳ ಸುತ್ತಲೂ ಕಣ್ಣುಗಳಿದ್ದವು.
19 ಆ ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಮೇಲಕ್ಕೆ ಎತ್ತಲ್ಪಟ್ಟವು.
20 ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಅವುಗಳು ಹೋದವು; ಆ ಸ್ಥಳಕ್ಕೆ ಅವುಗಳ ಆತ್ಮವು ಹೋಗಬೇಕೆಂದಿತ್ತು; ಚಕ್ರಗಳು ಸಹ ಅವುಗಳಿಗೆದು ರಾಗಿ ಮೇಲಕ್ಕೆ ಎತ್ತಲ್ಪ ಟ್ಟವು; ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು.
21 ಅವುಗಳು ಹೋಗುವಾಗ ಇವುಗಳೂ ಹೋದವು; ಅವುಗಳು ನಿಲ್ಲುವಾಗ ಇವುಗಳೂ ನಿಂತವು; ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಅವುಗಳ ಸಂಗಡ ಎತ್ತಲ್ಪಟ್ಟವು; ಆ ಜೀವಿಯ ಆತ್ಮನು ಆ ಚಕ್ರಗಳಲ್ಲಿ ಇತ್ತು.
22 ಜೀವಿಯ ತಲೆಗಳ ಮೇಲೆ ಗಗನಮಂಡಲ ವಿಶಾಲ ರೂಪವು ಭೀಕರ ವಜ್ರದ ಬಣ್ಣದ್ದಾಗಿತ್ತು; ಅದು ಅವುಗಳ ತಲೆಗಳ ಮೇಲೆ ಹರ ಡಿತ್ತು (ಹಾಸಲ್ಪಟ್ಟಿತ್ತು).
23 ಆ ಗಗನಮಂಡಲದ (ರೂಪದ) ಕೆಳಗೆ ಅವುಗಳ ರೆಕ್ಕೆಗಳು ನೆಟ್ಟಗೆ (ನೇರ ವಾಗಿ) ಒಂದಕ್ಕೊಂದು ಸರಿಯಾಗಿದ್ದವು; ಅವುಗಳ ಶರೀರಗಳನ್ನು ಮುಚ್ಚಿಕೊಳ್ಳುವ ಎರಡೆರೆಡು ರೆಕ್ಕೆಗಳು ಎರಡು ಕಡೆಗಳಲ್ಲೂ ಇರುವ ಪ್ರತಿಯೊಂದನ್ನು ಮುಚ್ಚಿ ಕೊಂಡಿದ್ದವು.
24 ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.
25 ಅವುಗಳು ನಿಂತು ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ ಅವುಗಳ ತಲೆಗಳ ಮೇಲಿರುವ ಗಗನಮಂಡಲದೊಳಗಿಂದ ಒಂದು ಶಬ್ದವಾಯಿತು.
26 ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.
27 ಆತನ ನಡುವು ಕಾಣಿಸುವಂತೆ ಮೇಲೆಯೂ ಒಳಗೂ ಸುತ್ತಲೂ ಬೆಂಕಿಯಂತೆ ಇರುವ ಸುಂದರವಾದ ಒಂದು ಬಣ್ಣದ ರೂಪವು ಇರುವದನ್ನು ನಾನು ನೋಡಿದೆನು; ಆತನ ನಡುವು ಕಾಣಿಸುವಂತೆ ಕೆಳಗೆ ಬೆಂಕಿಯ ಹಾಗೆ ಅದರ ಸುತ್ತಲೂ ಪ್ರಕಾಶವಿರುವದನ್ನು ನೋಡಿದೆನು.
28 ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

ಪ್ರಕಟನೆ 4
ಕೂಡಲೆ ನಾನು ಆತ್ಮವಶ ನಾದೆನು; ಆಗ ಇಗೋ, ಪರಲೋಕದಲ್ಲಿ ಒಂದು ಸಿಂಹಾಸನವಿತ್ತು; ಸಿಂಹಾಸನದ ಮೇಲೆ ಒಬ್ಬಾತನು ಕೂತಿದ್ದನು.
ಕೂತಿದ್ದಾತನು ಸೂರ್ಯಕಾಂತ ಪದ್ಮರಾಗ ಕಲ್ಲುಗಳಂತೆ ಕಾಣುತ್ತಿದ್ದನು; ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆ ಬಿಲ್ಲು ಇತ್ತು.
ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಆಸನಗಳಿದ್ದವು; ಆ ಆಸನಗಳ ಮೇಲೆ ಬಿಳೀ ವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ತು ನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟ ಗಳಿದ್ದವು.
ಸಿಂಹಾಸನದೊಳಗಿಂದ ಮಿಂಚುಗಳೂ ಗುಡುಗುಗಳೂ ಶಬ್ದಗಳೂ ಹೊರಟವು; ಅದರ ಮುಂದೆ ದೇವರ ಏಳು ಆತ್ಮಗಳಾಗಿರುವ ಏಳು ಬೆಂಕಿಯ ದೀಪಗಳು ಉರಿಯುತ್ತಿದ್ದವು.
ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಇತ್ತು. ಸಿಂಹಾಸನದ ಮಧ್ಯದಲ್ಲಿ ಮತ್ತು ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು; ಅವುಗಳಿಗೆ ಹಿಂದೆ ಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
ಮೊದಲನೆಯ ಜೀವಿಯು, ಸಿಂಹದಂತಿತ್ತು, ಎರಡ ನೆಯ ಜೀವಿಯು ಹೋರಿಯಂತಿತ್ತು; ಮೂರನೆಯ ಜೀವಿಯ ಮುಖವು ಮನುಷ್ಯರ ಮುಖದಂತಿತ್ತು; ನಾಲ್ಕನೆಯ ಜೀವಿಯು ಹಾರುವ ಗರುಡ ಪಕ್ಷಿಯಂತಿತ್ತು.
ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಅವುಗಳಿಗೆ ತುಂಬಾ ಕಣ್ಣುಗಳಿದ್ದವು; ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ– ಇದ್ದಾತನು ಇರುವಾತನೂ ಬರುವಾತನೂ ಸರ್ವಶಕ್ತ ನಾಗಿರುವ ದೇವರಾದ ಕರ್ತನು ಪರಿಶುದ್ಧನು ಪರಿ ಶುದ್ಧನು ಪರಿಶುದ್ಧನು ಎಂದು ಹೇ

ನಾವು ದುರ್ಬಲರಾಗಿರುವಾಗ ದೂತರ ಸೇವೆ
1 ಅರಸುಗಳು 19

1 ಎಲೀಯನು ಮಾಡಿದ್ದೆಲ್ಲವನ್ನೂ ಅವನು ಕತ್ತಿಯಿಂದ ಎಲ್ಲಾ ಪ್ರವಾದಿಗಳನ್ನು ಕೊಂದುಹಾಕಿದ್ದೆಲ್ಲವನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದಾಗ,
ಈಜೆಬೆಲಳು ಎಲೀಯನ ಬಳಿಗೆ ದೂತ ನನ್ನು ಕಳುಹಿಸಿ–ನಾನು ನಾಳೆ ಇಷ್ಟು ಹೊತ್ತಿಗೆ ಅವ ರಲ್ಲಿರುವ ಒಬ್ಬೊಬ್ಬನ ಪ್ರಾಣದ ಹಾಗೆ ನಿನ್ನ ಪ್ರಾಣಕ್ಕೂ ಮಾಡದೆ ಹೋದರೆ ದೇವರುಗಳು ನನಗೆ ಹೀಗೆಯೂ ಹೆಚ್ಚಾಗಿಯೂ ಮಾಡಲಿ ಎಂದು ಹೇಳಿದಳು.
ಅವನು ಅದನ್ನು ಕೇಳಿ ಎದ್ದು ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ ಅಲ್ಲಿ ತನ್ನ ಸೇವಕನನ್ನು ಬಿಟ್ಟನು.
ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್‌ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು–ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.
ಅವನು ಷಿಟ್ಟೀಮ್‌ ಮರದ ಕೆಳಗೆ ಮಲಗಿಕೊಂಡು ನಿದ್ರೆಮಾಡುತ್ತಿರುವಾಗ ಇಗೋ, ಒಬ್ಬ ದೂತನು ಅವನನ್ನು ತಟ್ಟಿ ಅವನಿಗೆಎದ್ದು ತಿನ್ನು ಅಂದನು.
ಅವನು ಎದ್ದು ನೋಡಿದಾಗ ಇಗೋ, ಕೆಂಡದಲ್ಲಿ ಸುಡಲ್ಪಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಕಡೆಗೆ ಇತ್ತು. ಆಗ ಅವನು ತಿಂದು ಕುಡಿದು ತಿರಿಗಿ ಮಲಗಿಕೊಂಡನು.
ತಿರಿಗಿ ಎರಡನೆಯ ಸಾರಿ ಕರ್ತನ ದೂತನು ಬಂದು ಅವನನ್ನು ತಟ್ಟಿ ಅವನಿಗೆ–ನೀನೆದ್ದು ತಿನ್ನು; ಯಾಕಂದರೆ ಪ್ರಯಾಣವು ನಿನಗೆ ಹೆಚ್ಚಾಗಿದೆ ಅಂದನು.
ಆಗ ಅವನೆದ್ದು ತಿಂದು ಕುಡಿದು ಆ ಭೋಜನದ ಶಕ್ತಿ ಯಿಂದ ನಾಲ್ವತ್ತು ದಿವಸ ಹಗಲೂ ರಾತ್ರಿ ಪ್ರಯಾಣ ಮಾಡಿ ಹೋರೇಬ ಎಂಬ ದೇವರ ಬೆಟ್ಟದ ವರೆಗೂ ನಡೆದನು.
ಅವನು ಅಲ್ಲಿರುವ ಒಂದು ಗವಿಗೆ ಬಂದು ಅಲ್ಲಿ ವಾಸಿಸಿದನು. ಆಗ ಇಗೋ, ಅವನಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ–ಎಲೀಯನೇ, ಇಲ್ಲಿ ಏನು ಮಾಡುತ್ತಿ ಅಂದನು.

ಲೂಕನು 22
39 ತರುವಾಯ ಆತನು ಹೊರಗೆ ಬಂದು ತನ್ನ ವಾಡಿಕೆಯಂತೆ ಎಣ್ಣೇಮರಗಳ ಗುಡ್ಡಕ್ಕೆ ಹೋದನು. ಆತನ ಶಿಷ್ಯರೂ ಆತನನ್ನು ಹಿಂಬಾಲಿಸಿದರು.
40 ಆತನು ಆ ಸ್ಥಳದಲ್ಲಿದ್ದಾಗ ಅವರಿಗೆ–ನೀವು ಶೋಧನೆಗೆ ಒಳ ಗಾಗದಂತೆ ಪ್ರಾರ್ಥಿಸಿರಿ ಅಂದನು.
41 ಆತನು ಅವ ರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣ ಕಾಲೂರಿ–
42 ತಂದೆಯೇ, ನಿನ್ನ ಚಿತ್ತವಿದ್ದರೆ ಈ ಪಾತ್ರೆ ಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ಆದರೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸಿ ದನು.
43 ಆಗ ಪರಲೋಕದಿಂದ ಒಬ್ಬ ದೂತನು ಆತನಿಗೆ ಪ್ರತ್ಯಕ್ಷನಾಗಿ ಆತನನ್ನು ಬಲಪಡಿಸುತ್ತಾ ಇದ್ದನು.
44 ಆತನು ವೇದನೆಯಲ್ಲಿದ್ದು ಬಹಳ ಆಸಕ್ತಿ ಯಿಂದ ಪ್ರಾರ್ಥಿಸಿದನು. ಆತನ ಬೆವರು ನೆಲಕ್ಕೆ ಬೀಳುತ್ತಿರುವ ದೊಡ್ಡ ರಕ್ತದ ಹನಿಗಳೋಪಾದಿಯಲ್ಲಿತ್ತು.
45 ಆತನು ಪ್ರಾರ್ಥನೆ ಮಾಡಿ ಎದ್ದಮೇಲೆ ತನ್ನ ಶಿಷ್ಯರ ಕಡೆಗೆ ಬಂದು ಅವರು ದುಃಖದ ನಿಮಿತ್ತವಾಗಿ ನಿದ್ರೆ ಮಾಡುತ್ತಿರುವದನ್ನು ಕಂಡು ಅವರಿಗೆ–
46 ನೀವು ನಿದ್ರೆ ಮಾಡುವದು ಯಾಕೆ? ಶೋಧನೆಗೆ ಒಳಗಾಗ ದಂತೆ ಎದ್ದು ಪ್ರಾರ್ಥಿಸಿರಿ ಅಂದನು.

ಮತ್ತಾಯನು 4
1 ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು.
ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು.
ಆಗ ಆ ಶೋಧಕನು ಆತನ ಬಳಿಗೆ ಬಂದು–ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು.
ಆದರೆ ಆತನು ಪ್ರತ್ಯುತ್ತರವಾಗಿ–ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ–
ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ–ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ
ಯೇಸು ಅವನಿಗೆ — ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು.
ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ–
ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು.
10 ಆಗ ಯೇಸು ಅವನಿಗೆ–ಸೈತಾನನೇ, ಇಲ್ಲಿಂದ ತೊಲಗಿಹೋಗು; ಯಾಕಂದರೆ–ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು.
11 ಆಗ ಸೈತಾನನು ಆತನನ್ನು ಬಿಟ್ಟನು; ಮತ್ತು ಇಗೋ, ದೇವದೂತರು ಬಂದು ಆತನನ್ನು ಉಪಚರಿಸಿದರು.

ಬಿದ್ದುಹೋದ ದೂತರು
ಯೆಶಾಯ 14

ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ.
ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ
ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.
ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ.
ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
10 ಅವರೆಲ್ಲರು ನಿನಗೆ–ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
11 ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ;
12 ಓ ಲೂಸಿಫರ್‌ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ?
13 ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು.
14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ;
15 ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ.
16 ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ –ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ
17 ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.

ಯೂದನು 1
ನೀವು ಇದನ್ನು ಒಂದು ಸಾರಿ ತಿಳಿದವರಾಗಿದ್ದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವದಂದರೆ–ಕರ್ತನು (ತನ್ನ) ಪ್ರಜೆಯನ್ನು ಐಗುಪ್ತದೇಶದೊಳಗಿಂದ ರಕ್ಷಿಸಿ ದರೂ ತರುವಾಯ ಅವರೊಳಗೆ ನಂಬದೆ ಹೋದ ವರನ್ನು ಸಂಹಾರ ಮಾಡಿದನು.
ತಮ್ಮ ಮೊದಲಿನ ಸ್ಥಿತಿಯನ್ನು ಕಾಪಾಡದೆ ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೂತರಿಗೆ ಆತನು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದ ತೀರ್ಪಿಗಾಗಿ ಅವರನ್ನು ಕತ್ತಲೆ ಯೊಳಗೆ ಕಾದಿಟ್ಟಿದ್ದಾನೆ.
ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.
ಹಾಗೆಯೇ ಈ ದುಸ್ವಪ್ನದವರು ಶರೀರವನ್ನು ಮಲಿನ ಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆ ಮಾಡು ವವರೂ ಗೌರವವುಳ್ಳವರನ್ನು ದೂಷಿಸುವವರೂ ಆಗಿದ್ದಾರೆ.
ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ–ಕರ್ತನು ನಿನ್ನನ್ನು ಗದರಿಸಲಿ ಅಂದನು.
10 ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ ಮತ್ತು ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.

ಕೊಲೊಸ್ಸೆಯವರಿಗೆ 2
16 ಹೀಗಿರುವದರಿಂದ ಅನ್ನಪಾನಗಳ ವಿಷಯದಲ್ಲಿ ಯೂ ಪವಿತ್ರ ದಿನ ಅಮಾವಾಸ್ಯೆ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮಗೆ ಯಾರೂ ತೀರ್ಪು ಮಾಡ ದಿರಲಿ.
17 ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.
18 ಸ್ವಇಷ್ಟ ವಿನಯದಿಂದಲೂ ದೇವದೂತರ ಆರಾಧನೆ ಯಿಂದಲೂ ತನ್ನ ಶಾರೀರಕ ಮನಸ್ಸಿನಿಂದ ವ್ಯರ್ಥವಾಗಿ ಉಬ್ಬಿಕೊಂಡು ತಾನು ನೋಡದಿರುವವುಗಳಲ್ಲಿ ಬಲ ವಂತವಾಗಿ ನುಗ್ಗುವ ಯಾವನೂ ನಿಮ್ಮ ಬಹುಮಾನ ವನ್ನು ಮೋಸಗೊಳಿಸದಿರಲಿ.
19 ಇಂಥವನು (ಕ್ರಿಸ್ತನೆಂಬ) ಶಿರಸ್ಸಿನ ಹೊಂದಿಕೆಯನ್ನು ಬಿಟ್ಟವ ನಾಗಿದ್ದಾನೆ. ಆ ಶಿರಸ್ಸಿನಿಂದಲೇ ದೇಹವೆಲ್ಲಾ ಕೀಲು ನರಗಳ ಮೂಲಕ ಬೇಕಾದ ಸಹಾಯವನ್ನು ಹೊಂದಿ ಒಂದಾಗಿ ಜೋಡಿಸಲ್ಪಟ್ಟು ದೇವರು ಕೊಡುವ ವೃದ್ಧಿ ಯಿಂದ ಅಭಿವೃದ್ದಿಯಾಗುತ್ತಾ ಬರುತ್ತದೆ.
20 ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕು ವವರೋ ಎಂಬಂತೆ
21 ಮುಟ್ಟಬೇಡ, ರುಚಿನೋಡ ಬೇಡ, ಹಿಡಿಯಬೇಡ ಎನ್ನುವ ಮನುಷ್ಯ ಕಲ್ಪಿತ ಆಜ್ಞೆ ಗಳಿಗೂ ಬೋಧನೆಗಳಿಗೂ ನಿಮ್ಮನ್ನು ಒಳಗಾಗಮಾಡಿ ಕೊಳ್ಳುವದೇಕೆ?
22 (ಆ ಪದಾರ್ಥಗಳೆಲ್ಲವೂ ಬಳಸುವ ದರಲ್ಲಿ ನಾಶವಾಗುತ್ತವೆ);
23 ಅಂಥ ಉಪದೇಶಗಳು ಸ್ವೇಚ್ಛಾರಾಧನೆಯಲ್ಲಿಯೂ ವಿನಯದಲ್ಲಿಯೂ ದೇಹ ದಂಡನೆಯಲ್ಲಿಯೂ ಜ್ಞಾನವನ್ನು ತೋರಿಸುವಂಥವು ಗಳಾಗಿರುವದು ನಿಜವೇ. ಆದರೆ ಅವು ಶರೀರವನ್ನಲ್ಲದೆ ಯಾವ ವಿಧದಲ್ಲಿಯೂ ತೃಪ್ತಿ ಪಡಿಸಲಾರವು.

2 ಪೇತ್ರನು 2
1 ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು. ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂ ತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ
ಅವರ ಕೆಡುಕಿನ ಮಾರ್ಗಗಳನ್ನು ಅನೇಕರು ಅನುಸರಿಸುವರು; ಅವರ ನಿಮಿತ್ತ ಸತ್ಯ ಮಾರ್ಗಕ್ಕೆ ದೂಷಣೆ ಉಂಟಾಗುವದು.
ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು.

ದೇವರ ಸನ್ನಿಧಿಯಲ್ಲಿ ಬಿದ್ದುಹೋದ ದೇವದೂತರು
ಯೋಬನು 1

ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು.
ಕರ್ತನು ಸೈತಾನನಿಗೆ–ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ–ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು.
ಕರ್ತನು ಸೈತಾನನಿಗೆ–ನನ್ನ ಸೇವಕನಾದ ಯೋಬನ ಮೇಲೆ ನೀನು ಗಮನವಿಟ್ಟೆಯಾ? ಅವನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲಗುವವನೂ ಆಗಿದ್ದಾನೆ ಅವನ ಹಾಗೆ ಭೂಮಿಯಲ್ಲಿ ಒಬ್ಬನೂ ಇಲ್ಲ ಅಂದನು.
ಆಗ ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆ–ಯೋಬನು ಸುಮ್ಮನೆ ದೇವರಿಗೆ ಭಯಪಡುತ್ತಾನೋ?
10 ನೀನು ಅವನಿಗೂ ಅವನ ಮನೆಗೂ ಅವನಿಗೆ ಉಂಟಾದ ಎಲ್ಲವುಗಳಿಗೂ ಸುತ್ತಲೂ ಬೇಲಿ ಕಟ್ಟಿದೆಯಲ್ಲಾ? ಅವನ ಕೈ ಕೆಲಸವನ್ನು ಆಶೀರ್ವದಿಸಿದಿ; ಅವನ ಸಂಪತ್ತು ದೇಶದಲ್ಲಿ ಹಬ್ಬಿಯದೆ.
11 ಆದರೆ ನಿನ್ನ ಕೈ ಚಾಚಿ ಅವನಿಗಿದ್ದದ್ದನ್ನೆಲ್ಲಾ ಮುಟ್ಟು; ಅವನು ನಿನ್ನೆದುರಿನಲ್ಲಿಯೇ ನಿನ್ನನ್ನು ಶಪಿಸುವನು ಅಂದನು.
12 ಕರ್ತನು ಸೈತಾನನಿಗೆ–ಇಗೋ, ಅವನದೆಲ್ಲಾ ನಿನ್ನ ಅಧಿಕಾರ ದಲ್ಲಿ ಅದೆ; ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ ಅಂದನು. ಆಗ ಸೈತಾನನು ಕರ್ತನ ಸಮ್ಮುಖದಿಂದ ಹೊರಟನು.

ಜೆಕರ್ಯ 3
1 ಇದಲ್ಲದೆ ಆತನು ನನಗೆ–ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
ಆಗ ಕರ್ತನ ದೂತನು ಸೈತಾನನಿಗೆ–ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.
ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ–ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ–ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು.
ಆಗ ನಾನು–ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು.
ಆಗ ಕರ್ತನ ದೂತನು ಯೆಹೋ ಶುವನಿಗೆ ಸಾಕ್ಷಿ ಕೊಟ್ಟದ್ದೇನಂದರೆ–
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ–ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಯನ್ನು ಕೈಕೋ, ಆಗ ನೀನು ನನ್ನ ಮನೆಗೂ ನ್ಯಾಯತೀರಿಸಿ ನನ್ನ ಅಂಗಳಗಳನ್ನೂ ಕಾಯುವಿ; ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ನಿನಗೆ ಸ್ಥಳಗಳನ್ನು ಕೊಡುವೆನು.

 

 
 

Related Quiz Articles