ಸತ್ಯವೇದದಲ್ಲಿ ಪ್ರಮಾಣ

ಪ್ರಸಂಗಿ 5
ದೇವರಿಗೆ ನೀನು ಪ್ರಮಾಣವನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ; ಮೂಢರಲ್ಲಿ ಆತನಿಗೆ ಸಂತೋಷವಿಲ್ಲ; ನೀನು ಪ್ರಮಾಣಮಾಡಿದ್ದನು ತೀರಿಸು.
ಪ್ರಮಾಣಮಾಡಿ ತೀರಿಸದೆ ಇರುವದಕ್ಕಿಂತ ಪ್ರಮಾಣಮಾಡದೆ ಇರುವದು ಒಳ್ಳೇದು.
ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು?
ಬಹು ಕನಸುಗಳಲ್ಲಿ ಬಹಳ ಮಾತುಗಳಲ್ಲಿ ವಿಧವಿಧವಾದ ವ್ಯರ್ಥವಾದವುಗಳು ಇವೆ; ನೀನು ದೇವರಿಗೆ ಭಯಪಡು.

ಧರ್ಮೋಪದೇಶಕಾಂಡ 12
ನೀವು ನಿಮ್ಮ ಕರ್ತನಾದ ದೇವರಿಗೆ ಹಾಗೆ ಮಾಡ ಬೇಡಿರಿ.
ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.
ಅಲ್ಲಿಗೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಬಲಿಗಳನ್ನೂ ನಿಮ್ಮ ಕೈಗಳು ಎತ್ತುವ ಅರ್ಪಣೆಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಕಾಣಿಕೆಗಳನ್ನೂ ನಿಮ್ಮ ಪಶು ಕುರಿಗಳ ಚೊಚ್ಚಲಾದವುಗಳನ್ನೂ ತರಬೇಕು.

ಧರ್ಮೋಪದೇಶಕಾಂಡ 23
21 ನೀನು ನಿನ್ನ ದೇವರಾದ ಕರ್ತನಿಗೆ ಪ್ರಮಾಣ ಮಾಡಿದ ಮೇಲೆ ಅದನ್ನು ಸಲ್ಲಿಸುವದಕ್ಕೆ ತಡಮಾಡ ಬೇಡ; ನಿನ್ನ ದೇವರಾದ ಕರ್ತನು ಅದನ್ನು ನಿಶ್ಚಯ ವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವನು; ಅದು ನಿನ್ನಲ್ಲಿ ಪಾಪವಾಗಿರುವದು.
22 ಆದರೆ ನೀನು ಪ್ರಮಾಣ ಮಾಡಿರದಿದ್ದರೆ ನಿನ್ನ ಮೇಲೆ ಪಾಪವಿರು ವದಿಲ್ಲ.
23 ನಿನ್ನ ತುಟಿಗಳಿಂದ ಹೊರಟದ್ದನ್ನು ಕಾಪಾಡಿ ನೀನು ಉಚಿತವಾಗಿ ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡಿದಂತೆ ನಿನ್ನ ಬಾಯಿಂದ ಪ್ರಮಾಣ ಮಾಡಬೇಕು.

ಪ್ರಮಾಣಗಳನ್ನು ಪೂರೈಸಲು ದೇವರು ಹೇಳುತ್ತಾನೆ:

ಕೀರ್ತನೆಗಳು 50
ಓ ನನ್ನ ಜನರೇ, ಕೇಳಿರಿ, ನಾನು ನುಡಿಯುವೆನು; ಓ ಇಸ್ರಾಯೇಲೇ, ನಿನಗೆ ವಿರೋಧವಾಗಿ ನಾನು ಸಾಕ್ಷಿಕೊಡುವೆನು; ನಾನು ದೇವರು, ಹೌದು ನಿನ್ನ ದೇವರು ನಾನೇ.
ನಿನ್ನ ಬಲಿಗಳಿಗೋಸ್ಕರ ಇಲ್ಲವೆ ನಿನ್ನ ದಹನಬಲಿಗೋಸ್ಕರ ನಾನು ನಿನ್ನನ್ನು ಗದರಿಸುವ ದಿಲ್ಲ; ಅವು ಯಾವಾಗಲೂ ನನ್ನ ಮುಂದೆ ಇವೆ.
ನಿನ್ನ ಮನೆಯಿಂದ ಹೋರಿಯನ್ನೂ ಇಲ್ಲವೆ ನಿನ್ನ ದೊಡ್ಡಿಗಳಿಂದ ಹೋತಗಳನ್ನೂ ತೆಗೆದುಕೊಳ್ಳೆನು.
10 ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
11 ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
12 ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
13 ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
14 ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.
15 ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.

ಮೋಶೆಯ ಧರ್ಮಶಾತ್ರದಲ್ಲಿ ಪ್ರಮಾಣ

ನಾಜೀರನ ವಿಶೇಷ ವಾದ ಪ್ರಮಾಣ

ಅರಣ್ಯಕಾಂಡ 6
1 ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ —
ನೀನು ಇಸ್ರಾ ಯೇಲ್‌ ಮಕ್ಕಳ ಸಂಗಡ ಮಾತನಾಡಿ ಹೇಳಬೇಕಾದ ದ್ದೇನಂದರೆ–ಪುರುಷನಾದರೂ ಸ್ತ್ರೀಯಾದರೂ ಕರ್ತ ನಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರನ ವಿಶೇಷ ವಾದ ಪ್ರಮಾಣವನ್ನು ಮಾಡಿ
3 ದ್ರಾಕ್ಷಾರಸಕ್ಕೂ ಮದ್ಯ ಪಾನಕ್ಕೂ ದೂರವಾಗಿದ್ದು ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ ದ್ರಾಕ್ಷೆಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ, ಹಸೀದಾಗಲಿ ಒಣಗಿದ್ದಾಗಲಿ ದ್ರಾಕ್ಷೇ ಹಣ್ಣನ್ನು ತಿನ್ನದೆ ಇರಬೇಕು.
ತನ್ನ ನಾಜೀರತನ ದಿವಸಗಳಲ್ಲೆಲ್ಲಾ ದ್ರಾಕ್ಷೇ ಬೀಜ ಮೊದಲುಗೊಂಡು ಸಿಪ್ಪೆಯ ವರೆಗೂ ದ್ರಾಕ್ಷೇ ಬಳ್ಳಿಯಲ್ಲಿ ಬೆಳೆದದ್ದು ಯಾವದನ್ನಾದರೂ ತಿನ್ನಬಾರದು.
ಅವನ ನಾಜೀರತನ ಪ್ರಮಾಣದ ದಿವಸಗಳೆಲ್ಲಾ ಕ್ಷೌರ ಕತ್ತಿ ಅವನ ತಲೆಯ ಮೇಲೆ ಬರಬಾರದು; ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿಕೊಂಡ ದಿವಸ ಗಳು ಪೂರ್ತಿಯಾಗುವ ವರೆಗೆ ಅವನು ಪರಿಶುದ್ಧನಾಗಿ ರುವನು; ಅವನು ತನ್ನ ತಲೆಯ ಕೂದಲನ್ನು ಬೆಳೆಸ ಬೇಕು.
ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿ ಕೊಂಡ ದಿವಸಗಳೆಲ್ಲಾ ಸತ್ತವನ ಬಳಿಗೆ ಬರಬಾರದು.
ಅವನ ತಂದೆ ತಾಯಿ ಸಹೋದರ ಸಹೋದರಿ ಸತ್ತರೂ ಅವನು ಅವರಿಗೋಸ್ಕರ ಅಪವಿತ್ರನಾಗ ಬಾರದು; ಅವನ ದೇವರ ನಾಜೀರತನವು ಅವನ ತಲೆಯ ಮೇಲೆ ಇದೆ.
ಅವನ ನಾಜೀರತನದ ದಿವಸ ಗಳಲ್ಲೆಲ್ಲಾ ಅವನು ಕರ್ತನಿಗೆ ಪರಿಶುದ್ಧನಾಗಿದ್ದಾನೆ.
ಅವನ ಬಳಿಯಲ್ಲಿ ಒಬ್ಬನು ಅಕಸ್ಮಾತ್ತಾಗಿ ಸತ್ತರೆ ಅವನ ನಾಜೀರತನದ ತಲೆಯು ಅಶುದ್ಧವಾದದ್ದರಿಂದ ಅವನು ಶುದ್ಧನಾಗುವ ದಿವಸದಲ್ಲಿ ತನ್ನ ತಲೆಯನ್ನು ಬೋಳಿಸಿ ಕೊಳ್ಳಬೇಕು, ಏಳನೇ ದಿವಸದಲ್ಲಿ ಬೋಳಿಸಿಕೊಳ್ಳ ಬೇಕು.
10 ಎಂಟನೆಯ ದಿವಸದಲ್ಲಿ ಅವನು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಲಿಗೆ ಎರಡು ಬೆಳವಕ್ಕಿ ಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
11 ಯಾಜಕನು ಒಂದನ್ನು ಪಾಪದ ಬಲಿ ಯಾಗಿಯೂ ಇನ್ನೊಂದನ್ನು ಹೋಮವಾಗಿಯೂ ಅರ್ಪಿಸಿ ಅವನು ಸತ್ತವನಲ್ಲಿ ಪಾಪಮಾಡಿದ್ದರಿಂದ ಅವನಿಗೋಸ್ಕರ ಪಾಪವನ್ನು ಮುಚ್ಚಿ ಆ ದಿವಸದಲ್ಲಿ ಅವನ ತಲೆಯನ್ನು ಪರಿಶುದ್ಧಮಾಡಬೇಕು.
12 ಅವನು ಪ್ರತ್ಯೇಕಿಸಲ್ಪಟ್ಟ ತನ್ನ ದಿವಸಗಳನ್ನು ಕರ್ತನಿಗೆ ಪ್ರತ್ಯೇಕಿಸಿ ಅಪರಾಧ ಬಲಿಯಾಗಿ ಒಂದು ವರುಷದ ಕುರಿಮರಿ ಯನ್ನು ತರಬೇಕು; ಆದರೆ ಮೊದಲಿನ ದಿವಸಗಳು ವ್ಯರ್ಥವಾಗುವವು; ಅವನು ಪ್ರತ್ಯೇಕಿಸಲ್ಪಟ್ಟದ್ದು ಅಶುದ್ಧವಾಯಿತು.
13 ಇದು ನಾಜೀರನ ನಿಯಮವು: ಪ್ರತ್ಯೇಕಿಸಲ್ಪಟ್ಟ ಅವನ ದಿವಸಗಳು ಪೂರ್ಣವಾದ ಮೇಲೆ ಅವನನ್ನು ಸಭೆಯ ಗುಡಾರದ ಬಾಗಲಿನ ಬಳಿಗೆ ತರಬೇಕು.
14 ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.
15 ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿ ಯಿಲ್ಲದ ರೊಟ್ಟಿಗಳ ಒಂದು ಪುಟ್ಟಿಯನ್ನೂ ಎಣ್ಣೇ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ ಅವುಗಳ ಆಹಾರದ ಅರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ತರಬೇಕು.
16 ಇವುಗಳನ್ನು ಯಾಜಕನು ಕರ್ತನ ಎದುರಿನಲ್ಲಿ ತಂದು ಅವನ ಪಾಪದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸ ಬೇಕು.
17 ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯ ಸಂಗಡ ಕರ್ತನಿಗೆ ಸಮಾಧಾನದ ಅರ್ಪಣೆ ಗಳ ಬಲಿಗಾಗಿ ಅರ್ಪಿಸಬೇಕು; ಇದಲ್ಲದೆ ಯಾಜಕನು ಅವನ ಆಹಾರದ ಅರ್ಪಣೆಯನ್ನೂ ಪಾನಾರ್ಪಣೆ ಯನ್ನೂ ಅರ್ಪಿಸಬೇಕು.
18 ಇದಲ್ಲದೆ ನಾಜೀರನು ಪ್ರತ್ಯೇಕಿಸಿಕೊಂಡ ತನ್ನ ತಲೆಯನ್ನು ಸಭೆಯ ಗುಡಾರದ ಬಾಗಲಿನ ಬಳಿಯಲ್ಲಿ ಬೋಳಿಸಿ ಪ್ರತ್ಯೇಕಿಸಿದ ತನ್ನ ತಲೆಯ ಕೂದಲನ್ನು ತಕ್ಕೊಂಡು ಸಮಾಧಾನದ ಅರ್ಪಣೆಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕ ಬೇಕು.
19 ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ ಆ ಪುಟ್ಟಿಯೊಳಗಿಂದ ಹುಳಿ ಯಿಲ್ಲದ ಒಂದು ರೊಟ್ಟಿಯನ್ನೂ ಹುಳಿಯಿಲ್ಲದ ಒಂದು ದೋಸೆಯನ್ನೂ ತಕ್ಕೊಂಡು ನಾಜೀರನ ಪ್ರತ್ಯೇಕಿಸಿದ ಆ ಕೂದಲನ್ನು ಬೋಳಿಸಿದ ತರುವಾಯ ಅವನ ಕೈಗಳಲ್ಲಿ ಅವುಗಳನ್ನು ಕೊಡಬೇಕು.
20 ಯಾಜಕನು ಅವುಗಳನ್ನು ಆಡಿಸುವ ಅರ್ಪಣೆಗಾಗಿ ಕರ್ತನ ಎದುರಿ ನಲ್ಲಿ ಆಡಿಸಬೇಕು. ಆಡಿಸುವ ಎದೆಯ ಸಂಗಡಲೂ ಎತ್ತುವ ಮುಂದೊಡೆಯ ಸಂಗಡಲೂ ಅದು ಯಾಜಕ ನಿಗೆ ಪರಿಶುದ್ಧವಾಗಿದೆ. ಆ ಮೇಲೆ ನಾಜೀರನು ದ್ರಾಕ್ಷಾ ರಸವನ್ನು ಕುಡಿಯಬಹುದು.
21 ಪ್ರಮಾಣಮಾಡಿಕೊಂಡ ನಾಜೀರನ ನಿಯ ಮವು ಇದೇ. ಅವನ ಕೈಗೆ ದೊರಕಿದ್ದಲ್ಲದೆ ಅವನು ತನ್ನ ಪ್ರತ್ಯೇಕಿಸುವಿಕೆಗಾಗಿ ಕರ್ತನಿಗೆ ಅರ್ಪಿಸತಕ್ಕದ್ದು. ಅವನು ಪ್ರಮಾಣಮಾಡಿಕೊಂಡ ಪ್ರಕಾರ ತಾನು ಪ್ರತ್ಯೇಕಿಸಿಕೊಂಡಂತೆ ಅವನು ಮಾಡಬೇಕು.

ಅರಣ್ಯಕಾಂಡ 30
1 ಮೋಶೆಯು ಇಸ್ರಾಯೇಲ್‌ ಮಕ್ಕಳ ಗೋತ್ರಗಳ ಯಜಮಾನರ ಸಂಗಡ ಮಾತನಾಡಿ — ಕರ್ತನು ಆಜ್ಞಾಪಿಸಿದ್ದೇನಂದರೆ,
ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.

ಸ್ತ್ರೀಯ ಪ್ರಮಾಣ

3 ಸ್ತ್ರೀಯು ಕರ್ತನಿಗೆ ಪ್ರಮಾಣಮಾಡಿ ತನ್ನ ಕನ್ಯಾ ವಸ್ಥೆಯಲ್ಲಿ ತಂದೆಯ ಮನೆಯಲ್ಲಿ ಬಂಧಿಸಿಕೊಂಡರೆ
ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.
ಆದರೆ ಅವಳ ತಂದೆ ಕೇಳಿದ ದಿವಸದಲ್ಲಿ ಅವಳನ್ನು ತಡೆದರೆ ಅವಳ ಎಲ್ಲಾ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಇಟ್ಟುಕೊಂಡ ಎಲ್ಲಾ ಬಂಧನಗಳೂ ನಿಲ್ಲವು; ಅವಳ ತಂದೆ ಅವಳಿಗೆ ತಡೆದ ಕಾರಣ ಕರ್ತನು ಅವಳನ್ನು ಕ್ಷಮಿಸುವನು.
ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಪ್ರಮಾಣಗಳು ಇಲ್ಲವೆ ಪ್ರಾಣವನ್ನು ಬಂಧಿ ಸುವ ಬಾಯಿಂದ ಬಂದ ಮಾತು ಇದ್ದರೆ
ಅವಳ ಗಂಡನು ಅದನ್ನು ಕೇಳಿ, ಕೇಳಿದ ದಿವಸದಲ್ಲಿ ಅವಳಿಗೆ ಸುಮ್ಮನಿದ್ದ ಪಕ್ಷದಲ್ಲಿ ಅವಳ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದೂ ನಿಲ್ಲುವವು.
ಆದರೆ ಅವಳ ಗಂಡನು ಅದನ್ನು ಕೇಳಿದ ದಿವಸದಲ್ಲಿ ಅವಳನ್ನು ತಡೆದು ಅವಳ ಮೇಲೆ ಇರುವ ಅವಳ ಪ್ರಮಾಣವನ್ನೂ ಪ್ರಾಣದ ಮೇಲೆ ಅವಳು ಬಂಧಿಸಿ ಕೊಂಡ ಬಾಯಿಂದ ಬಂದ ಮಾತನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಕರ್ತನು ಅವಳಿಗೆ ಕ್ಷಮಿಸುವನು.
ಇದಲ್ಲದೆ ವಿಧವೆಯಾದರೂ ಪರಿತ್ಯಾಗ ಮಾಡ ಲ್ಪಟ್ಟವಳಾದರೂ ತಮ್ಮ ಪ್ರಾಣಗಳನ್ನು ಬಂಧಿಸಿದ ಒಂದೊಂದು ಪ್ರಮಾಣವು ಅವರ ಮೇಲೆ ನಿಲ್ಲುವದು.
10 ಅವಳು ತನ್ನ ಗಂಡನ ಮನೆಯಲ್ಲಿ ಪ್ರಮಾಣ ಮಾಡಿದರೆ ಇಲ್ಲವೆ ಆಣೆಯಿಂದ ತನ್ನ ಪ್ರಾಣವನ್ನು ಬಂಧಿಸಿದರೆ
11 ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು ಅವಳನ್ನು ತಡೆಯದ ಪಕ್ಷದಲ್ಲಿ ಅವಳ ಸಮಸ್ತ ಪ್ರಮಾಣಗಳೂ ಅವಳು ತನ್ನ ಪ್ರಾಣವನ್ನು ಬಂಧಿಸಿದ ಸಮಸ್ತ ಬಂಧನಗಳೂ ನಿಲ್ಲುವವು.
12 ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕಮಾಡಿದ ಪಕ್ಷ ದಲ್ಲಿ ಅವಳ ಪ್ರಮಾಣಗಳಿಗೋಸ್ಕರವೂ ಅವಳ ಪ್ರಾಣದ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವದಾಗಲಿ ನಿಲ್ಲದು, ಅವಳ ಗಂಡನು ಅವುಗಳನ್ನು ನಿರರ್ಥಕಮಾಡಿದ್ದಾನೆ; ಕರ್ತನು ಅವಳನ್ನು ಕ್ಷಮಿಸುವನು.
13 ಎಲ್ಲಾ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಕಟ್ಟಳೆಯ ಎಲ್ಲಾ ಆಣೆಗಳನ್ನೂ ಅವಳ ಗಂಡನು ಸಾರ್ಥಕಮಾಡಬಹುದು, ಇಲ್ಲವೆ ನಿರರ್ಥಕ ಮಾಡಬಹುದು.
14 ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ ಅವನು ಅವಳ ಸಮಸ್ತ ಪ್ರಮಾಣಗಳನ್ನೂ ಅವಳ ಮೇಲಿರುವ ಸಮಸ್ತ ಕಟ್ಟಳೆಗಳನ್ನೂ ಸ್ಥಾಪಿಸುತ್ತಾನೆ; ಅವನು ಕೇಳಿದ ದಿವಸ ದಲ್ಲಿ ಅವಳಿಗೆ ಸುಮ್ಮನಿರುವದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
15 ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ ಅವಳ ಅಕ್ರಮವನ್ನು ಹೊರಬೇಕು.
16 ಪತಿಪತ್ನಿಯರ ವಿಷಯದಲ್ಲಿಯೂ ತಂದೆಯೂ ತಂದೆ ಮನೆಯಲ್ಲಿ ಕನ್ಯಾವಸ್ತೆಯಾಗಿರುವ ಮಗಳೂ ಇವರ ವಿಷಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.

ಪ್ರಮಾಣದಿಂದ ವಿಮೋಚನೆ

ಕರ್ತನದನ್ನು ವಿಮೋಚಿಸುವುದು

ಯಾಜಕಕಾಂಡ 27
1 ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ —
ಇಸ್ರಾಯೇಲ್‌ ಮಕ್ಕಳ ಸಂಗಡ ನೀನು ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ–ಒಬ್ಬನು ಪ್ರತ್ಯೇಕವಾದ ಪ್ರಮಾ ಣವನ್ನು ಮಾಡಿಕೊಂಡರೆ ನೀನು ನೇಮಿಸಿದ ಕ್ರಯದ ಪ್ರಕಾರ ಜನರು ಕರ್ತನಿಗೆ ಮಾಡಬೇಕು.
3 ನೀನು ನೇಮಿಸಬೇಕಾದ ಕ್ರಯವು ಯಾವದಂದರೆ–ಇಪ್ಪತ್ತು ವರುಷದವನು ಮೊದಲುಗೊಂಡು ಅರವತ್ತು ವರುಷ ದವನ ವರೆಗೆ ನೀನು ನೇಮಿಸುವ ಕ್ರಯವು ಪರಿಶುದ್ಧ ಶೇಕೆಲಿನ ಮೇರೆಗೆ ಐವತ್ತು ಬೆಳ್ಳಿಯ ಶೇಕೆಲುಗಳಾಗಿರ ಬೇಕು.
ಹೆಣ್ಣಾಗಿದ್ದರೆ ನೀನು ನೇಮಿಸುವ ಕ್ರಯವು ಮೂವತ್ತು ಶೇಕೆಲುಗಳಾಗಿರಬೇಕು.
ಐದು ವರುಷ ದವನು ಮೊದಲುಗೊಂಡು ಇಪ್ಪತ್ತು ವರುಷದವನ ವರೆಗೆ ಗಂಡಸಿನ ಕ್ರಯವು ಎಪ್ಪತ್ತು ಶೇಕೆಲುಗಳೂ ಹೆಂಗಸಿನ ಕ್ರಯವು ಹತ್ತು ಶೇಕೆಲುಗಳೂ ಆಗಿರಬೇಕು.
ಒಂದು ತಿಂಗಳಿನವನ ಮೊದಲುಗೊಂಡು ಐದು ವರುಷದವನ ವರೆಗೆ ಗಂಡಸಿನ ಕ್ರಯವು ಐದು ಬೆಳ್ಳಿಯ ಶೇಕೆಲುಗಳೂ ಹೆಣ್ಣಿನ ಕ್ರಯವು ಮೂರು ಬೆಳ್ಳಿಯ ಶೇಕೆಲುಗಳೂ ಆಗಿರಬೇಕು.
ಅರವತ್ತು ವರುಷವು ಅದಕ್ಕೆ ಹೆಚ್ಚಾದ ಪ್ರಾಯವುಳ್ಳ ಗಂಡಸಾಗಿದ್ದರೆ ನೀನು ನೇಮಿಸುವ ಕ್ರಯವು ಹದಿನೈದು ಶೇಕೆಲುಗಳೂ ಹೆಂಗಸಿಗೆ ಹತ್ತು ಶೇಕೆಲುಗಳೂ ಆಗಿರಬೇಕು.
ಆದರೆ ನೀನು ನೇಮಿಸಿದ ಕ್ರಯವನ್ನು ಕೂಡ ಕೊಡದಷ್ಟು ಅವನು ಬಡವನಾಗಿದ್ದರೆ ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿ ಸಬೇಕು. ಪ್ರಮಾಣಮಾಡಿದವನ ಸಂಪತ್ತಿಗೆ ಸರಿಯಾಗಿ ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು.
ಮನುಷ್ಯನು ಕರ್ತನಿಗೆ ಅರ್ಪಣೆಗಾಗಿ ತರುವವುಗ ಳಲ್ಲಿ ಅದು ಪಶುವಾಗಿದ್ದರೆ ಅವನು ಕೊಡುವಂತವು ಗಳೆಲ್ಲಾ ಕರ್ತನಿಗೆ ಶುದ್ಧವಾಗಿರುವದು.
10 ಅದನ್ನು ಒಳ್ಳೇದಕ್ಕೆ ಕೆಟ್ಟದ್ದನ್ನಾಗಲಿ ಕೆಟ್ಟದ್ದಕ್ಕೆ ಒಳ್ಳೇದನ್ನಾಗಲಿ ಬದಲು ಮಾಡಬಾರದು ಮತ್ತು ಮಾರ್ಪಡಿ ಸಲೂಬಾರದು; ಹೇಗಾದರೂ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ ಅದು ಅದರ ಬದಲೂ ಪರಿಶುದ್ಧವಾಗಿರಬೇಕು.
11 ಅದು ಕರ್ತನಿಗೆ ಅರ್ಪಣೆಯಾಗಿ ತಾರದ ಯಾವದಾದರೂ ಅಶುದ್ಧ ಪಶುವಾಗಿದ್ದರೆ ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು.
12 ಆಗ ಯಾಜಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಅದಕ್ಕೆ ಕ್ರಯಕಟ್ಟಬೇಕು. ಯಾಜಕನಾದ ನೀನು ಮಾಡಿದ ಕ್ರಯವೇ ಕ್ರಯವಾ ಗಿರಬೇಕು.
13 ಅದನ್ನು ಹೇಗಾದರೂ ವಿಮೋಚಿಸ ಬೇಕೆಂದಿದ್ದರೆ ನೀನು ಮಾಡಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು.
14 ಒಬ್ಬನು ತನ್ನ ಮನೆಯನ್ನು ಕರ್ತನಿಗೆ ಪರಿಶುದ್ಧ ವಾಗಿರಲೆಂದು ಅದನ್ನು ಪರಿಶುದ್ಧ ಮಾಡಿದರೆ ಯಾಜ ಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಕ್ರಯವನ್ನು ಕಟ್ಟಬೇಕು; ಯಾಜಕನು ಕ್ರಯಕಟ್ಟುವ ಪ್ರಕಾರವೇ ಅದು ಸ್ಥಿರವಾಗಿರಬೇಕು.
15 ಆದರೆ ಪರಿಶುದ್ಧ ಮಾಡಿ ದವನು ತನ್ನ ಮನೆಯನ್ನು ವಿಮೋಚಿಸಬೇಕೆಂದಿದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಪಾಲಿನ ಹಣವನ್ನು ಕೊಡಲಿ; ಆಗ ಅದು ಅವನದಾಗಿರುವದು.
16 ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಕರ್ತನಿಗೆ ಪರಿಶುದ್ಧ ಮಾಡಿದರೆ ನೀನು ಅದರ ಬೀಜದ ಪ್ರಕಾರ ಕ್ರಯಕಟ್ಟಬೇಕು; ಜವೆಗೋಧಿಯ ಒಂದು ಓಮೆರಷ್ಟು ಬೀಜಕ್ಕೆ ಐವತ್ತು ಬೆಳ್ಳಿ ಶೇಕೆಲುಗಳು.
17 ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು.
18 ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪರಿಶುದ್ಧ ಮಾಡಿದರೆ ಜೂಬಿಲಿ ಸಂವತ್ಸರದ ವರೆಗೆ ಮಿಕ್ಕ ವರುಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ಎಣಿಸಿ ನೀನು ಕಟ್ಟಿದ ಕ್ರಯದಿಂದ ಕಳೆಯ ಬೇಕು.
19 ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿ ದವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿ ದ್ದರೆ ನೀನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅವನು ಕೊಡಬೇಕು; ಆಗ ಅವನಿಗೆ ಅದು ಸ್ಥಿರವಾಗಿರುವದು.
20 ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ ಅದನ್ನು ಇನ್ನು ಮೇಲೆ ವಿಮೋಚಿಸಕೂಡದು.
21 ಆ ಹೊಲವು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವಾಗ ಪ್ರತ್ಯೇಕಿಸಲ್ಪಟ್ಟು ಒಪ್ಪಿಸಲ್ಪಟ್ಟ ಹೊಲದ ಹಾಗೆ ಕರ್ತನಿಗೆ ಅದು ಪರಿಶುದ್ಧವಾಗಿರಬೇಕು; ಅದರ ಸ್ವಾಸ್ತ್ಯವು ಯಾಜಕ ನಿಗೆ ಸಲ್ಲಬೇಕು.
22 ತನ್ನ ಸ್ವಾಸ್ತ್ಯದ ಹೊಲಗಳಲ್ಲಿ ಸೇರದಂಥ, ತಾನು ಕೊಂಡುಕೊಂಡ ಹೊಲವನ್ನು ಒಬ್ಬನು ಕರ್ತನಿಗೆ ಪರಿಶುದ್ಧ ಮಾಡಿದರೆ
23 ಯಾಜಕನು ಅವನಿಗೆ ನೀನು ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದ ವರೆಗೂ ಎಣಿಸಬೇಕು; ಅವರು ಆ ದಿವಸದಲ್ಲಿ ನೀನು ಕಟ್ಟಿದ ಕ್ರಯವನ್ನು ಕರ್ತನಿಗೆ ಪರಿಶುದ್ಧವಾದದ್ದಾಗಿ ಅವನು ಕೊಡಬೇಕು.
24 ಜೂಬಿಲಿ ಸಂವತ್ಸರದಲ್ಲಿ ಆ ಹೊಲದ ಭೂಮಿಯ ಸ್ವಾಸ್ತ್ಯವುಂಟಾದವನಿಗೆ ಅಂದರೆ ಇವನು ಯಾವನಿಂದ ಕೊಂಡುಕೊಂಡನೋ ಅವನಿಗೆ ತಿರುಗಿ ಹಿಂದಕ್ಕೆ ಕೊಡಬೇಕು.
25 ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.
26 ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ.
27 ಆದರೆ ಅದು ಅಶುದ್ಧ ಪಶುವಾಗಿದ್ದರೆ ನೀನು ಕ್ರಯ ಕಟ್ಟಿದ ಪ್ರಕಾರ ಅದಕ್ಕೆ ಹೆಚ್ಚಾಗಿ ಐದನೇ ಪಾಲನ್ನು ಕೊಟ್ಟು ಅವನು ಅದನ್ನು ವಿಮೋಚಿಸಬೇಕು; ವಿಮೋಚಿಸದಿದ್ದರೆ ಅದನ್ನು ನೀನು ಕ್ರಯ ಕಟ್ಟಿದ ಪ್ರಕಾರ ಮಾರಬೇಕು.
28 ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ.
29 ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.

ಯೆಫ್ತಾಹನ ಪ್ರಮಾಣ

ನ್ಯಾಯಸ್ಥಾಪಕರು 11
1 ಆದರೆ ಗಿಲ್ಯಾದ್ಯನಾದ ಯೆಫ್ತಾಹನು ಬಲಿಷ್ಠನಾದ ಪರಾಕ್ರಮಶಾಲಿಯಾಗಿ ದ್ದನು; ಅವನು ಸೂಳೆಯಲ್ಲಿ ಹುಟ್ಟಿದ ಗಿಲ್ಯಾದನ ಮಗನು.
ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಕುಮಾರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ–ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ; ಯಾಕಂದರೆ ನೀನು ಪರಸ್ತ್ರೀಯ ಮಗನು ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
3 ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್‌ ದೇಶದಲ್ಲಿ ವಾಸವಾಗಿದ್ದನು; ಆ ಸ್ಥಳದ ನಿಷ್ಪ್ರಯೋಜಕ ಮನುಷ್ಯರು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನ ಸಂಗಡ ಹೊರಗೆ ಹೊರಡುತ್ತಿದ್ದರು.
ಕೆಲವು ದಿವಸಗಳಾದ ಮೇಲೆ ಆದದ್ದೇನಂದರೆ, ಅಮ್ಮೋನನ ಮಕ್ಕಳು ಇಸ್ರಾಯೇಲಿನ ಮೇಲೆ ಯುದ್ಧ ಮಾಡಿದರು.
ಹೀಗೆ ಅವರು ಇಸ್ರಾಯೇಲಿನ ಮೇಲೆ ಯುದ್ಧಮಾಡುವಾಗ ಗಿಲ್ಯಾದಿನ ಹಿರಿಯರು ಯೆಫ್ತಾಹ ನನ್ನು ಟೋಬ್‌ ದೇಶದಿಂದ ಕರಕೊಂಡು ಬರಲು ಹೋಗಿ
ಯೆಫ್ತಾಹನಿಗೆ–ನಾವು ಅಮ್ಮೋನನ ಮಕ್ಕಳ ಸಂಗಡ ಯುದ್ಧಮಾಡುವಂತೆ ನೀನು ಬಂದು ನಮ್ಮ ಸೈನ್ಯಾಧಿಪತಿಯಾಗಿರು ಅಂದರು.

12 ಅವನು ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ–ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು.
13 ಅಮ್ಮೋ ನನ ಮಕ್ಕಳ ಅರಸನು ಯೆಫ್ತಾಹನ ದೂತರಿಗೆ–ಇಸ್ರಾಯೇಲು ಐಗುಪ್ತದಿಂದ ಬರುವಾಗ ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಮತ್ತು ಯೊರ್ದನಿನ ವರೆಗೂ ಇರುವ ನನ್ನ ದೇಶವನ್ನು ತಕ್ಕೊಂಡರು. ಆದದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರಿಗಿಕೊಡು ಅಂದನು.
14 ಯೆಫ್ತಾಹನು ತಿರಿಗಿ ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ
15 ಅವರಿಗೆ–ಯೆಫ್ತಾಹನು ಹೇಳುವ ಮಾತು ಇದೇ–ಇಸ್ರಾಯೇಲ್‌ ಮೋವಾಬಿನ ದೇಶವನ್ನಾ ದರೂ ಅಮ್ಮೋನನ ಮಕ್ಕಳ ದೇಶವನ್ನಾದರೂ ತಕ್ಕೊಂಡ ದ್ದಿಲ್ಲ.
16 ಆದರೆ ಇಸ್ರಾಯೇಲು ಐಗುಪ್ತದಿಂದ ಬರು ವಾಗ ಅರಣ್ಯದಲ್ಲಿ ಕೆಂಪು ಸಮುದ್ರದ ವರೆಗೆ ನಡೆದು ಕಾದೇಶಿಗೆ ಬಂದು
17 ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ–ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆಆಗಬೇಕು ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದದ ರಿಂದ ಇಸ್ರಾಯೇಲ್ಯರು ಕಾದೇಶಿನಲ್ಲಿ ವಾಸಮಾಡಿದರು.
18 ಅರಣ್ಯದಲ್ಲಿ ನಡೆದು ಎದೋಮ್‌ ದೇಶವನ್ನೂ ಮೋವಾಬ್‌ ದೇಶವನ್ನೂ ಸುತ್ತಿಕೊಂಡು ಹೋಗಿ ಮೋವಾಬ್‌ ದೇಶದ ಪೂರ್ವ ದಿಕ್ಕಿಗೆ ಬಂದು ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ ಮೋವಾ ಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳು ಕೊಂಡರು.
19 ಇಸ್ರಾಯೇಲು ಹೆಷ್ಬೋನಿನ ಅರಸನಾ ದಂಥ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದನು. ಅವರು–ನನ್ನ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವದಕ್ಕೆ ಅಪ್ಪಣೆಕೊಡಬೇಕು ಅಂದರು.
20 ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು.
21 ಆಗ ಇಸ್ರಾಯೇಲಿನ ದೇವರಾದ ಕರ್ತನು ಸೀಹೋನನನ್ನೂ ಅವನ ಸಕಲ ಜನರನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇ ಲ್ಯರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶ ವನ್ನೆಲ್ಲಾ ಸ್ವಾಧೀನಮಾಡಿಕೊಂಡರು.
22 ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಅರಣ್ಯದಿಂದ ಯೊರ್ದ ನಿನ ವರೆಗೂ ಇರುವ ಅಮೋರಿಯರ ಮೇರೆಗಳನ್ನೆಲ್ಲಾ ಅವರು ಸ್ವಾಧೀನಮಾಡಿಕೊಂಡರು.
23 ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ?
24 ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.
25 ಈಗ ಚಿಪ್ಪೋರನ ಮಗನೂ ಮೋವಾ ಬಿನ ಅರಸನೂ ಆದ ಬಾಲಾಕನಿಗಿಂತ ಯಾವದ ರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿನ ವಿರೋಧವಾಗಿ ಯಾವಾಗಲಾದರೂ ವಿವಾದ ಮಾಡಿದನೋ? ಯಾವಾಗಲಾದರೂ ಅವರಿಗೆ ವಿರೋಧವಾಗಿ ಯುದ್ಧಮಾಡಿದನೋ?
26 ಇಸ್ರಾಯೇಲು ಹೆಷ್ಬೋನಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರೋಯೇರಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರ್ನೋನಿನ ತೀರವಾದ ಎಲ್ಲಾ ಪಟ್ಟಣ ಗಳಲ್ಲಿಯೂ ಮುನ್ನೂರು ವರುಷಗಳಿಂದ ವಾಸಿಸಿರು ವಾಗ ಇಷ್ಟರ ವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?
27 ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್‌ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ.
28 ಹೀಗಿದ್ದರೂ ಯೆಪ್ತಾಹನು ಹೇಳಿ ಕಳುಹಿಸಿದ ಮಾತನ್ನು ಅಮ್ಮೋನನ ಅರಸನು ಕೇಳದೆ ಹೋದನು.
29 ಆಗ ಕರ್ತನ ಆತ್ಮವು ಯೆಪ್ತಾಹನ ಮೇಲೆ ಬಂತು. ಅವನು ಗಿಲ್ಯಾದ್‌ ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು ಅಲ್ಲಿಂದ ಅಮ್ಮೋನನ ಮಕ್ಕಳೆದುರಿಗೆ ಹಾದುಹೋದನು.
30 ಯೆಪ್ತಾಹನು ಕರ್ತನಿಗೆ ಒಂದು ಪ್ರಮಾಣವನ್ನು ಮಾಡಿ–ನೀನು ಅಮ್ಮೋನನ ಮಕ್ಕಳನ್ನು ನನ್ನ ಕೈಯಲ್ಲಿ ತಪ್ಪದೆ ಒಪ್ಪಿಸಿಕೊಟ್ಟರೆ
31 ನಾನು ಅಮ್ಮೋನನ ಮಕ್ಕಳ ಬಳಿಯಿಂದ ಸಮಾಧಾನದಲ್ಲಿ ತಿರಿಗಿ ಬರುವಾಗ ನನ್ನ ಮನೆಯ ಬಾಗಲಿಂದ ನನ್ನನ್ನು ಎದುರುಗೊಳ್ಳಲು ಬರುವಂಥದ್ದು ನಿಜವಾಗಿ ಕರ್ತನದಾಗಿರುವದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು ಅಂದನು.
32 ಹೀಗೆ ಯೆಪ್ತಾಹನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡುವದಕ್ಕೆ ಅವರೆದುರಿಗೆ ಹೊರಟು ಹೋದನು. ಕರ್ತನು ಅವರನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟನು.
33 ಅವನು ಅವರನ್ನು ಅರೋಯೇರಿ ನಿಂದ ನೀನು ಮಿನ್ನೀತಿಗೆ ಹೋಗುವ ವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ದ್ರಾಕ್ಷೇ ತೋಟದ ಬೈಲಿನ ವರೆಗೂ ಮಹಾದೊಡ್ಡ ಸಂಹಾರದಿಂದ ಹೊಡೆದನು. ಹೀಗೆ ಅಮ್ಮೋನನ ಮಕ್ಕಳು ಇಸ್ರಾಯೇಲ್‌ ಮಕ್ಕಳ ಮುಂದೆ ತಗ್ಗಿಸಲ್ಪಟ್ಟರು.
34 ಯೆಪ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಬರುವಾಗ ಇಗೋ, ಅವನ ಮಗಳು ದಮ್ಮಡಿಗಳ ಸಂಗಡವೂ ನಾಟ್ಯದ ಸಂಗಡವೂ ಅವನನ್ನು ಎದುರು ಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು; ಅವಳ ಹೊರತಾಗಿ ಅವನಿಗೆ ಮಗನಾಗಲಿ ಮಗಳಾಗಲಿ ಇರಲಿಲ್ಲ.
35 ಅವನು ಅವಳನ್ನು ನೋಡಿ ದಾಗ ತನ್ನ ವಸ್ತ್ರಗಳನ್ನು ಹರಕೊಂಡು–ಅಯ್ಯೋ, ನನ್ನ ಕುಮಾರ್ತೆಯೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದಿ. ನನ್ನನ್ನು ತೊಂದರೆಪಡಿಸುವವರಲ್ಲಿ ನೀನು ಒಬ್ಬಳಾದಿ. ಯಾಕಂದರೆ ನಾನು ಕರ್ತನಿಗೆ ನನ್ನ ಬಾಯಿ ತೆರೆದು ಪ್ರಮಾಣಮಾಡಿದೆನು; ಹಿಂದೆಗೆಯಲಾರೆನು ಅಂದನು.
36 ಅವಳು ಅವನಿಗೆ–ನನ್ನ ತಂದೆಯೇ, ಕರ್ತನು ಅಮ್ಮೋನನ ಮಕ್ಕಳಾದ ನಿನ್ನ ಶತ್ರುಗಳಿಗೆ ನಿನಗೋಸ್ಕರ ಮುಯ್ಯಿ ತೀರಿಸಿದ್ದರಿಂದ ಆತನಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು ಅಂದಳು.
37 ಇದಲ್ಲದೆ ಅವಳು ತನ್ನ ತಂದೆಗೆ –ಈ ಕಾರ್ಯವು ನನಗೆ ಆಗಲಿ; ಆದರೆ ನಾನು ನನ್ನ ಗೆಳತಿಯರೊಡನೆ ನನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಹೋಗಿ ಗೋಳಾಡುವಂತೆ ಎರಡು ತಿಂಗಳುಗಳ ವರೆಗೆ ನನ್ನನ್ನು ಬಿಡು ಅಂದಳು.
38 ಆಗ ಅವನು–ಎರಡು ತಿಂಗಳು ಹೋಗಿ ಬಾ ಎಂದು ಹೇಳಿ ಅವಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿ ಯರ ಸಂಗಡ ಹೋಗಿ ತನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಅತ್ತು,
39 ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ಮಾಡಿದನು. ಅವಳು ಪುರುಷನನ್ನು ಅರಿಯದೆ ಇದ್ದಳು.
40 ವರುಷಕ್ಕೆ ನಾಲ್ಕು ದಿವಸ ಇಸ್ರಾಯೇಲಿನ ಕುಮಾರ್ತೆಯರು ಹೋಗಿ ಗಿಲ್ಯಾದ್ಯನಾದ ಯೆಪ್ತಾಹನ ಮಗಳಿಗಾಗಿ ಗೋಳಾಡುವದು ಇಸ್ರಾಯೇಲಿನಲ್ಲಿ ಪದ್ಧತಿ ಆಯಿತು.

ಸಂಸೋನ ಪ್ರಮಾಣ

ನ್ಯಾಯಸ್ಥಾಪಕರು 13
ಸಂಸೋನ ಜನನ

1 ಇಸ್ರಾಯೇಲ್‌ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಕರ್ತನು ಅವರನ್ನು ನಾಲ್ವತ್ತು ವರುಷದ ವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟನು.
ಚೊರ್ಗಾದ ವನಾದ ದಾನ್‌ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು.
3 ಅವನ ಹೆಂಡತಿಯು ಹೆರದೆ ಬಂಜೆಯಾಗಿದ್ದಳು. ಕರ್ತನ ದೂತನು ಆ ಸ್ತ್ರೀಗೆ ಪ್ರತ್ಯಕ್ಷ ವಾಗಿ ಅವಳಿಗೆ–ಇಗೋ, ನೀನು ಹೆರದೆ ಬಂಜೆಯಾ ಗಿದ್ದೀ. ಆದರೆ ನೀನು ಗರ್ಭ ಧರಿಸಿ ಒಬ್ಬ ಮಗನನ್ನು ಹೆರುವಿ.
ಆದದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ ಅಶುಚಿಯಾದ ಒಂದನ್ನಾದರೂ ತಿನ್ನದೆ ಎಚ್ಚರಿಕೆಯಾಗಿರಬೇಕು.
ಇಗೋ, ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವಿ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರುವದಿಲ್ಲ. ಗರ್ಭದಿಂದಲೇ ಆ ಹುಡುಗನು ದೇವರ ನಾಜೀರನಾಗಿ ರುವನು. ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿ ಯರ ಕೈಯಿಂದ ಬಿಡಿಸಿ ರಕ್ಷಿಸಲು ಪ್ರಾರಂಭಿಸುವನು ಅಂದನು.

ನ್ಯಾಯಸ್ಥಾಪಕರು 16
ಸಂಸೋನನ ಪ್ರಮಾಣ ಮುರಿದು ಅವನ ಪತನ
15 ಅವಳು ಅವನಿಗೆ–ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ ನಿನ್ನನ್ನು ಪ್ರೀತಿ ಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆಮಾಡಿದಿ; ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ ಅಂದಳು.
16 ಅವಳು ಅವನನ್ನು ದಿನದಿನವೂ ತನ್ನ ಮಾತುಗಳಿಂದ ಪೀಡಿಸಿ ತೊಂದರೆಪಡಿಸಿದ್ದರಿಂದ ಅವನ ಪ್ರಾಣವು ಸಾಯು ವಷ್ಟು ವ್ಯಸನಪಟ್ಟಿತು.
17 ಅವನು ತನ್ನ ಹೃದಯವನ್ನೆಲ್ಲಾ ಅವಳಿಗೆ ತಿಳಿಸಿ ಅವಳಿಗೆ–ಕ್ಷೌರದ ಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ನನ್ನ ತಾಯಿಯ ಗರ್ಭ ದಲ್ಲಿಂದ ದೇವರಿಗೆ ನಾಜೀರನಾಗಿದ್ದೇನೆ. ನನ್ನ ತಲೆ ಯನ್ನು ಬೋಳಿಸಿದರೆ ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗುವದು; ನಾನು ಬಲಹೀನನಾಗಿ ಎಲ್ಲಾ ಮನುಷ್ಯರ ಹಾಗೆ ಇರುವೆನು ಅಂದನು.
18 ಅವನು ತನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆಂದು ದೆಲೀಲಳು ತಿಳಿದು ಅವಳು ಫಿಲಿಷ್ಟಿಯರ ಅಧಿಪತಿಗಳಿಗೆ–ನೀವು ಈ ಸಾರಿ ಬನ್ನಿರಿ; ಅವನು ತನ್ನ ಹೃದಯವನ್ನೆಲ್ಲಾ ನನಗೆ ತಿಳಿಸಿದನು ಎಂದು ಕರೇಕಳುಹಿಸಿದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಹಣವನ್ನು ತಮ್ಮ ಕೈಯಲ್ಲಿ ತಕ್ಕೊಂಡು ಅವಳ ಬಳಿಗೆ ಬಂದರು.
19 ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆಹೋಗುವಂತೆ ಮಾಡಿ ಒಬ್ಬನನ್ನು ಕರೆದು ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ ಅವನನ್ನು ಬಾಧಿ ಸುವದಕ್ಕೆ ಪ್ರಾರಂಭಿಸಿದಳು. ಆಗ ಅವನ ಶಕ್ತಿ ಅವ ನನ್ನು ಬಿಟ್ಟುಹೋಯಿತು.
20 ಅವಳು–ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು.

ಅರಸನಾದ ಸೌಲನ ಪ್ರಮಾಣ

1 ಸಮುವೇಲನು 14
24 ಆದರೆ ಇಸ್ರಾಯೇಲ್ಯರು ಆ ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು–ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು.
25 ದೇಶದ ಜನರೆಲ್ಲರು ಅಡವಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲೆ ಜೇನು ತುಪ್ಪ ಇತ್ತು.
26 ಜನರು ಆ ಅಡವಿಯಲ್ಲಿ ಹೋಗುವಾಗ ಇಗೋ, ಜೇನು ತುಪ್ಪ ಸುರಿಯುತ್ತಿತ್ತು; ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದ ರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ.
27 ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು.
28 ಆಗ ಜನರಲ್ಲಿ ಒಬ್ಬನು ಅವನಿಗೆ–ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.
29 ಅದಕ್ಕೆ ಯೋನಾ ತಾನನು–ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ. ಇಗೋ, ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು.
30 ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು.
31 ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.
32 ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು.
33 ಆಗ ಅವರು ಸೌಲನಿಗೆ–ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು–ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು.
34 ಸೌಲನು ಅವರಿಗೆ–ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು.
35 ಸೌಲನು ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಅವನು ಕಟ್ಟಿಸಿದ ಮೊದಲನೇ ಬಲಿಪೀಠವು.
36 ಸೌಲನು ಜನರಿಗೆ–ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು–ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು–ದೇವರ ಸನ್ನಿಧಿಗೆ ಹೋಗೋಣ ಅಂದನು.
37 ಸೌಲನು–ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ಆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು.
38 ಆಗ ಸೌಲನು–ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
39 ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ.
40 ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ–ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ–ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು.
41 ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ–ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು.
42 ಆದರೆ ಜನರು ಪಾರಾದರು. ಸೌಲನು ಅವರಿಗೆ–ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು.
43 ಆಗ ಸೌಲನು ಯೋನಾತಾನನಿಗೆ–ನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು. ಅದಕ್ಕೆ ಯೋನಾ ತಾನನು–ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು; ಇಗೋ, ನಾನು ಸಾಯಬೇಕು ಅಂದನು.
44 ಅದಕ್ಕೆ ಸೌಲನು–ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು.
45 ಆದರೆ ಜನರು ಸೌಲನಿಗೆ–ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.
46 ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.

ಯಾಕೋಬನ ಪ್ರಮಾಣ

ಆದಿಕಾಂಡ 28
10 ಆಗ ಯಾಕೋಬನು ಬೇರ್ಷೆಬದಿಂದ ಖಾರಾ ನಿನ ಕಡೆಗೆ ಹೊರಟನು.
11 ಅವನು ಒಂದು ಸ್ಥಳಕ್ಕೆ ಸೇರಿದಾಗ ಸೂರ್ಯಾಸ್ತಮಾನವಾದದ್ದರಿಂದ ಅಲ್ಲಿ ಇಳುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದುಕೊಂಡು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.
12 ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
13 ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ–ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.
14 ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.
15 ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ ಈ ದೇಶಕ್ಕೆ ನಿನ್ನನ್ನು ತಿರಿಗಿ ಬರಮಾಡುವೆನು. ಯಾಕಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವ ವರೆಗೆ ನಿನ್ನನ್ನು ಬಿಡುವದಿಲ್ಲ ಅಂದನು.
16 ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚತ್ತು–ನಿಶ್ಚಯವಾಗಿ ಈ ಸ್ಥಳದಲ್ಲಿ ಕರ್ತನು ಇದ್ದಾನೆ. ಇದನ್ನು ನಾನು ಅರಿಯಲಿಲ್ಲ ಅಂದನು.
17 ಅವನು ಭಯಪಟ್ಟು–ಈ ಸ್ಥಳವು ಎಷ್ಟೋ ಭಯಂಕರ ವಾದದ್ದು; ಇದು ದೇವರ ಮನೆಯೇ ಹೊರತು ಬೇರೆಯಲ್ಲ; ಇದೇ ಪರಲೋಕದ ಬಾಗಿಲು ಅಂದನು.
18 ಯಾಕೋಬನು ಬೆಳಿಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನೆಟ್ಟು ಅದರ ಮೇಲೆ ಎಣ್ಣೆಯನ್ನು ಹೊಯ್ದನು.
19 ಇದಲ್ಲದೆ ಅವನು ಆ ಸ್ಥಳಕ್ಕೆ ಬೇತೇಲ್‌ ಎಂದು ಹೆಸರಿಟ್ಟನು. ಆದರೆ ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ ಲೂಜ್‌ ಎಂದು ಹೆಸರಿತ್ತು.
20 ಆಗ ಯಾಕೋಬನು ಪ್ರಮಾಣಮಾಡಿ ಹೇಳಿದ್ದೇ ನಂದರೆ–ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ತಿನ್ನುವದಕ್ಕೆ ರೊಟ್ಟಿಯನ್ನೂ ಹೊದಿಯುವದಕ್ಕೆ ವಸ್ತ್ರ ವನ್ನೂ ನನಗೆ ಕೊಟ್ಟು
21 ನನ್ನನ್ನು ಸಮಾಧಾನ ವಾಗಿ ನನ್ನ ತಂದೆಯ ಮನೆಗೆ ತಿರಿಗಿ ಬರಮಾಡಿದರೆ ಕರ್ತನು ನನಗೆ ದೇವರಾಗಿರುವನು.
22 ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವದು. ಆಗ ನೀನು ನನಗೆ ಕೊಡುವದ ರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು ಅಂದನು.

ಗಿಬ್ಯೋನ್ಯರ ಪ್ರತೀಕಾರ

2 ಸಮುವೇಲನು 21
1 ದಾವೀದನ ದಿವಸಗಳಲ್ಲಿ ವರುಷದಿಂದ ವರುಷಕ್ಕೆ ಮೂರು ವರುಷ ಬರ ಉಂಟಾ ಗಿತ್ತು. ಆಗ ದಾವೀದನು ಕರ್ತನನ್ನು ವಿಚಾರಿಸಿದನು. ಕರ್ತನು–ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿ ದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಇದಾಗಿದೆ ಎಂದು ಹೇಳಿದನು.
ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್‌ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್‌ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್‌ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
ಆದದರಿಂದ ದಾವೀದನು ಗಿಬ್ಯೋನ್ಯರಿಗೆ–ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು.
ಆಗ ಗಿಬ್ಯೋನ್ಯರು ಅವನಿಗೆ–ಸೌಲನ ಕೈಯಿಂದಲಾದರೂ ಅವನ ಮನೆ ಯವರ ಕೈಯಿಂದಲಾದರೂ ನಮಗೆ ಬೆಳ್ಳಿಯಾದರೂ ಬಂಗಾರವಾದರೂ ಬೇಡ; ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕ ಬೇಕೆಂಬುವದು ನಮಗೆ ಅಗತ್ಯವಿಲ್ಲ ಅಂದರು. ಆಗ ಅವನು–ನೀವು ನನಗೆ ಏನು ಹೇಳುತ್ತೀರೋ ನಾನು ನಿಮಗೆ ಮಾಡುವೆನು ಅಂದನು.
ಅವರು ಅರಸನಿಗೆಯಾವನು ನಮ್ಮನ್ನು ಸಂಹರಿಸಿಬಿಟ್ಟು ನಾವು ಇಸ್ರಾ ಯೇಲಿನ ಎಲ್ಲಾ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ
ನಮಗೆ ಕೇಡುಮಾಡಲು ನೆನಸಿದನೋ ಅವನ ಕುಮಾರರಲ್ಲಿ ಏಳು ಮಂದಿ ನಮಗೆ ಒಪ್ಪಿಸಲ್ಪಡಲಿ. ಆಗ ನಾವು ಕರ್ತನು ಆದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಕರ್ತನಿಗೋಸ್ಕರ ಗಲ್ಲಿಗೆ ಹಾಕು ವೆವು ಅಂದರು. ಅದಕ್ಕೆ ಅರಸನು–ನಾನು ಒಪ್ಪಿಸಿ ಕೊಡುವೆನು ಅಂದನು.
ಆದರೆ ತಮಗೂ ದಾವೀದ ನಿಗೂ ಸೌಲನ ಮಗನಾದ ಯೋನಾತಾನನಿಗೂ ಕರ್ತ ನನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ
ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರ ಮಕ್ಕಳಾದ ಅರ್ಮೋನೀಯನ್ನೂ ಮೆಫೀಬೋ ಶೆತ ನನ್ನೂ ಸೌಲನ ಮಗಳಾಗಿರುವ ವಿಾಕಲಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರೀಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡುಕೊಂಡು
ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಕರ್ತನ ಮುಂದೆ ಬೆಟ್ಟದ ಮೇಲೆ ಗಲ್ಲಿಗೆ ಹಾಕಿದರು. ಹಾಗೆಯೇ ಈ ಏಳು ಮಂದಿಯೂ ಒಂದೇ ಸಾರಿ ಬಿದ್ದರು. ಜವೆ ಗೋಧಿಯ ಸುಗ್ಗಿಯ ದಿನದ ಪ್ರಾರಂಭದಲ್ಲಿ ಅವರು ಕೊಂದುಹಾಕಲ್ಪಟ್ಟರು.
10 ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತಕ್ಕೊಂಡುಹೋಗಿ ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಸುಗ್ಗಿಯ ದಿವಸ ಮೊದಲುಗೊಂಡು ಆಕಾಶದಿಂದ ಅವರ ಮೇಲೆ ಮಳೆ ಸುರಿಯುವ ವರೆಗೂ ಹಗಲಲ್ಲಿ ಆಕಾಶದ ಪಕ್ಷಿಗಳೂ ರಾತ್ರಿಯಲ್ಲಿ ಅಡವಿಯ ಮೃಗಗಳೂ ಅದರ ಮೇಲೆ ಕೂತುಕೊಳ್ಳದಂತೆ ಕಾಯುತ್ತಿದ್ದಳು.
11 ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲ್ಪಟ್ಟಿತು.
12 ಆಗ ದಾವೀದನು ಹೋಗಿ ಫಿಲಿಷ್ಟಿಯರು ಗಿಲ್ಬೋ ವದಲ್ಲಿ ಸೌಲನನ್ನು ಹೊಡೆದಾಗ ಬೆತ್ಸಾನಿನ ಬೀದಿ ಯಲ್ಲಿ ತೂಗು ಹಾಕಿದ ಗಿಲ್ಯಾದಿನ ಯಾಬೇಷ್‌ ಪಟ್ಟಣದವರು ಅಲ್ಲಿ ಹೋಗಿ ಕದ್ದು ಒಯ್ದ
13 ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಅವರಿಂದ ತಕ್ಕೊಂಡು ಅಲ್ಲಿಂದ ಬಂದು ಗಲ್ಲಿಗೆ ಹಾಕಲ್ಪಟ್ಟವರ ಎಲುಬುಗಳನ್ನೂ ಕೂಡಿಸಿ ಕೊಂಡು
14 ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ಬೆನ್ಯಾವಿಾನನ ದೇಶದ ಚೇಲಾದಲ್ಲಿರುವ ಅವನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಣಿಟ್ಟರು. ಅವರು ಅರಸನು ಆಜ್ಞಾ ಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ ದೇಶಕ್ಕೋಸ್ಕರ ದೇವರಿಗೆ ವಿಜ್ಞಾಪನೆ ಮಾಡಿದರು.

ಗಿಬ್ಯೋನ್ಯರ ಪ್ರಮಾಣ ವಿವರಿಸಲಾಗಿದೆ

ಯೆಹೋಶುವ 9
1 ಯೊರ್ದನಿಗೆ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದು ರಾದ ಮಹಾಸಮುದ್ರದ ಸಮಸ್ತ ಪ್ರಾಂತ್ಯಗಳಲ್ಲಿಯೂ ಇರುವ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀ ಯರ ಹಿವ್ವಿಯರ ಯೆಬೂಸಿಯರ ಅರಸುಗಳು ಇದನ್ನು ಕೇಳಿದಾಗ ಆದದ್ದೇನಂದರೆ,
ಅವರು ಯೆಹೋಶುವನ ಸಂಗಡವೂ ಇಸ್ರಾಯೇಲ್ಯರ ಸಂಗಡವೂ ಯುದ್ಧ ಮಾಡುವದಕ್ಕೆ ಒಟ್ಟಾಗಿ ಕೂಡಿಕೊಂಡರು.
ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ
ಒಂದು ತಂತ್ರವಾದ ಉಪಾಯವನ್ನು ಮಾಡಿ ರಾಯಭಾರಿಗಳ ಹಾಗೆ ತೋರಿಸುವಂತೆ ಹಳೇ ಗೋಣೀಚೀಲಗಳನ್ನೂ ತೇಪೆಹಾಕಿದ ಹಳೇದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು
ತೇಪೆಹಾಕಿದ ಹಳೇ ದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು, ಹಳೇ ಬಟ್ಟೆಗಳನ್ನು ತೊಟ್ಟುಕೊಂಡು ಒಣಗಿದ ರೊಟ್ಟಿ ಯನ್ನೂ ತೆಗೆದುಕೊಂಡು
ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಹೋಗಿ ಅವ ನಿಗೂ ಇಸ್ರಾಯೇಲ್ಯರಿಗೂ–ನಾವು ದೂರ ದೇಶ ದಿಂದ ಬಂದೆವು; ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಅಂದರು.
ಆಗ ಇಸ್ರಾಯೇಲ್‌ ಮನುಷ್ಯರು ಹಿವ್ವಿಯರಿಗೆ–ನೀವು ಒಂದು ವೇಳೆ ನಮ್ಮ ಮಧ್ಯದಲ್ಲಿ ವಾಸಿಸುವವರು ಆಗಿರಬಹುದು; ಆದರೆ ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವದು ಹೇಗೆ ಅಂದರು.
ಅದಕ್ಕವರು ಯೆಹೋಶುವನಿಗೆ–ನಾವು ನಿನ್ನ ಸೇವ ಕರು ಅಂದರು. ಆಗ ಯೆಹೋಶುವನು ಅವರಿಗೆ– ನೀವು ಯಾರು, ಎಲ್ಲಿಂದ ಬಂದಿರಿ ಅಂದನು.
ಅವರು ಅವನಿಗೆ–ನಿಮ್ಮ ದೇವರಾದ ಕರ್ತನ ಹೆಸರಿಗೋಸ್ಕರ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದೆವು. ಯಾಕಂದರೆ ಆತನ ಕೀರ್ತಿಯನ್ನೂ ಆತನು ಐಗುಪ್ತದಲ್ಲಿ ಮಾಡಿದ ಎಲ್ಲವನ್ನೂ
10 ಯೊರ್ದನಿಗೆ ಆಚೆಯಿರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ ಅಷ್ಟರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದೆವು.
11 ನಮ್ಮ ಹಿರಿಯರೂ ನಮ್ಮ ದೇಶ ನಿವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇ ನಂದರೆ–ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದು ಕೊಂಡು ಅವರೆದುರಿಗೆ ಹೋಗಿ ಅವರಿಗೆ–ನಾವು ನಿಮ್ಮ ಸೇವಕರು; ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಎಂದು ಹೇಳಿರಿ ಅಂದರು.
12 ನಾವು ನಿಮ್ಮ ಬಳಿಗೆ ಹೊರಟ ದಿನದಲ್ಲಿ ನಮ್ಮ ಪ್ರಯಾಣಕ್ಕೆ ಮನೆಯಿಂದ ಬಿಸಿ ರೊಟ್ಟಿಗಳನ್ನು ತೆಗೆದು ಕೊಂಡಿದ್ದೆವು; ಆದರೆ ಈಗ ಅವು ಒಣಗಿಹೋಗಿವೆ.
13 ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸವಾಗಿದ್ದವು. ಇಗೋ, ಅವು ಹರಿದುಹೋದವು. ಇದಲ್ಲದೆ ಪ್ರಯಾಣ ಬಹಳ ದೂರವಾದದರಿಂದ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಹಳೇವಾದವು ಅಂದರು.
14 ಆಗ ಇವರು ಕರ್ತನಿಂದ ಆಲೋಚನೆ ಯನ್ನು ಕೇಳದೆ ಅವರ ಆಹಾರದಲ್ಲಿ ತೆಗೆದುಕೊಂಡರು.
15 ಯೆಹೋಶುವನು ಅವರ ಸಂಗಡ ಸಮಾಧಾನ ಮಾಡಿಕೊಂಡು ಅವರನ್ನು ಜೀವದಿಂದ ಇರಿಸುವದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಪ್ರಮಾಣಮಾಡಿದರು.
16 ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ ತಮ್ಮಲ್ಲಿ ಇರುವವರೆಂದೂ ಕೇಳಿ ದರು.
17 ಇಸ್ರಾಯೇಲ್‌ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್‌, ಕೆಫೀರಾ, ಬೇರೋತ್‌, ಕಿರ್ಯತ್ಯಾರೀಮ್‌ ಎಂಬ ಅವರ ಪಟ್ಟಣ ಗಳಿಗೆ ಬಂದರು.
18 ಸಭೆಯ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಆಣೆ ಇಟ್ಟದ್ದರಿಂದ ಇಸ್ರಾಯೇಲ್‌ ಮಕ್ಕಳು ಅವರನ್ನು ಸಂಹರಿಸಲಿಲ್ಲ. ಆದರೆ ಸಭೆಯವರೆಲ್ಲರೂ ಇಸ್ರಾಯೇ ಲ್ಯರ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು.
19 ಆಗ ಸಕಲ ಪ್ರಧಾನರು ಎಲ್ಲಾ ಸಭೆಗೆ–ನಾವು ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಅವರಿಗೆ ಆಣೆ ಇಟ್ಟೆವು; ಆದದರಿಂದ ಅವರನ್ನು ನಾವು ಮುಟ್ಟಕೂಡದು.
20 ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.
21 ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು.
22 ತರುವಾಯ ಯೆಹೋಶುವನು ಅವರನ್ನು ಕರಿಸಿ ಅವರಿಗೆ–ನಮ್ಮ ಮಧ್ಯದಲ್ಲಿ ವಾಸವಾಗಿರುವ ನೀವು ನಮ್ಮನ್ನು ಮೋಸ ಗೊಳಿಸಿ ನಾವು ನಿಮಗೆ ಬಹಳ ದೂರವಾಗಿರುವ ವರೆಂದು ನಮ್ಮ ಸಂಗಡ ಹೇಳಿದ್ದೇನು?
23 ಈಗ ನೀವು ಶಪಿಸಲ್ಪಟ್ಟವರು; ನಿಮ್ಮಲ್ಲಿ ಒಬ್ಬನಾದರೂ ದಾಸತ್ವ ದಿಂದ ಬಿಡಿಸಲ್ಪಡುವದಿಲ್ಲ; ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರು ವಿರಿ ಎಂದು ಹೇಳಿದನು.
24 ಅದಕ್ಕವರು ಯೆಹೋಶುವ ನಿಗೆ–ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
25 ಈಗ ಇಗೋ, ನಾವು ನಿನ್ನ ಕೈಯಲ್ಲಿ ಇದ್ದೇವೆ; ನಿನ್ನ ದೃಷ್ಟಿಗೆ ಒಳ್ಳೇದಾಗಿಯೂ ಸರಿಯಾ ಗಿಯೂ ತೋಚುವ ಹಾಗೆ ನಮಗೆ ಮಾಡು ಎಂದು ಉತ್ತರ ಕೊಟ್ಟರು.
26 ಆ ಪ್ರಕಾರವೇಯೆಹೋಶುವನು ಅವರಿಗೆ ಮಾಡಿ ಇಸ್ರಾಯೇಲ್‌ ಮಕ್ಕಳು ಅವರನ್ನು ಕೊಂದುಹಾಕದ ಹಾಗೆ ಅವರನ್ನು ಇವರ ಕೈಯಿಂದ ತಪ್ಪಿಸಿ ಬಿಟ್ಟು
27 ಈ ವರೆಗೂ ಇರುವ ಹಾಗೆಯೇ ಅವರನ್ನು ಆ ದಿನದಲ್ಲಿ ಸಭೆಗೂ ಕರ್ತನು ಆದು ಕೊಳ್ಳುವ ಸ್ಥಳದಲ್ಲಿರುವ ಆತನ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಮಾಡಿದನು.

ಸಮುವೇಲನ ಮೇಲೆ ಹನ್ನಳ ಪ್ರಮಾಣ

1 ಸಮುವೇಲನು 1
ಎಫ್ರಾಯಾಮ್‌ ಬೆಟ್ಟದಲ್ಲಿರುವ ರಾಮಾತಯಿಮ್‌ ಚೊಫೀಮನಲ್ಲಿ ಎಲ್ಕಾನನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾ ಯಾಮ್ಯನಾದ ಚೂಫನ ಮೊಮ್ಮಗನೂ ತೋಹು ವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.
ಅವನಿಗೆ ಇಬ್ಬರು ಹೆಂಡತಿಯರಿದ್ದರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು, ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
ಅವನು ಸೈನ್ಯಗಳ ಕರ್ತ ನನ್ನು ಆರಾಧಿಸುವದಕ್ಕೂ ಆತನಿಗೆ ಬಲಿಯನ್ನು ಅರ್ಪಿಸುವದಕ್ಕೂ ಪ್ರತಿ ವರುಷ ತನ್ನ ಪಟ್ಟಣದಿಂದ ಶೀಲೋವಿಗೆ ಹೋಗುತ್ತಿದ್ದನು. ಕರ್ತನ ಯಾಜಕ ರಾದ ಹೊಫ್ನಿಯೂ ಫೀನೆಹಾಸನೂ ಎಂಬ ಏಲಿಯ ಮಕ್ಕಳಿಬ್ಬರು ಅಲ್ಲಿ ಇದ್ದರು.
ಎಲ್ಕಾನನು ಬಲಿಯನ್ನು ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿಯಾದ ಪೆನಿನ್ನಳಿಗೂ ಅವಳ ಎಲ್ಲಾ ಕುಮಾರರಿಗೂ ಕುಮಾರ್ತೆ ಯರಿಗೂ ಪಾಲನ್ನು ಕೊಟ್ಟನು.
ಹನ್ನಳಿಗೆ ಯೋಗ್ಯ ವಾದ ಪಾಲನ್ನು ಕೊಟ್ಟು ಹನ್ನಳನ್ನು ಪ್ರೀತಿಮಾಡಿ ದನು. ಆದರೆ ಕರ್ತನು ಅವಳ ಗರ್ಭವನ್ನು ಮುಚ್ಚಿ ದ್ದನು.
ಕರ್ತನು ಅವಳ ಗರ್ಭವನ್ನು ಮುಚ್ಚಿದ್ದರಿಂದ ಅವಳ ವಿರೋಧಿಯಾದವಳು ಅವಳಿಗೆ ಮನಗುಂದುವ ಹಾಗೆ ಬಹಳವಾಗಿ ಕೆಣಕಿ ಬಾಧಿಸಿದಳು.
ಹೀಗೆಯೇ ಅವನು ಪ್ರತಿಸಂವತ್ಸರದಲ್ಲಿಯೂ ಮಾಡಿದ್ದರಿಂದ ಇವಳು ಕರ್ತನ ಮನೆಗೆ ಹೋಗುತ್ತಿರುವಾಗ ಈ ಪ್ರಕಾರ ಹನ್ನಳನ್ನು ಬಾಧಿಸಿದ್ದರಿಂದ; ಅವಳು ಅತ್ತು ಊಟ ಮಾಡದೆ ಇದ್ದಳು.
ಆಗ ಅವಳ ಗಂಡನಾದ ಎಲ್ಕಾನನು ಅವಳಿಗೆ–ಹನ್ನಳೇ, ಯಾಕೆ ಅಳುತ್ತೀ? ಯಾಕೆ ತಿನ್ನದೆ ಇದ್ದೀ? ಯಾಕೆ ನಿನ್ನ ಹೃದಯದಲ್ಲಿ ದುಃಖಪಡುತ್ತಿದ್ದೀ? ಹತ್ತು ಮಂದಿ ಕುಮಾರರಿಗಿಂತ ನಾನು ನಿನಗೆ ಉತ್ತಮನಲ್ಲವೋ ಅಂದನು.
ಆಗ ಅವರು ಶೀಲೋವಿನಲ್ಲಿ ತಿಂದು ಕುಡಿದ ತರುವಾಯ ಹನ್ನಳು ಎದ್ದುಹೋದಳು. ಯಾಜಕನಾದ ಏಲಿಯು ಕರ್ತನ ಮಂದಿರದ ಸ್ತಂಭದ ಬಳಿಯಲ್ಲಿ ಆಸನದ ಮೇಲೆ ಕುಳಿತಿರುವಾಗ
10 ಅವಳು ಬಹಳ ಮನಗುಂದಿ ದವಳಾಗಿ ಕರ್ತನನ್ನು ಪ್ರಾರ್ಥಿಸಿ ಅತ್ತಳು.
11 ಆಕೆಯು ಒಂದು ಪ್ರಮಾಣವನ್ನು ಮಾಡಿ ಹೇಳಿದ್ದೇನಂದರೆಸೈನ್ಯಗಳ ಕರ್ತನೇ, ನೀನು ನಿಶ್ಚಯವಾಗಿ ನಿನ್ನ ದಾಸಿಯ ದೀನತೆಯನ್ನು ನೋಡಿ, ನಿನ್ನ ದಾಸಿಯನ್ನು ಮರೆ ಯದೆ, ನನ್ನನ್ನು ನೆನಸಿ, ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರ ಕತ್ತಿ ಬೀಳುವದಿಲ್ಲ ಅಂದಳು.
12 ಅವಳು ಕರ್ತನ ಮುಂದೆ ಹೆಚ್ಚಾಗಿ ಪ್ರಾರ್ಥನೆ ಮಾಡುತ್ತಿರುವಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು.
13 ಹನ್ನಳು ತನ್ನ ಹೃದಯದಲ್ಲೇ ಮಾತನಾಡುತ್ತಾ ತನ್ನ ತುಟಿಗಳನ್ನು ಮಾತ್ರ ಆಡಿಸುತ್ತಾ ಇದ್ದದರಿಂದ ಅವಳ ಶಬ್ದವು ಕೇಳಲ್ಪಡದೆ ಇತ್ತು. ಆದದರಿಂದ, ಅವಳು ಅಮಲೇರಿದವಳಾಗಿದ್ದಾಳೆಂದು ಏಲಿಯು ನೆನಸಿದನು.
14 ಏಲಿಯು ಅವಳಿಗೆ–ಎಷ್ಟರ ವರೆಗೆ ಅಮಲೇರಿದವಳಾಗಿರುವಿ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟು ಹೋಗಲಿ ಅಂದನು.
15 ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.
16 ನಿನ್ನ ದಾಸಿಯನ್ನು ಬೆಲಿಯಾಳನ ಮಗಳೆಂದು ನೆನಸಬೇಡ; ಯಾಕಂದರೆ ನನ್ನ ಹೆಚ್ಚಾದ ಚಿಂತೆಯಿಂದಲೂ ದುಃಖದಿಂದಲೂ ಈ ವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು ಅಂದಳು.
17 ಆಗ ಏಲಿಯು ಅವಳಿಗೆ ಪ್ರತ್ಯುತ್ತರವಾಗಿ–ಸಮಾಧಾನ ದಿಂದ ಹೋಗು; ಇಸ್ರಾಯೇಲಿನ ದೇವರು, ಆತನಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯನ್ನು ನಿನಗೆ ಕೊಡಲಿ ಅಂದನು.
18 ಅದಕ್ಕವಳು–ನಿನ್ನ ಸೇವಕಳಿಗೆ ನಿನ್ನ ದೃಷ್ಟಿಯಲ್ಲಿ ಕೃಪೆ ತೋರಲಿ ಅಂದಳು. ಆ ಸ್ತ್ರೀಯು ಹೊರಟುಹೋಗಿ ಊಟ ಮಾಡಿದಳು; ಆ ಮೇಲೆ ಅವಳ ಮುಖದಲ್ಲಿ ದುಃಖವು ಕಾಣಲಿಲ್ಲ.
19 ಅವರು ಉದಯದಲ್ಲಿ ಎದ್ದು ಕರ್ತನ ಮುಂದೆ ಆರಾಧಿಸಿ ಹಿಂತಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಿದನು; ಆಗ ಕರ್ತನು ಅವಳನ್ನು ಜ್ಞಾಪಕಮಾಡಿಕೊಂಡನು.
20 ಹನ್ನಳು ಗರ್ಭವತಿ ಯಾಗಿ ಕಾಲವು ಪೂರ್ತಿಯಾದ ತರುವಾಯ ಆದದ್ದೇ ನಂದರೆ, ಅವಳು ಮಗನನ್ನು ಹೆತ್ತು–ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು.
21 ಆದರೆ ಎಲ್ಕಾನನು ಕರ್ತನಿಗೆ ಪ್ರತಿ ವರುಷದ ಬಲಿಯನ್ನೂ ತನ್ನ ಪ್ರಮಾಣವನ್ನೂ ಸಲ್ಲಿಸುವದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ ಹನ್ನಳು ಹೋಗದೆ ತನ್ನ ಗಂಡನಿಗೆ–ಮಗುವು ಮೊಲೆ ಬಿಡುವ ವರೆಗೂ ನಾನು ಬರುವದಿಲ್ಲ;
22 ಅವನು ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಅಲ್ಲಿ ಎಂದೆಂದಿಗೂ ಇರುವದಕ್ಕೆ ನಾನು ಅವನನ್ನು ಆಗ ತಕ್ಕೊಂಡು ಬರುವೆನು ಅಂದಳು.
23 ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ–ನೀನು ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವ ಹಾಗೆ ಮಾಡು. ಅವನು ಮೊಲೆ ಬಿಡುವವರೆಗೂ ಕಾದುಕೊಂಡಿರು. ಕರ್ತನು ತನ್ನ ವಾಕ್ಯವನ್ನು ಸ್ಥಿರಮಾಡಲಿ ಅಂದನು. ಹಾಗೆಯೇ ಅವಳು ಉಳಿದು ತನ್ನ ಮಗುವು ಮೊಲೆ ಬಿಡುವವರೆಗೂ ಅವನಿಗೆ ಮೊಲೆ ಕೊಡುತ್ತಿದ್ದಳು.
24 ಅವಳು ಮೊಲೆ ಬಿಡಿಸಿದ ತರುವಾಯ ಅವನನ್ನು ತನ್ನ ಸಂಗಡ ತೆಗೆದುಕೊಂಡು ಮೂರು ಹೋರಿಗಳನ್ನೂ ಒಂದು ಎಫದ ಹಿಟ್ಟನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಕರ್ತನ ಮನೆಗೆ ಹೋದಳು.
25 ಆಗ ಆ ಮಗುವು ಚಿಕ್ಕದಾಗಿತ್ತು. ಅವರು ಒಂದು ಹೋರಿಯನ್ನು ಕೊಯ್ದ ತರುವಾಯ ಮಗುವನ್ನು ಏಲಿಯನ ಬಳಿಗೆ ತಂದರು.
26 ಅವಳು ಹೇಳಿದ್ದೇನಂದರೆ–ನನ್ನ ಒಡೆಯನೇ, ನಿನ್ನ ಪ್ರಾಣದ ಸಾಕ್ಷಿ, ನನ್ನ ಒಡೆಯನೇ, ಕರ್ತನಿಗೆ ಪ್ರಾರ್ಥನೆಮಾಡಿ ಇಲ್ಲಿ ನಿನ್ನ ಬಳಿಯಲ್ಲಿ ನಿಂತಿದ್ದ ಸ್ತ್ರೀಯು ನಾನೇ. ಈ ಮಗುವಿಗೋಸ್ಕರ ಪ್ರಾರ್ಥನೆ ಮಾಡಿದೆನು.
27 ನಾನು ಕರ್ತನಿಗೆ ಮಾಡಿದ ವಿಜ್ಞಾಪನೆಯಂತೆ ಆತನು ನನಗೆ ಕೊಟ್ಟನು.
28 ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.

ಯೋನನು ತನ್ನ ಪ್ರಮಾಣವನ್ನು ಪೂರೈಸುತ್ತಾನೆ

ಯೋನ 2
1 ಆಗ ಯೋನನು ವಿಾನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ–
ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ.
ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು.
ಆಗ ನಾನು ಹೇಳಿದ್ದು–ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು.
ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು.
ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
ನನ್ನ ಪ್ರಾಣವು ನನ್ನಲ್ಲಿ ಕುಂದಿಹೋದಾಗ ಕರ್ತನನ್ನು ಜ್ಞಾಪಕ ಮಾಡಿಕೊಂಡೆನು; ನನ್ನ ಪ್ರಾರ್ಥನೆಯು ನಿನ್ನ ಬಳಿಗೆ ನಿನ್ನ ಪರಿಶುದ್ಧ ಮಂದಿರದೊಳಗೆ ಬಂತು.
ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
ಆದರೆ ನಾನು ಸ್ತೋತ್ರದ ಸ್ವರದಿಂದ ನಿನಗೆ ಬಲಿಅರ್ಪಿಸು ವೆನು; ನಾನು ಮಾಡಿದ ಪ್ರಮಾಣವನ್ನು ತೀರಿಸುವೆನು; ರಕ್ಷಣೆಯು ಕರ್ತನದೇ ಎಂದು ಹೇಳಿದನು.
10 ಆಗ ಕರ್ತನು ಆ ವಿಾನಿಗೆ ಹೇಳಿದ್ದರಿಂದ ಅದು ಯೋನನನ್ನು ಒಣ ಭೂಮಿಯ ಮೇಲೆ ಕಾರಿಬಿಟ್ಟಿತು.

ಪೌಲನ ಪ್ರಮಾಣ

ಅಪೊಸ್ತಲರ ಕೃತ್ಯಗಳು 18
18 ಪೌಲನಿಗೆ ಹರಕೆಯಿದ್ದ ಕಾರಣ ಕೆಂಖ್ರೆಯದಲ್ಲಿ ತಲೆಬೋಳಿಸಿಕೊಂಡು ಅವನು ಅಲ್ಲಿ ಬಹಳ ಕಾಲ ಇದ್ದ ಮೇಲೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ಪ್ರಿಸ್ಕಿಲ್ಲ ಅಕ್ವಿಲ್ಲರ ಕೂಡ ಅಲ್ಲಿಂದ ಸಿರಿಯಾಕ್ಕೆ ಸಮುದ್ರ ಪ್ರಯಾಣಮಾಡಿ

ಅಪೊಸ್ತಲರ ಕೃತ್ಯಗಳು 21
17 ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು.
18 ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು.
19 ಅವನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕ ದೇವರು ಪ್ರತ್ಯೇಕವಾಗಿ ಅನ್ಯ ಜನರಲ್ಲಿ ಎಂಥ ಕಾರ್ಯಗಳನ್ನು ಮಾಡಿಸಿದನೆಂದು ವಿವರಿಸಿದನು.
20 ಅವರು ಅದನ್ನು ಕೇಳಿ ಕರ್ತನನ್ನು ಮಹಿಮೆಪಡಿಸಿ ಅವನಿಗೆ–ಸಹೋದರನೇ, ವಿಶ್ವಾಸಿ ಗಳಾದ ಯೆಹೂದ್ಯರು ಎಷ್ಟೋ ಸಾವಿರ ಮಂದಿ ಇದ್ದಾರೆಂಬದನ್ನು ನೀನು ನೋಡುತ್ತೀಯಲ್ಲಾ. ಅವರೆಲ್ಲರೂ ನ್ಯಾಯಪ್ರಮಾಣದ ವಿಷಯದಲ್ಲಿ ಅಭಿಮಾನವುಳ್ಳವರಾಗಿದ್ದಾರೆ.
21 ಅವರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬಾರದೆಂದೂ ಆಚಾರಗಳ ಪ್ರಕಾರ ನಡೆಯಬಾರದೆಂದೂ ಹೇಳುತ್ತಾ ಮೋಶೆ ಬರೆದದ್ದನ್ನು ತ್ಯಜಿಸಬೇಕೆಂದು ಅನ್ಯಜನರಲ್ಲಿರುವ ಯೆಹೂದ್ಯರಿಗೆ ನೀನು ಬೋಧಿಸುತ್ತಿದ್ದೀ ಎಂಬದಾಗಿ ನಿನ್ನ ವಿಷಯದಲ್ಲಿ ಅವರು ಕೇಳಿದ್ದಾರೆ.
22 ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು.
23 ಆದಕಾರಣ ನಾವು ನಿನಗೆ ಹೇಳುವದನ್ನು ಮಾಡು; ನಮ್ಮಲ್ಲಿ ಪ್ರಮಾಣ ಮಾಡಿದ ನಾಲ್ಕು ಮಂದಿ ಇದ್ದಾರೆ.
24 ನೀನು ಅವರನ್ನು ಕರೆದುಕೊಂಡು ಹೋಗಿ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವಂತೆ ನೀನೂ ಅವ ರೊಂದಿಗೆ ನಿನ್ನನ್ನು ಶುದ್ಧಮಾಡಿಕೊಂಡು ಅವರಿ ಗೋಸ್ಕರ ವೆಚ್ಚಮಾಡು; ಆಗ ನಿನ್ನ ವಿಷಯವಾಗಿ ಅವರು ಕೇಳಿದವುಗಳು ಏನೂ ಅಲ್ಲವೆಂದೂ ನೀನು ಸಹ ಕ್ರಮವಾಗಿ ನಡೆಯುತ್ತಾ ನ್ಯಾಯಪ್ರಮಾಣ
25 ನಂಬಿರುವ ಅನ್ಯಜನರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವೆಂದು ಹೇಳಿದರು.
26 ಆಗ ಪೌಲನು ಆ ಮನುಷ್ಯರನ್ನು ಕರೆದು ಕೊಂಡು ಮರುದಿನ ಅವರೊಂದಿಗೆ ತನ್ನನ್ನು ಶುದ್ಧಮಾಡಿಕೊಂಡು ಅವರಲ್ಲಿ ಪ್ರತಿಯೊಬ್ಬನಿಗಾಗಿ ಅರ್ಪಣೆಯನ್ನು ಸಮರ್ಪಿಸುವ ವರೆಗೆ ಶುದ್ಧೀಕರಣದ ದಿವಸಗಳು ಪೂರೈಸಲ್ಪಟ್ಟವೆಂದು ಸೂಚಿಸುವಂತೆ ದೇವಾಲಯದಲ್ಲಿ ಪ್ರವೇಶಿಸಿದನು.

ಪ್ರಮಾಣದ ನೆರವೇರಿಕೆಯ ನಂತರ ಆಚರಣೆಯ ಕೀರ್ತನೆಗಳು

ಕೀರ್ತನೆಗಳು 65
1 ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾ ಣವು ಸಲ್ಲಿಸಲ್ಪಡುವದು.
ಪ್ರಾರ್ಥನೆಯನ್ನು ಕೇಳು ವಾತನೇ, ನಿನ್ನ ಬಳಿಗೆ ಎಲ್ಲಾ ಜನರು ಬರುವರು.
ಅಕ್ರಮಗಳು ನನಗೆ ವಿರೋಧವಾಗಿ ಬಲಗೊಂಡಿವೆ; ನಮ್ಮ ದ್ರೋಹಗಳನ್ನಾದರೋ ನೀನು ತೊಳೆದು ಬಿಡುವಿ.
ನೀನು ಆದುಕೊಂಡು ನಿನ್ನ ಬಳಿಗೆ ಬರ ಮಾಡಿಕೊಳ್ಳುವವನು ಧನ್ಯನು; ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿನ್ನ ಪರಿಶುದ್ಧ ಮಂದಿರ ವಾದ ನಿನ್ನ ಆಲಯದ ಒಳ್ಳೇದರಿಂದ ನಾವು ತೃಪ್ತರಾಗುವೆವು.
ನಮ್ಮ ರಕ್ಷಣೆಯ ಓ ದೇವರೇ, ಭಯಂಕರವಾದ ವುಗಳಿಂದ ನೀತಿಯಲ್ಲಿ ನೀನು ನಮಗೆ ಉತ್ತರ ಕೊಡುವಿ; ಭೂಮಿಯ ಎಲ್ಲಾ ಅಂತ್ಯಗಳಿಗೂ ಸಮುದ್ರ ದಲ್ಲಿ ದೂರವಾದವರಿಗೂ ನೀನು ಭರವಸವಾಗಿದ್ದೀ.
ಬೆಟ್ಟಗಳನ್ನು ತನ್ನ ಶಕ್ತಿಯಿಂದ ನಿಲ್ಲಿಸುವಾತನೇ, ಪರಾಕ್ರಮದಿಂದ ನಡುಕಟ್ಟಿಕೊಂಡಾತನೇ,
ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರು ಸಹ ನಿನ್ನ ಗುರುತುಗಳಿಗೆ ಭಯಪಡುವರು. ಉದಯಾಸ್ತ ಮಾನ ಸಮಯಗಳನ್ನು ಉತ್ಸಾಹಧ್ವನಿಗೈಯುವಂತೆ ನೀನು ಮಾಡುತ್ತೀ.
ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.
10 ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ.
11 ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ.
12 ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.
13 ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.

ಕೀರ್ತನೆಗಳು 66
1 ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;
ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
ದೇವರಿಗೆ–ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.
ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.
ಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.
ಓ ಜನರೇ, ನೀವು ದೇವರನ್ನು ಸ್ತುತಿಸಿರಿ; ಆತನ ಸ್ತೊತ್ರದ ಸ್ವರವು ಕೇಳಲ್ಪಡುವಂತೆ ಮಾಡಿರಿ.
ಆತನು ನಮ್ಮ ಪ್ರಾಣವನ್ನು ಜೀವದಲ್ಲಿಟ್ಟು ನಮ್ಮ ಪಾದಗಳನ್ನು ಕದಲುವಂತೆ ಬಿಡಲಿಲ್ಲ.
10 ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.
11 ನೀನು ಬಲೆಯೊಳಗೆ ನಮ್ಮನ್ನು ಬರಮಾಡಿದ್ದಲ್ಲದೆ ನಮ್ಮ ಸೊಂಟಗಳ ಮೇಲೆ ವ್ಯಥೆಯನ್ನು ಹೊರಿಸಿದ್ದೀ;
12 ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;
13 ನಾನು ದಹನ ಬಲಿಗಳೊಂದಿಗೆ ನಿನ್ನ ಆಲಯಕ್ಕೆ ಹೋಗುವೆನು.
14 ನನ್ನ ಇಕ್ಕಟ್ಟಿನಲ್ಲಿ ತುಟಿಗಳು ಉಚ್ಚರಿಸಿದಂಥ, ಬಾಯಿ ನುಡಿದಂಥ, ಹರಕೆಗಳನ್ನು ನಾನು ನಿನಗೆ ಸಲ್ಲಿಸುವೆನು.
15 ಕೊಬ್ಬಿದ ದಹನಬಲಿಗಳನ್ನು ಟಗರುಗಳ ಧೂಪದ ಸಂಗಡ ನಿನಗೆ ಅರ್ಪಿಸುವೆನು; ಹೋತಗಳ ಸಂಗಡ ಎತ್ತುಗಳನ್ನು ಅರ್ಪಿಸುವೆನು. ಸೆಲಾ.
16 ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
17 ನನ್ನ ಬಾಯಿಂದ ಆತನನ್ನು ಕೂಗಿದೆನು; ನನ್ನ ನಾಲಿಗೆಯಿಂದ ಆತನನ್ನು ಉನ್ನತಪಡಿಸಿದೆನು.
18 ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ.
19 ಆದರೆ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನಲ್ಲಾ! ಆತನು ನನ್ನ ಪ್ರಾರ್ಥನೆಯ ಸ್ವರವನ್ನು ಆಲೈಸಿದ್ದಾನಲ್ಲಾ!
20 ನನ್ನ ಪ್ರಾರ್ಥನೆಯನ್ನೂ ನನ್ನ ಬಳಿಯಿಂದ ತನ್ನ ಕರುಣೆಯನ್ನೂ ತೊಲಗಿಸದೆ ಇರುವ ದೇವರಿಗೆ ಸ್ತೋತ್ರವಾಗಲಿ.

ಕೀರ್ತನೆಗಳು 116
17 ನಾನು ನಿನಗೆ ಸ್ತೋತ್ರದ ಬಲಿಯನ್ನು ಅರ್ಪಿಸುವೆನು; ಕರ್ತನ ಹೆಸರನ್ನು ಕರೆಯುವೆನು.
18 ಓ ಯೆರೂಸಲೇಮೇ, ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ,
19 ಅಂದರೆ ಕರ್ತನ ಆಲ ಯದ ಅಂಗಳಗಳ ಮಧ್ಯದಲ್ಲಿಯೇ ನಿನಗೆ ಸಲ್ಲಿಸು ವೆನು. ಕರ್ತನನ್ನು ಸ್ತುತಿಸಿರಿ.

 

 
 

Related Quiz Articles